ಕಾಲಕಾಲಕ್ಕೆ ನಾನು ನನ್ನ ಹೂಡಿಕೆಯನ್ನು ಹೇಗೆ ಟ್ರ್ಯಾಕ್‌ ಮಾಡಬಹುದು?

ಕಾಲಕಾಲಕ್ಕೆ ನಾನು ನನ್ನ ಹೂಡಿಕೆಯನ್ನು ಹೇಗೆ ಟ್ರ್ಯಾಕ್‌ ಮಾಡಬಹುದು? zoom-icon

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ನನ್ನ ಹೂಡಿಕೆಯ ಪ್ರಗತಿಯನ್ನು ಟ್ರ್ಯಾಕ್‌ ಮಾಡುವುದು ಹೇಗೆ ಎಂದು ಹೂಡಿಕೆದಾರರು ಸಾಮಾನ್ಯವಾಗಿ ಯೋಚಿಸುತ್ತಾರೆ.

ಕ್ರಿಕೆಟ್‌ ಮ್ಯಾಚ್‌ನಲ್ಲಿ ಟಾರ್ಗೆಟ್ ಅನ್ನು ಬೆನ್ನಟ್ಟಿದ ರೀತಿ ಇದು. ಕ್ರಿಕೆಟ್‌ ಮ್ಯಾಚ್‌ನಲ್ಲಿ ಎರಡನೇ ಬಾರಿ ಬ್ಯಾಟಿಂಗ್ ಮಾಡುವ ತಂಡಕ್ಕೆ ಅಂದಾಜು ಸಿಗುತ್ತದೆ. ಎಷ್ಟು ರನ್‌ಗಳು ಬೇಕು, ಎಷ್ಟು ವಿಕೆಟ್‌ಗಳಿವೆ ಮತ್ತು ಎಷ್ಟು ಓವರುಗಳು ಇವೆ ಎಂಬುದು ಗೊತ್ತಿರುತ್ತವೆ.

ಇದೇ ರೀತಿ, ಹಣಕಾಸಿನ ಗುರಿಗಳನ್ನು ಇಟ್ಟುಕೊಂಡು ಹೂಡಿಕೆ ಮಾಡುವುದು ಕೂಡ. ಹಣಕಾಸಿನ ಗುರಿಯನ್ನು ಟಾರ್ಗೆಟ್‌ ಸ್ಕೋರ್ ಎಂದು ಭಾವಿಸಿ.

  1. ಈವರೆಗೆ ನೀವು ಗಳಿಸಿದ ಹಣವು ನೀವು ಈವರೆಗೆ ಹೊಡೆದ ಸ್ಕೋರ್‌ ಎಂದುಕೊಳ್ಳಿ.
  2. ಇನ್ನು ನೀವು ಗಳಿಸಬೇಕಿರುವ ಹಣವು ನೀವು ಇನ್ನು ಹೊಡೆಯಬೇಕಿರುವ ರನ್‌ಗಳಾಗುತ್ತವೆ. ಉಳಿದಿರುವ ಸಮಯವೇ ಉಳಿದಿರುವ ಓವರ್‌.
  3. ವಿಕೆಟ್‌ಗಳ ಸ್ಥಿತಿ ಮತ್ತು ಬೋಲರ್‌ಗಳ ಗುಣಮಟ್ಟವೆಲ್ಲ ವಿವಿಧ ಅಪಾಯಗಳು. ಇದು ರಾಷ್ಟ್ರೀಯ ಅಥವಾ ಜಾಗತಿಕ ಆರ್ಥಿಕತೆ, ಜಾಗತಿಕ ಬಂಡವಾಳ ಹರಿವು, ದೇಶದಲ್ಲಿನ ರಾಜಕೀಯ ಸ್ಥಿತಿಗತಿಗಳು, ಕಾನೂನು, ನಿಯಮ ಮತ್ತು ತೆರಿಗೆಗಳಲ್ಲಿನ ಬದಲಾವಣೆಗಳು ಇತ್ಯಾದಿ ಅಪಾಯಗಳಾಗಿರಬಹುದು.
  4. ಇಲ್ಲಿ ಸ್ಕೋರ್‌ಬೋರ್ಡ್‌ ಎಂದರೆ ಮ್ಯೂಚುವಲ್‌ ಫಂಡ್‌ನಲ್ಲಿ ನೀವು ಹೂಡಿಕೆ ಮಾಡಿದಾಗ ಬರುವ ಖಾತೆ ಸ್ಟೇಟ್‌ಮೆಂಟ್‌.
  5. ಹೂಡಿಕೆಯ ಮೌಲ್ಯವನ್ನು ಅಂದರೆ ಸ್ಕೋರ್‌ಬೋರ್ಡ್‌ ಅನ್ನು ಚೆಕ್‌ ಮಾಡಲು ಆನ್‌ಲೈನ್‌ ಟೂಲ್‌ಗಳು ಮತ್ತು ಮೊಬೈಲ್‌ ಆಪ್‌ಗಳೂ ಇವೆ.
441
ನಾನು ಹೂಡಿಕೆ ಮಾಡಲು ಸಿದ್ಧ