ನಾನು ಎಲ್ಲ ದಿನಗಳಲ್ಲೂ ಹಣವನ್ನು ತೆಗೆಯಬಹುದೇ ಅಥವಾ ಕೇವಲ ನಿರ್ದಿಷ್ಟ ದಿನಗಳಲ್ಲಿ ಹಣ ತೆಗೆಯಬಹುದೇ?

ನಾನು ಎಲ್ಲ ದಿನಗಳಲ್ಲೂ ಹಣವನ್ನು ತೆಗೆಯಬಹುದೇ ಅಥವಾ ಕೇವಲ ನಿರ್ದಿಷ್ಟ ದಿನಗಳಲ್ಲಿ ಹಣ ತೆಗೆಯಬಹುದೇ?

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ಓಪನ್ ಎಂಡ್ ಫಂಡ್‌ ಎಲ್ಲ ವಹಿವಾಟು ದಿನಗಳಲ್ಲೂ ರಿಡೆಂಪ್ಷನ್‌ಗಳಿಗೆ ಅನುವು ಮಾಡುತ್ತದೆ. ವಹಿವಾಟು ನಡೆಯದ ದಿನದಂದು ಅಥವಾ ನಿಗದಿತ ಕಟ್ ಆಫ್‌ ಸಮಯದ ನಂತರ ಅಂದರೆ ಸಂಜೆ 3 ಗಂಟೆಯ ನಂತರ ಹೂಡಿಕೆ ಸೇವೆ ಕೇಂದ್ರಕ್ಕೆ ರಿಡೆಂಪ್ಷನ್‌ ವಿನಂತಿಯನ್ನು ಹಸ್ತಾಂತರಿಸಿದರೆ, ಆಗ ನಂತರದ ವಹಿವಾಟು ದಿನದಂದು ಪ್ರಕ್ರಿಯೆಗೊಳಿಸಲಾಗುತ್ತದೆ. ಆ ದಿನದ ನೆಟ್ ಅಸೆಟ್ ವ್ಯಾಲ್ಯೂ (ಎನ್‌ಎವಿ) ಆಧರಿಸಿ ರಿಡೆಂಪ್ಷನ್‌ಗಳನ್ನು ಪ್ರಕ್ರಿಯೆಗೊಳಿಸಲಾಗುತ್ತದೆ. ಎಲ್ಲ ರಿಡೆಂಪ್ಷನ್‌ ಪ್ರಕ್ರಿಯೆಗಳನ್ನೂ ಹೂಡಿಕೆದಾರರ ಬ್ಯಾಂಕ್‌ ಖಾತೆಗೆ ನಿಗದಿತ ಸಮಯದಲ್ಲಿ, ಅಂದರೆ 10 ವಹಿವಾಟು ದಿನಗಳಲ್ಲಿ ಕ್ರೆಡಿಟ್ ಮಾಡಲಾಗುತ್ತದೆ.

ಸ್ಕೀಮ್‌ನ ಫಾಲಿಯೋ ಸಂಖ್ಯೆಯನ್ನು ಸ್ಪಷ್ಟವಾಗಿ ನಮೂದಿಸಿ ಸಹಿ ಮಾಡಿದ ರಿಡೆಂಪ್ಷನ್ ವಿನಂತಿಯನ್ನು ಹಸ್ತಾಂತರಿಸುವ ಮೂಲಕ ರಿಡೆಂಪ್ಷನ್‌ಗಳನ್ನು ಮಾಡಬಹುದು. ಹೂಡಿಕೆದಾರರು ಅಗತ್ಯ ಸೆಕ್ಯುರಿಟಿ ಕೋಡ್‌ಗಳನ್ನು ಹೊಂದಿದ್ದರೆ ಅನುಮೋದಿಸಿದ ಆನ್‌ಲೈನ್‌ ಪ್ಲಾಟ್‌ಫಾರಂಗಳಲ್ಲೂ ರಿಡೆಂಪ್ಷನ್‌ಗಳನ್ನು ಮಾಡಬಹುದು.

ಈಕ್ವಿಟಿ ಲಿಂಕ್ಡ್ ಸೇವಿಂಗ್ಸ್ ಸ್ಕೀಮ್‌ಗಳಲ್ಲಿ (ಇಎಲ್‌ಎಸ್‌ಎಸ್‌) ಮಾಡಿದ ಹೂಡಿಕೆಯ ಮೇಲೆ 3 ವರ್ಷಗಳ ಲಾಕ್ ಇನ್‌ ಅವಧಿ ಇದ್ದು, ಇದರ ನಂತರ ಯಾವುದೇ ವಹಿವಾಟು ದಿನಗಳಲ್ಲಿ ರಿಡೀಮ್ ಮಾಡಿಕೊಳ್ಳಬಹುದಾಗಿದೆ

ವಿಶೇಷ ಸನ್ನಿವೇಶಗಳಲ್ಲಿ ಮಾತ್ರ ರಿಡೆಂಪ್ಷನ್‌ಗಳನ್ನು ನಿರ್ಬಂಧಿಸಬಹುದು. ಲಿಕ್ವಿಡಿಟಿ ಸಮಸ್ಯೆ, ಬಂಡವಾಳ ಮಾರುಕಟ್ಟೆ ಮುಚ್ಚಿರುವುದು, ಕಾರ್ಯಾಚರಣೆಯ ಬಿಕ್ಕಟ್ಟು ಅಥವಾ ಸೆಬಿ ನಿರ್ದೇಶನವಿದ್ದಾಗ ಟ್ರಸ್ಟಿಗಳ ಮಂಡಳಿಯ ಅನುಮತಿ ಪಡೆದು ನಿರ್ಬಂಧವನ್ನು ಎಎಂಸಿ ವಿಧಿಸಬಹುದು. ಇಂತಹ ಸನ್ನಿವೇಶಗಳು ಅತ್ಯಂತ ವಿರಳ ಎಂಬುದನ್ನು ದಯವಿಟ್ಟು ಗಮನಿಸಿ.

440
ನಾನು ಹೂಡಿಕೆ ಮಾಡಲು ಸಿದ್ಧ