ಎಕ್ಸಿಟ್ ಲೋಡ್‌ ಹೊಂದಿರುವ ಫಂಡ್‌ಗಳಲ್ಲಿ ಹೂಡಿಕೆ ಮಾಡುವಲ್ಲಿ ಯಾವುದಾದರೂ ಅನುಕೂಲವಿದೆಯೇ?

ಎಕ್ಸಿಟ್ ಲೋಡ್‌ ಹೊಂದಿರುವ ಫಂಡ್‌ಗಳಲ್ಲಿ ಹೂಡಿಕೆ ಮಾಡುವಲ್ಲಿ ಯಾವುದಾದರೂ ಅನುಕೂಲವಿದೆಯೇ?

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ಈಗ ಬ್ಯಾಲೆನ್ಸ್‌ಡ್‌ ಫಂಡ್ ಅನ್ನು ನೋಡೋಣ. ಇದು ಈಕ್ವಿಟಿ ಭಾಗದಿಂದ ಗ್ರೋತ್ ಮತ್ತು ಬಂಡವಾಳ ಹೆಚ್ಚಳವನ್ನು ಒದಗಿಸುವುದು ಮತ್ತು ಡೆಟ್ ಭಾಗದಿಂದ ಆದಾಯ ಮತ್ತು ಸ್ಥಿರತೆಯನ್ನು ಹೆಚ್ಚಿಸುವ ಉದ್ದೇಶವನ್ನು ಹೊಂದಿದೆ. ಈ ಸ್ಕೀಮ್‌ ಈಗಲೂ ಗಮನಾರ್ಹ ರಿಸ್ಕ್ ಒಳಗೊಂಡಿದೆ. ಯಾಕೆಂದರೆ, ಇದರಲ್ಲಿ ಈಕ್ವಿಟಿ ಭಾಗವು 60% ರಷ್ಟು ಇರಬಹುದಾಗಿದೆ. ಆರೋಗ್ಯಕರ ರಿಸ್ಕ್ ತಾಳಿಕೆ ಹೊಂದಿರುವವರು ಮತ್ತು ದೀರ್ಘಕಾಲೀನ ಹೂಡಿಕೆ ಉದ್ದೇಶ ಹೊಂದಿರುವ ಹೂಡಿಕೆದಾರರಿಗೆ ಇದನ್ನು ಶಿಫಾರಸು ಮಾಡಲಾಗಿದೆ.

ಇಂತಹ ಸ್ಕೀಮ್‌ನ ಫಂಡ್‌ ನಿರ್ವಹಣೆ ತಂಡವು ಕನಿಷ್ಠ 3 ವರ್ಷಗಳಿಂದ ದೀರ್ಘಕಾಲದವರೆಗೆ ಹೂಡಿಕೆ ಮಾಡಿಕೊಂಡೇ ಇರಬಲ್ಲ ದೀರ್ಘಕಾಲೀನ ಹೂಡಿಕೆದಾರರನ್ನು ಮಾತ್ರ ಬಯಸುತ್ತದೆ. ಹೀಗಾಗಿ, 3 ವರ್ಷಗಳಿಗೂ ಮೊದಲೇ ಮಾಡುವ ಎಲ್ಲ ರಿಡೆಂಪ್ಷನ್‌ಗಳಿಗೆ 1% ಎಕ್ಸಿಟ್ ಲೋಡ್ ಅನ್ನು ವಿಧಿಸಬಹುದಾಗಿದೆ. ಇಂತಹ ಪ್ರಕರಣಗಳಲ್ಲಿ, ಫಂಡ್‌ ನೇರವಾಗಿ ಲಿಕ್ವಿಡಿಟಿಯ ಮೇಲೆ ಪರಿಣಾಮ ಬೀರುವುದಿಲ್ಲ. ಆದರೆ 3 ವರ್ಷಗಳಿಗೂ ಮೊದಲು ಹೊರಹೋಗುವುದರಿಂದ ಹೂಡಿಕೆದಾರರನ್ನು ನಿರುತ್ಸಾಹಗೊಳಿಸುತ್ತದೆ.

ಸ್ಕೀಮ್‌ನ ಅನುಕೂಲವೆಂದರೆ, ಎಲ್ಲ ಹೂಡಿಕೆದಾರರೂ ದೀರ್ಘಕಾಲೀನ ಉದ್ದೇಶಕ್ಕೆ ಬದ್ಧವಾಗಿರುತ್ತಾರೆ. ಇದು ಫಂಡ್ ಮ್ಯಾನೇಜರ್‌ಗೆ ಅನುಕೂಲಕರ ಸಂಗತಿಯಾಗಿರುತ್ತದೆ ಮತ್ತು ಅಂತಹ ಯೋಚನೆಯನ್ನು ಗಮನದಲ್ಲಿರಿಸಿಕೊಂಡು ಸೆಕ್ಯುರಿಟಿಗಳನ್ನು ಆಯ್ಕೆ ಮಾಡಿಕೊಳ್ಳಲು ಅವರಿಗೆ ಅನುವು ಮಾಡುತ್ತದೆ. ಫಂಡ್ ಮ್ಯಾನೇಜರ್ ದೃಷ್ಟಿಕೋನದಿಮದ ಇಂತಹ ತಂತ್ರವು ಫಂಡ್‌ ಕಾರ್ಯಕ್ಷಮತೆಯನ್ನು ಉತ್ತಮಗೊಳಿಸುತ್ತದೆ. ಯಾಕೆಂದರೆ ಇದರಲ್ಲಿ ಅಲ್ಪಕಾಲೀನ ಹೂಡಿಕೆದಾರರು ಮತ್ತು ರಿಡೆಂಪ್ಷನ್‌ಗಳು ದೀರ್ಘಕಾಲೀನ ಕಾರ್ಯತಂತ್ರದ ಮೇಲೆ ಪರಿಣಾಮವನ್ನು ಬೀರುವುದಿಲ್ಲ.

440
ನಾನು ಹೂಡಿಕೆ ಮಾಡಲು ಸಿದ್ಧ