ಸಂಚಯದ (ಕಾಂಪೌಂಡಿಂಗ್) ಶಕ್ತಿ ಎಂದರೇನು?

Video

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ಹಲವರಿಗೆ ಸಂಚಯದ ಶಕ್ತಿಯು ಕಠಿಣ ವಿಷಯವಾಗಿ ಕಾಣುತ್ತದೆ. ಆದರೆ ಅದು ಅಷ್ಟೇನೂ ಕಷ್ಟದ್ದಲ್ಲ. ಇದನ್ನು ಸರಳವಾಗಿ ಅರ್ಥ ಮಾಡಿಕೊಳ್ಳಲು ನಾವು ನಿಮಗೆ ಸಹಾಯ ಮಾಡುತ್ತೇವೆ.

ಯಾರೋ ಒಬ್ಬರುರೂ. 10,000 ಅನ್ನು 8% ವಾರ್ಷಿಕ ಬಡ್ಡಿಯಲ್ಲಿ ಹೂಡಿಕೆ ಮಾಡಿದ್ದಾರೆ ಎಂದು ಭಾವಿಸೋಣ. ವಾರ್ಷಿಕಬಡ್ಡಿಯು ರೂ. 800 ಆಗಿರುತ್ತದೆ. ಆದರೆ, ಬಡ್ಡಿಯನ್ನು ಪುನಃ ಹೂಡಿಕೆ ಮಾಡಿದಾಗ ಮುಂದಿನ ವರ್ಷದ ಗಳಿಕೆಯು ಮೂಲ ಹೂಡಿಕೆ ರೂ. 10,000 ಯ ಮೇಲೆ ಹೆಚ್ಚುವರಿ ಹೂಡಿಕೆ ರೂ. 800 ರ ಮೇಲೆ ಲಭ್ಯವಾಗುತ್ತದೆ. ಅಂದರೆ, ಎರಡನೇವರ್ಷಕ್ಕೆ ಗಳಿಕೆಯು ರೂ. 864 ಆಗಿರುತ್ತದೆ. ವರ್ಷ ಕಳೆದಂತೆ, ಆವರ್ಷದ ಬಡ್ಡಿಯು ಹೆಚ್ಚಳವಾಗುತ್ತದೆ. ಯಾಕೆಂದರೆ ಪ್ರತಿವರ್ಷವೂ ಹೂಡಿಕೆ ಹೆಚ್ಚಳ ವಾಗುತ್ತಿರುತ್ತದೆ.

ರಿಟರ್ನ್ಸ್ಅನ್ನು ಪುನಃ ಹೂಡಿಕೆಮಾಡಿದಾಗ ಎಷ್ಟು ಹಣವು ಸಂಚಯವಾಗುತ್ತದೆ? ನೋಡೋಣ ಬನ್ನಿ.

ಹೂಡಿಕೆ: ರೂ. 1,00,000
ಬಡ್ಡಿದರ: ವಾರ್ಷಿಕ 8%

Power of Compounding

 

ಈ ಮೇಲಿನ ಪಟ್ಟಿಯು ನಿಮಗೆ ಆಸಕ್ತಿಕರ ಹೂಡಿಕೆ ವಿಧವನ್ನು ತೋರಿಸುತ್ತದೆ. ಹೂಡಿಕೆಯನ್ನು ಹೆಚ್ಚು ಕಾಲದವರೆಗೆ ಇಟ್ಟುಕೊಂಡರೆ, ಗಳಿಕೆಯು ವೇಗವಾಗಿ ಹೆಚ್ಚುತ್ತದೆ. ಮೊದಲ 5 ವರ್ಷಗಳಲ್ಲಿ ಗಳಿಕೆಯು 0.47 ಲಕ್ಷ ರೂ. ಆಗಿದ್ದರೆ, ಅದರ ನಂತರದ 5 ವರ್ಷಗಳಿಗೆ ಗಳಿಕೆಯು 0.69 ಲಕ್ಷ ರೂ ಆಗಿದೆ (2.16 ಲಕ್ಷ ರೂ. – 1.47 ಲಕ್ಷ ರೂ.)  21 ನೇವರ್ಷದಲ್ಲಿ ಒಂದೇ ವರ್ಷದ ಗಳಿಕೆಯು 0.37 ಲಕ್ಷ ರೂ. ಆಗಿತ್ತು.

“ವರ್ಷ ಕಳೆದಂತೆ ಗಳಿಕೆಯು ದುಪ್ಪಟ್ಟಾಗುವುದಷ್ಟೇ ಅಲ್ಲ, ಅದು ವ್ಯಾಪಕವಾಗಿ ಹೆಚ್ಚುತ್ತದೆ.”

ವಾಸ್ತವವಾಗಿ ಸಂಚಯದ ಪ್ರಕ್ರಿಯೆಎಂದರೆ, ನಿಮ್ಮ ಮೂಲ ಹೂಡಿಕೆ ಹಾಗೂ ಅದರ ಮೇಲಿನ ಗಳಿಕೆಯ ಮೇಲೆ ಗಳಿಸುವ ಆದಾಯವಾಗಿರುತ್ತದೆ. ಮರುಹೂಡಿಕೆ ಮಾಡುತ್ತಿದ್ದಂತೆಯೇ ಅದರ ಮೇಲೂ ಆದಾಯ ಸಿಗುತ್ತದೆ.

*ಈ ಲೆಕ್ಕಾಚಾರಗಳು ಕೇವಲ ಸಾಂದರ್ಭಿಕವಾಗಿವೆ ಮತ್ತು ನಿಜವಾದ ವಾಪಸಾತಿಗಳನ್ನು ಪ್ರತಿನಿಧಿಸುವುದಿಲ್ಲ. ಮ್ಯೂಚುವಲ್ ಫಂಡ್ಗಳು ಖಚಿತ ವಾಪಸಾತಿ ದರವನ್ನು ಹೊಂದಿರುವುದಿಲ್ಲ ಮತ್ತು ವಾಪಸಾತಿ ದರವನ್ನು ಊಹಿಸುವುದು ಸಾಧ್ಯವಿಲ್ಲ.

436
ನಾನು ಹೂಡಿಕೆ ಮಾಡಲು ಸಿದ್ಧ