ಬಡ್ಡಿ ದರ ಬದಲಾವಣೆಯು ಡೆಟ್ ಫಂಡ್‌ಗಳಿಂದ ನನ್ನ ರಿಟರ್ನ್ಸ್‌ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ?

ಬಡ್ಡಿ ದರ ಬದಲಾವಣೆಯು ಡೆಟ್ ಫಂಡ್‌ಗಳಿಂದ ನನ್ನ ರಿಟರ್ನ್ಸ್‌ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ?

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ಕಾರ್ಪೊರೇಟ್ ಅಥವಾ ಸರ್ಕಾರಿ ಬಾಂಡ್‌ಗಳು ಮತ್ತು ಮನಿ ಮಾರ್ಕೆಟ್‌ ಸಲಕರಣೆಗಳಂತಹ ಖಚಿತ ಆದಾಯ ಸೆಕ್ಯುರಿಟಿಗಳಲ್ಲಿ ಡೆಟ್ ಫಂಡ್‌ಗಳು ಹೂಡಿಕೆ ಮಾಡುತ್ತವೆ. ಈ ಸೆಕ್ಯುರಿಟಿಗಳು ಬಡ್ಡಿ ನೀಡುವ ಇನ್‌ಸ್ಟ್ರುಮೆಂಟ್‌ಗಳಾಗಿದ್ದು, ನಿಯತ ಅವಧಿಯಲ್ಲಿ ಹೂಡಿಕೆದಾರರಿಗೆ ಫಿಕ್ಸೆಡ್ ಇಂಟರೆಸ್ಟ್ (ಕೂಪನ್ ದರ) ನೀಡುತ್ತವೆ ಮತ್ತು ಪಕ್ವವಾದಾಗ ಹೂಡಿಕೆ ಮಾಡಿದ ಮೊತ್ತವನ್ನು (ಅಸಲು) ಪಾವತಿ ಮಾಡುತ್ತವೆ. ಈ ಸೆಕ್ಯುರಿಟಿಗಳ ಬೆಲೆಗೆ ನೇರವಾಗಿ ಬಡ್ಡಿ ದರ ಬದಲಾವಣೆ ಪರಿಣಾಮ ಬೀರುತ್ತದೆ. ಬಾಂಡ್ ಬೆಲೆಗಳು ಮತ್ತು ಬಡ್ಡಿ ದರಗಳು ತದ್ವಿರುದ್ಧವಾಗಿವೆ.

ಒಂದು ನಿರ್ದಿಷ್ಟ ಬೆಲೆಗೆ (ಮುಖ ಮೌಲ್ಯ) ಮೊದಲ ಬಾರಿ ಬಾಂಡ್‌ ವಿತರಿಸಿದಾಗ ಬಾಂಡ್‌ನ ಕೂಪನ್ ದರವು ನಿಗದಿತವಾಗಿರುತ್ತದೆ. ಕೂಪನ್ ರೇಟ್‌ಗಿಂದಲೂ ಕಡಿಮೆ ದರಕ್ಕೆ ಬಡ್ಡಿ ದರವು ಇಳಿದರೆ, ಬಾಂಡ್‌ ಹೆಚ್ಚು ಆಕರ್ಷಕವಾಗಿರುತ್ತದೆ ಮತ್ತು ಮಾರ್ಕೆಟ್‌ನಲ್ಲಿ ಲಭ್ಯವಾಗಿರುವದಕ್ಕಿಂತ ಹೆಚ್ಚು ಬಡ್ಡಿ ದರವನ್ನು ಆಕರ್ಷಿಸುತ್ತದೆ. ಹೀಗಾಗಿ, ಇಂತಹ ಬಾಂಡ್‌ಗಳಿಗೆ ಬೇಡಿಕೆ ಹೆಚ್ಚುತ್ತದೆ ಮತ್ತು ಬೆಲೆ ಹೆಚ್ಚಳವಾಗುತ್ತದೆ. ಬಡ್ಡಿ ದರವು ಹೆಚ್ಚಳವಾದರೆ, ಈ ಬಾಂಡ್‌ಗಳು ಆಕರ್ಷಣೆ ಕಳೆದುಕೊಳ್ಳುತ್ತವೆ ಮತ್ತು ಬೇಡಿಕೆ ಕಡಿಮೆಯಾಗಿದ್ದರಿಂದ ಬೆಲೆ ಇಳಿಯುತ್ತದೆ.

ಬಡ್ಡಿ ದರ ಹೆಚ್ಚಾದಾಗ ಫಿಕ್ಸೆಡ್‌ ಇನ್‌ಕಮ್‌ ಸೆಕ್ಯುರಿಟಿಗಳ ಬೆಲೆ ಇಳಿಯುತ್ತದೆ. ಇದರಿಂದಾಗಿ, ತಮ್ಮ ಪೋರ್ಟ್‌ಫೋಲಿಯೋದಲ್ಲಿ ಸೆಕ್ಯುರಿಟಿಗಳನ್ನು ಹೊಂದಿರುವ ಫಿಕ್ಸೆಡ್‌ ಇನ್‌ಕಮ್‌ ಫಂಡ್‌ಗಳ ಎನ್‌ಎವಿಯಲ್ಲಿ ಇಳಿಕೆಯಾಗುತ್ತದೆ. ಇನ್ನೊಂದೆಡೆ, ಬಡ್ಡಿ ದರಗಳು ಇಳಿದಾಗ, ಫಿಕ್ಸೆಡ್‌ ಇನ್‌ಕಮ್‌ ಸೆಕ್ಯುರಿಟಿಗಳ ಬೆಲೆ ಹೆಚ್ಚುತ್ತದೆ. ಇದರಿಂದಾಗಿ ಫಿಕ್ಸೆಡ್ ಇನ್‌ಕಮ್‌ ಫಂಡ್‌ಗಳ ಎನ್‌ಎವಿಯಲ್ಲಿ ಹೆಚ್ಚಳವಾಗುತ್ತದೆ. ಹೀಗಾಗಿ, ಬಡ್ಡಿ ದರ ಇಳಿದಾಗ ಅಥವಾ ಏರಿದಾಗ ನಿಮ್ಮ ಫಿಕ್ಸೆಡ್ ಇನ್‌ಕಮ್‌ ಫಂಡ್‌ ಹೂಡಿಕೆಯಿಂದ ಧನಾತ್ಮಕ ರಿಟರ್ನ್ಸ್ ಅನ್ನು ಪಡೆಯುತ್ತೀರಿ.

442
ನಾನು ಹೂಡಿಕೆ ಮಾಡಲು ಸಿದ್ಧ