ಲಿಕ್ವಿಡ್ ಫಂಡ್‌ಗಳು ಯಾವುವು?

Video

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ಎಡಭಾಗದಲ್ಲಿರುವ ವೀಡಿಯೋವನ್ನು ವೀಕ್ಷಿಸಿದ ನಂತರ, ಎಲ್ಲ ಸನ್ನಿವೇಶಗಳಲ್ಲೂ ಅಲ್ಪಾವಧಿಯವರೆಗೆ ಹಣವು ಖಾಲಿ ಬಿದ್ದಿರುವುದನ್ನು ನೀವು ಗಮನಿಸಬಹುದು. ಕೆಲವು ಪ್ರಕರಣಗಳಲ್ಲಿ, ಹಣವನ್ನು ತೆಗೆದುಕೊಳ್ಳುವ ನಿಖರ ಸಮಯ ನಮಗೆ  ತಿಳಿದಿರುವುದಿಲ್ಲ. ಹಾಗಾದರೆ ಹೂಡಿಕೆದಾರರು ಏನು ಮಾಡಬೇಕು? ಹಣವನ್ನು ಎಲ್ಲಿ ಇಡಬೇಕು?

ಇಲ್ಲಿ ಕೆಲವು ಸಂಗತಿಗಳನ್ನು ನಾವು ಗಮನಿಸಬೇಕು:

  1. ಹಣವನ್ನು ಕೆಲವು ಅಲ್ಪ ಕಾಲದವರೆಗೆ ಇಡಬೇಕು
  2. ಹೂಡಿಕೆ ಮೌಲ್ಯದಲ್ಲಿ ಯಾವುದೇ ಇಳಿಕೆ ಆಗಬಾರದು ಎಂಬುದಕ್ಕೆ ಆದ್ಯತೆ ಇರುತ್ತದೆ.
  3. ಹಣ ಸುರಕ್ಷಿತವಾಗಿರುತ್ತದೆ ಎಂದಾದರೆ ರಿಟರ್ನ್ಸ್ ಕಡಿಮೆ ಇದ್ದರೂ ಸರಿ
  4. ಅವಧಿಯು ಖಚಿತವಾಗಿಲ್ಲ ಅಥವಾ ಅವಧಿ ತಿಳಿದಿಲ್ಲ

ಈ ನಾಲ್ಕು ಸನ್ನಿವೇಶವನ್ನು ಇಟ್ಟುಕೊಂಡರೆ, ಫಿಕ್ಸೆಡ್ ಡೆಪಾಸಿಟ್‌ನಲ್ಲಿ ಹಣ ಇಟ್ಟರೆ ನಮ್ಮ ಉದ್ದೇಶ ಪೂರೈಕೆಯಾಗುತ್ತದೆ. ಆದರೆ ಅದರ ಮಿತಿ ಕಡಿಮೆ ಇರುತ್ತದೆ. ಫಿಕ್ಸೆಡ್‌ ಡೆಪಾಸಿಟ್‌ನ ದೊಡ್ಡ ಲಾಭವೆಂದರೆ ಸುರಕ್ಷತೆಯಾಗಿದೆ. ಇದೇ ವೇಳೆ ಒಂದು ಮಿತಿಯನ್ನು ಸಾಮಾನ್ಯವಾಗಿ ನಿರ್ಲಕ್ಷಿಸಲಾಗುತ್ತದೆ. ಹಣವನ್ನು ನಿರ್ದಿಷ್ಟ ಅವಧಿಗೆ ಮಾತ್ರ ಇಡಬಹುದಾಗಿದೆ. ಹಣ ಇಡುವ ಅವಧಿಯ ಬಗ್ಗೆ ಯಾವುದೇ ಫ್ಲೆಕ್ಸಿಬಿಲಿಟಿ  ಇರುವುದಿಲ್ಲ.

ಇದೇ ಕಾರಣಕ್ಕೆ ಲಿಕ್ವಿಡ್ ಮ್ಯೂಚುವಲ್‌ ಫಂಡ್‌ ಅನ್ನು ಪರಿಗಣಿಸಬೇಕು. ವೀಡಿಯೋದಲ್ಲಿ ಹೇಳಿದಂತೆ ಇದರಲ್ಲಿ ಸುರಕ್ಷತೆ, ಸಕಾರಣವಾದ ಉತ್ತಮ ರಿಟರ್ನ್ಸ್ (ಉಳಿತಾಯ ಖಾತೆಗಳಿಗೆ ಅಥವಾ ಅತ್ಯಂತ ಕಡಿಮೆ ಅವಧಿಗೆ ಫಿಕ್ಸೆಡ್‌ ಡೆಪಾಸಿಟ್‌ಗಳಿಗೆ ಹೋಲಿಸಿದರೆ) ಮತ್ತು ಯಾವುದೇ ಸಮಯದಲ್ಲಿ ರಿಡೆಂಪ್ಷನ್‌ ಮಾಡಲು ಸಂಪೂರ್ಣ ಫ್ಲೆಕ್ಸಿಬಿಲಿಟಿ ಇರುತ್ತದೆ.

435
ನಾನು ಹೂಡಿಕೆ ಮಾಡಲು ಸಿದ್ಧ