ಮ್ಯೂಚುವಲ್‌ ಫಂಡ್‌ಗಳ ಮೂಲಕ ನಿಮ್ಮ ನಿವೃತ್ತಿ ಯೋಜನೆ ಮಾಡುವುದು ಹೇಗೆ?

Video

ಬಹುತೇಕ ಜನರು ನಿವೃತ್ತಿ ಸಮೀಪಿಸುವವರೆಗೂ ನಿವೃತ್ತಿಯ ಬಗ್ಗೆ ಯೋಚಿಸುವುದಿಲ್ಲ. ಅವರು ಕೆಲಸ ಮಾಡುತ್ತಿದ್ದ ಸಂಪೂರ್ಣ ಅವಧಿಗೂ ಒಂದಲ್ಲ ಒಂದು ಅಗತ್ಯವನ್ನು ಪೂರೈಸುವುದರಲ್ಲೇ ಸಮಯ ಕಳೆದುಬಿಡುತ್ತಾರೆ. ವಾಹನ ಖರೀದಿಸುವುದು, ಮನೆ ಖರೀದಿಸುವು, ಕುಟುಂಬವನ್ನು ಬೆಳೆಸುವುದು, ಮಕ್ಕಳ ಶಿಕ್ಷಣದಿಂದ ವಿವಾಹದವರೆಗೆ ಎಲ್ಲದಕ್ಕೂ ವೆಚ್ಚ ಮಾಡುವುದರಲ್ಲೇ ಸಮಯ ಕಳೆದಿರುತ್ತದೆ. ಈ ಜವಾಬ್ದಾರಿಗಳನ್ನು ನಿರ್ವಹಿಸಿದ ನಂತರ ನಿವೃತ್ತಿ ಜೀವನಕ್ಕಾಗಿ ಎಷ್ಟು ಉಳಿದಿದೆ ಎಂದು ನಾವು ನೋಡುತ್ತೇವೆ. ಆಗ ಜನರು ನಿವೃತ್ತಿ ಜೀವನ ಆರಂಭವಾಗುವುದಕ್ಕೂ ಮೊದಲು ಅಲ್ಪ ಕಾಲದಲ್ಲಿ ಅತ್ಯಂತ ಬೇಗ ರಿಟರ್ನ್ಸ್‌ ನೀಡುವ ಯಾವುದಾದರೂ ಅವಕಾಶವಿದೆಯೇ ಎಂದು ಯೋಚನೆ ಮಾಡಲು ಆರಂಭಿಸುತ್ತಾರೆ. ಈ ಜೀವನದ ಹಂತದಲ್ಲಿ ನಿಮಗೆ 15-30 ವರ್ಷಗಳಲ್ಲಿ ನಿಯತ ಆದಾಯವಿರುವುದಿಲ್ಲ. ಅನುಕೂಲ, ಭದ್ರತೆ, ಉತ್ತಮ ಆರೋಗ್ಯ ಸೇವೆ ಮತ್ತು ಸುಸ್ಥಿರತೆ ನಿಮಗೆ ಅಗತ್ಯವಿರುತ್ತದೆ. ಆದರೆ ಈ ಹಂತದಲ್ಲಿ ಈ ರೀತಿಯ ಯೋಜನೆ ಮಾಡುವುದು ತಪ್ಪಾದ ವಿಧಾನವಾಗಿದೆ.

ಈ ಹಂತಕ್ಕೆ ಸಾಧ್ಯವಾದಷ್ಟೂ ಬೇಗ ಯೋಜನೆ ರೂಪಿಸಬೇಕು. ನಿಮ್ಮ ಗಳಿಕೆ ಮತ್ತು ಜೀವನ ಶೈಲಿ ಯಾವುದೇ ಆಗಿರಲಿ, ನಿಮ್ಮ ಎಲ್ಲ ವೆಚ್ಚಗಳಿಗೆ ಖರ್ಚು ಮಾಡಿದ ನಂತರ ಮತ್ತು ನಿಮ್ಮ ಹಣಕಾಸು ಅಗತ್ಯವನ್ನು ಪೂರೈಸಿದ ನಂತರ ನೀವು ಒಂದಷ್ಟು ಹಣವನ್ನು ಉಳಿಸಬಹುದು. ಎಲ್ಲ ಬಿಲ್‌ಗಳು ಮತ್ತು ಇತರ ಬಾಧ್ಯತೆಗಳಾದ ಕಾರು ಇಎಂಐ, ಹೋಮ್‌ ಲೋನ್ ಇಎಂಐ, ಮಕ್ಕಳಿಗಾಗಿ ಹೂಡಿಕೆ, ತುರ್ತು ಫಂಡ್‌ ಇತ್ಯಾದಿಯನ್ನು ಪಾವತಿ ಮಾಡಿದ ನಂತರ ಪ್ರತಿ ತಿಂಗಳ ಕೊನೆಯಲ್ಲಿ ಸ್ವಲ್ಪ ಹಣ ಬಾಕಿ ಇರುತ್ತದೆ. ಈ ಹಣ ಸಣ್ಣ ಮೊತ್ತವೇ ಆದರೂ, ಸರಿಯಾದ ಇನ್‌ಸ್ಟ್ರುಮೆಂಟ್‌ನಲ್ಲಿ ಹೂಡಿಕೆ ಮಾಡಿದರೆ ದೀರ್ಘಾವಧಿಯಲ್ಲಿ ಸಂಪತ್ತು ಸೃಷ್ಟಿಗೆ ನಿಮಗೆ ಸಹಾಯವಾಗುತ್ತದೆ. ಮ್ಯೂಚುವಲ್‌ ಫಂಡ್‌ಗಳಿಗಿಂತ ಬೇರೆ ಯಾವುದು ಉತ್ತಮ ವಿಧಾನವಿದೆ ಹೇಳಿ! ತಿಂಗಳಿಗೆ ರೂ. 500 ರಷ್ಟು ಕಡಿಮೆ ಮೊತ್ತವನ್ನೂ ನೀವು ಪ್ರತಿ ತಿಂಗಳು ಎಸ್‌ಐಪಿ ಮೂಲಕ ಮ್ಯೂಚುವಲ್‌ ಫಂಡ್‌ನಲ್ಲಿ ಹೂಡಿಕೆ ಮಾಡಬಹುದು ಮತ್ತು ನಿಮ್ಮ ಆದಾಯ/ಉಳಿತಾಯ ಹೆಚ್ಚಿದಂತೆ ಹಣವನ್ನು ಹೆಚ್ಚಳ ಮಾಡಬಹುದು. ಒಟ್ಟಾದ ಮೊತ್ತವು ಜಾದೂ ಮಾಡಿದಾಗ ನಿಮಗೆ ಅಚ್ಚರಿಯಾಗುತ್ತದೆ. ಯಾರಿಗೆ ಗೊತ್ತು, ಚಿನ್ನದ ಮೊಟ್ಟೆಯೇ ನಿಮ್ಮ ತಿಜೋರಿಯಲ್ಲಿ ಬಂದು ಬೀಳಲೂಬಹುದು!

436

ಮ್ಯೂಚುವಲ್‌ ಫಂಡ್‌ ಸೂಕ್ತವೇ??