ಮಧ್ಯಾವಧಿಯ ಹೂಡಿಕೆಗಾಗಿ ನಾನು ಯಾವ ಮ್ಯೂಚುವಲ್ ಫಂಡ್ ಅನ್ನು ಆಯ್ಕೆ ಮಾಡಬೇಕು?

ಮಧ್ಯಾವಧಿಯ ಹೂಡಿಕೆಗಾಗಿ ನಾನು ಯಾವ ಮ್ಯೂಚುವಲ್ ಫಂಡ್ ಅನ್ನು ಆಯ್ಕೆ ಮಾಡಬೇಕು?

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ಉಳಿತಾಯ ಮತ್ತು ಹೂಡಿಕೆ ನಿರ್ಧಾರಗಳಲ್ಲಿ 4-6 ವರ್ಷಗಳನ್ನು ಮೀಡಿಯಮ್‌ ಟರ್ಮ್ (ಮಧ್ಯಮ ಅವಧಿ) ಎಂದು ಕರೆಯಲಾಗುತ್ತದೆ. ಹೀಗಾಗಿ ಇಲ್ಲಿ ನಿಮಗೆ ಬಂಡವಾಳ ವರ್ಧನೆಯೇ ಮೂಲ ಉದ್ದೇಶವಾಗಿರಬೇಕು. ಈಕ್ವಿಟಿ ಫಂಡ್‌ಗಳಿಗೆ ಹೋಲಿಸಿದರೆ ಕಾರ್ಪೊರೇಟ್‌ ಬಾಂಡ್‌ ಫಂಡ್‌ಗಳು ಮತ್ತು ಹೈಬ್ರಿಡ್ ಫಂಡ್‌ಗಳು ಕಡಿಮೆ ವೊಲಟೈಲ್ ಆಗಿರುವುದರಿಂದ ಬಂಡವಾಳ ವರ್ಧನೆಗೆ ಇವು ಸೂಕ್ತ.  ಇವು ದೀರ್ಘ ಕಾಲದಲ್ಲಿ ಸಂಪತ್ತು ಸೃಷ್ಟಿಗೂ ಸೂಕ್ತ. 3-5 ವರ್ಷಗಳ ಸರಾಸರಿ ಪರಿಪಕ್ವತೆಯೊಂದಿಗೆ ಉನ್ನತ ಗುಣಮಟ್ಟದ ಬಾಂಡ್‌ಗಳಲ್ಲಿ ಕಾರ್ಪೊರೇಟ್‌ ಬಾಂಡ್‌ ಫಂಡ್‌ಗಳು ಹೂಡಿಕೆ ಮಾಡುತ್ತವೆ. ಇವು ಬಡ್ಡಿ ದರ ಬದಲಾವಣೆಗೆ ಕಡಿಮೆ ಸಂವೇದನಾಶೀಲವಾಗಿರುತ್ತವೆ. ಹೈಬ್ರಿಡ್ ಫಂಡ್‌ಗಳು ಮುಖ್ಯವಾಗಿ ಡೆಟ್‌ನಲ್ಲಿ ಹೂಡಿಕೆ ಮಾಡುತ್ತವೆ ಮತ್ತು ಸ್ವಲ್ಪ ಮಟ್ಟಿಗೆ ಈಕ್ವಿಟಿ ಒಡ್ಡುವಿಕೆ (ಎಕ್ಸ್‌ಪೋಶರ್‌) ಕೂಡ ಹೊಂದಿರುತ್ತವೆ. ಹೀಗಾಗಿ ಬಂಡವಾಳ ವರ್ಧನೆಯ ಜೊತೆಗೆ ಸುರಕ್ಷಿತ ಹೂಡಿಕೆಯಾಗಿರುತ್ತದೆ.

ಮೀಡಿಯಮ್‌ ಟರ್ಮ್ ಹೂಡಿಕೆಗೆ ಫಂಡ್‌ಗಳನ್ನು ಮೌಲ್ಯೀಕರಿಸುವಾಗ ಫಂಡ್‌ನ ದೀರ್ಘಾವಧಿ ಕಾರ್ಯಕ್ಷಮತೆಗಾಗಿ ಇತ್ತೀಚಿನ 3-5 ವರ್ಷಗಳಿಗಿಂತ ಹಿಂದಿನ ಅವಧಿಯ ರಿಟರ್ನ್ಸ್ ಅನ್ನು ನೋಡಿ. ಮಾರ್ಕೆಟ್ ಆವೃತ್ತಿಯ ಎಲ್ಲ ಹಂತಗಳ ಮೂಲಕ ಸ್ಥಿರವಾಗಿ ಕಾರ್ಯನಿರ್ವಹಣೆ ಮಾಡುತ್ತಿದೆಯೇ ಎಂಬುದನ್ನು ನೋಡಿ. ಮಾರ್ಕೆಟ್‌ ಉತ್ತಮ ಪ್ರಗತಿ ಸಾಧಿಸುತ್ತಿದ್ದಾಗ ಬಹುತೇಕ ಫಂಡ್‌ಗಳು ಉತ್ತಮ ಸಾಧನೆ ಮಾಡುತ್ತಿರುತ್ತವೆ. ಆದರೆ ಮಾರುಕಟ್ಟೆ ಕೆಳಮುಖವಾಗಿದ್ದಾಗಲೂ ಸ್ಥಿರ ರಿಟರ್ನ್ಸ್ ಅನ್ನು ನೀಡಿದರೆ ಕಾಲಾನಂತರದಲ್ಲಿ ಉತ್ತಮ ಸಾಧನೆ ಮಾಡಿದಂತಾಗುತ್ತದೆ. ನೀವು 3-5 ವರ್ಷಗಳ ಅವಧಿಗೆ ಹೂಡಿಕೆ ಮಾಡುವುದರಿಂದ, ಈ ಅವಧಿಯಲ್ಲಿ ಮಾರುಕಟ್ಟೆ ಇಳಿಕೆ ಗತಿಯಲ್ಲಿದ್ದರೆ, ಸ್ಥಿರ ಕಾರ್ಯಕ್ಷಮತೆಯಲ್ಲಿ ಹೂಡಿಕೆ ಮಾಡಿದ ಲಾಭವನ್ನು ನೀವು ಪಡೆಯುತ್ತೀರಿ. ಉತ್ತಮ ವಂಶಾವಳಿಯೊಂದಿಗೆ ವಿಶ್ವಾಸಾರ್ಹ ಫಂಡ್ ಹೌಸ್‌ನಿಂದ ನಿಧಿಯನ್ನು ಆಯ್ಕೆಮಾಡಿ ಅಥವಾ ಸರಿಯಾದ ನಿಧಿಯನ್ನು ಆಯ್ಕೆ ಮಾಡಲು ಹಣಕಾಸು ತಜ್ಞರ ಸಹಾಯವನ್ನು ಪಡೆಯಿರಿ.

435
ನಾನು ಹೂಡಿಕೆ ಮಾಡಲು ಸಿದ್ಧ