ಸ್ವತ್ತು ವರ್ಗದ ಹೊರತಾಗಿ ಮ್ಯೂಚುವಲ್‌ ಫಂಡ್‌ ಸ್ಕೀಮ್‌ಗಳನ್ನು ಹೇಗೆ ಇತರ ವಿಧಾನಗಳಲ್ಲಿ ವರ್ಗೀಕರಿಸಬಹುದು?

ಸ್ವತ್ತು ವರ್ಗದ ಹೊರತಾಗಿ ಮ್ಯೂಚುವಲ್‌ ಫಂಡ್‌ ಸ್ಕೀಮ್‌ಗಳನ್ನು ಹೇಗೆ ಇತರ ವಿಧಾನಗಳಲ್ಲಿ ವರ್ಗೀಕರಿಸಬಹುದು? zoom-icon

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ವೈವಿಧ್ಯತೆಯೇ ಜೀವನದ ಸೊಗಸು. ಇದೇ ವೇಳೆ, ವೈವಿಧ್ಯತೆ ಬೇಕು ಎಂಬ ಕಾರಣಕ್ಕೆ ಅದನ್ನು ಅಪ್ಪಿಕೊಳ್ಳಬಾರದು. ಕೆಲವು ವೈವಿಧ್ಯಗಳು, ಸನ್ನಿವೇಶಕ್ಕೆ ತಕ್ಕಂತೆ ಅಗತ್ಯವಿರುತ್ತವೆ. ನೀವು ಆಹಾರ ಸೇವನೆ ಮಾಡುವಾಗ ನೀವು ಸಮತೋಲನವನ್ನೂ ಕಾಯ್ದುಕೊಳ್ಳಬೇಕಾಗುತ್ತದೆ. ದೇಹದ ಕೆಲವು ಪ್ರಾಥಮಿಕ ಅಗತ್ಯವನ್ನು ಆಹಾರವು ಪೂರೈಸುತ್ತದೆ. ಇವು ಅಗತ್ಯ ಪೌಷ್ಠಿಕಾಂಶವನ್ನು ಒದಗಿಸುತ್ತವೆ. ನಿಮಗೆ ಶಕ್ತಿ, ಸಾಮರ್ಥ್ಯ, ಸಹಿಷ್ಣುತೆ ಮತ್ತು ನಿಮಗೆ ಉತ್ತಮ ದೃಷ್ಟಿ ಬೇಕಿರುತ್ತದೆ. ಇದೆಲ್ಲವನ್ನೂ ನೀವು ಕೊಬ್ಬು, ಕಾರ್ಬೋಹೈಡ್ರೇಟ್‌ಗಳು, ಪ್ರೊಟೀನುಗಳು, ವಿಟಾಮಿನ್‌ಗಳು ಇತ್ಯಾದಿ ಪ್ರಮುಖ ಪೌಷ್ಠಿಕಾಂಶಗಳಿಂದ ಪಡೆಯುತ್ತೀರಿ. ಇದು ಆಹಾರದಲ್ಲಿರುತ್ತದೆ. ಇದೇ ವೇಳೆ, ಒಂದೇ ಆಹಾರವು ಎಲ್ಲವನ್ನೂ ಒದಗಿಸುವುದಿಲ್ಲ. ಹೀಗಾಗಿ ನಿಮಗೆ ನಿಮ್ಮ ನಿತ್ಯದ ಆಹಾರದಲ್ಲಿ ವಿವಿಧ ಆಹಾರ ಸಾಮಗ್ರಿಗಳು ಅಗತ್ಯವಿರುತ್ತವೆ.

ಇದೇ ರೀತಿ, ವಿಭಿನ್ನ ಉದ್ದೇಶಗಳಿಗೆ ವಿಭಿನ್ನ ಮ್ಯೂಚುವಲ್‌ ಫಂಡ್ ಸ್ಕೀಮ್‌ಗಳು, ವಿಭಿನ್ನ ಹೂಡಿಕೆದಾರರ ಅಗತ್ಯವನ್ನು ಪೂರೈಸುವುದಕ್ಕಾಗಿ ಇರುತ್ತವೆ.

ಹೂಡಿಕೆಯಲ್ಲಿ ಪ್ರಾಥಮಿಕ ಅಗತ್ಯವನ್ನು ನಾವು ಇನ್ನು ನೋಡೋಣ. ಒಬ್ಬ ಹೂಡಿಕೆದಾರರಿಗೆ ನಾಲ್ಕು ಸಂಗತಿಗಳು ಅಗತ್ಯವಿರುತ್ತವೆ: (1) ಬಂಡವಾಳ ಸುರಕ್ಷತೆ, (2) ನಿಯತ ಆದಾಯ, (3) ಲಿಕ್ವಿಡಿಟಿ, (4) ಹೂಡಿದ ಬಂಡವಾಳದ ಪ್ರಗತಿ.

ಈ ಅಗತ್ಯವನ್ನು ಪೂರೈಸುವ ಮ್ಯೂಚುವಲ್‌ ಫಂಡ್‌ ಸ್ಕೀಮ್‌ಗಳು ಲಭ್ಯವಿವೆ. ಇನ್ನಷ್ಟು ತಿಳಿಯಲು ಬಲಕ್ಕೆ ಇರುವ ಟೇಬಲ್ ಅನ್ನು ನೋಡಿ.

441
ನಾನು ಹೂಡಿಕೆ ಮಾಡಲು ಸಿದ್ಧ