ಇಟಿಎಫ್‌ ಅನ್ನು ಹೇಗೆ ನಾವು ಆಯ್ಕೆ ಮಾಡಿಕೊಳ್ಳಬೇಕು?

ಇಟಿಎಫ್‌ ಅನ್ನು ಹೇಗೆ ನಾವು ಆಯ್ಕೆ ಮಾಡಿಕೊಳ್ಳಬೇಕು?

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ಇತರ ಹೂಡಿಕೆಯಂತೆಯೇ ಇಟಿಎಫ್ ಅನ್ನು ಆಯ್ಕೆ ಮಾಡುವುದು ನಿಮ್ಮ ಅಗತ್ಯ ಸ್ವತ್ತು ನಿಯೋಜನೆ, ಹಣಕಾಸು ಗುರಿ, ರಿಸ್ಕ್ ಆದ್ಯತೆ ಮತ್ತು ಸಮಯ ವಲಯವನ್ನು ಅವಲಂಬಿಸಿರುತ್ತದೆ. ಇಟಿಎಫ್‌ ಅನ್ನು ಆಯ್ಕೆ ಮಾಡುವುದು ನಿಮ್ಮ ಪೋರ್ಟ್‌ಫೋಲಿಯೋದಲ್ಲಿ ಯಾವ ರೀತಿಯ ಅಸೆಟ್ ಅಲೊಕೇಶನ್‌ ಮಾಡಲು ನೀವು ಬಯಸಿದ್ದೀರಿ ಎಂಬುದನ್ನು ಅಧರಿಸಿದೆ. ಯಾಕೆಂದರೆ, ಈಕ್ವಿಟಿ, ಬಾಂಡ್‌, ರಿಯಲ್ ಎಸ್ಟೇಟ್, ಕಮಾಡಿಟೀಸ್‌ ಸೇರಿದಂತೆ ಹಲವು ಅಸೆಟ್ ಕ್ಲಾಸ್‌ಗಳಿಗೆ ಇಟಿಎಫ್‌ಗಳು ಲಭ್ಯವಿರುತ್ತವೆ. ಇಟಿಎಫ್‌ಗೆ ಮೊದಲು ಅಸೆಟ್ ಕ್ಲಾಸ್ ಅನ್ನು ನಿರ್ಧರಿಸಿ.

ನೀವು ಮಾಡಬೇಕಿರುವ ವೈವಿಧ್ಯತೆ ಮತ್ತು ನೀವು ಟ್ರ್ಯಾಕ್ ಮಾಡಬೇಕಿರುವ ಇಂಡೆಕ್ಸ್ ಬಗ್ಗೆ ನಿರ್ಧಾರ ಮಾಡಿ. ಕಡಿಮೆ ರಿಸ್ಕ್‌ನೊಂದಿಗೆ ಗರಿಷ್ಠ ವೈವಿಧ್ಯತೆಯನ್ನು ಸಾಧಿಸುವುದಕ್ಕೆ ವಿಶಾಲವಾದ ಮಾರ್ಕೆಟ್  ಇಂಡೆಕ್ಸ್ ಅನ್ನು ಟ್ರ್ಯಾಕ್ ಮಾಡುವ ಇಟಿಎಫ್‌ಸೂಕ್ತ. ನೀವು ರಿಸ್ಕ್ ತೆಗೆದುಕೊಳ್ಳಲು ಬಯಸಿದ್ದು, ಸ್ಥಾಪಿತ ಮಾರುಕಟ್ಟೆ ವಲಯಗಳು, ಸೆಕ್ಟರ್‌ಗಳು ಅಥವಾ ದೇಶಗಳಿಗೆ ಎಕ್ಸ್‌ಪೋಶರ್ ಬೇಕಿದ್ದರೆ ನಿರ್ದಿಷ್ಟ ಇಟಿಎಫ್‌ಆಯ್ಕೆ ಮಾಡಿ. ಇದು ನಿಮಗೆ ನೀಡುವ ಎಕ್ಸ್‌ಪೋಶರ್‌ಅನ್ನು ತಿಳಿದುಕೊಳ್ಳಲು ಇಟಿಎಫ್‌ನ ಪೋರ್ಟ್‌ಫೋಲಿಯೋ ನೋಡಿ.

ನೀವು ಫಾಲೋ ಮಾಡಲು ಬಯಸುವ ಅಸೆಟ್ ಕ್ಲಾಸ್ ಮತ್ತು ಮಾರ್ಕೆಟ್ ಸೆಗ್ಮೆಂಟ್‌ನಲ್ಲಿ ಕಡಿಮೆ ಟ್ರ್ಯಾಕಿಂಗ್‌ ಎರರ್‌ ಹೊಂದಿರುವ ಇಟಿಎಫ್‌ ಆಯ್ಕೆ ಮಾಡಿ. ಕಡಿಮೆ ಟ್ರೇಡ್ ಆಗುವ ಇಟಿಎಫ್‌ಗಳನ್ನು ದೂರವಿಡಿ. ಯಾಕೆಂದರೆ, ಇವು ಹೆಚ್ಚಿನ ಬಿಡ್‌/ಆಸ್ಕ್ ವ್ಯತ್ಯಾಸವನ್ನು ಹೊಂದಿರುತ್ತವೆ ಮತ್ತು ನಿಮ್ಮ ಟ್ರೇಡಿಂಗ್ ವೆಚ್ಚ ಹೆಚ್ಚು ಹೊಂದಿರುತ್ತವೆ ಮತ್ತು ನಿಮ್ಮ ಇಟಿಎಫ್‌ನಿಂದ ರಿಟರ್ನ್ಸ್ ಅನ್ನು ಕಡಿಮೆ ಮಾಡುತ್ತವೆ.
ಸಣ್ಣ ಮಾರ್ಕೆಟ್‌ ಸೆಗ್ಮೆಂಟ್‌ಗಳನ್ನು ಟ್ರ್ಯಾಕಿಂಗ್ ಮಾಡುವ ಅಥವಾ ಕಡಿಮೆ ಮಟ್ಟದ ಅಸೆಟ್‌ಗಳನ್ನು ಹೊಂದಿರುವ (ಎಯುಎಂ) ಇಟಿಎಫ್‌ಗಳು ಕಡಿಮೆ ಲಿಕ್ವಿಡ್ ಆಗಿರುತ್ತವೆ ಮತ್ತು ಅವುಗಳ ಎನ್‌ಎವಿಗೆ ಸೂಕ್ತವಾದ ಬೆಲೆಯಲ್ಲಿ ಟ್ರೇಡ್ ಮಾಡುತ್ತಿರುವುದಿಲ್ಲ. ತಮ್ಮ ಎನ್‌ಎವಿಗಳಿಗೆ ಸಮೀಪದಲ್ಲಿ ಟ್ರೇಡ್ ಮಾಡುವ ಇಟಿಎಫ್‌ಗಳನ್ನು ನೋಡಿ.

436
ನಾನು ಹೂಡಿಕೆ ಮಾಡಲು ಸಿದ್ಧ