ಅಲ್ಪಾವಧಿ ಗುರಿಗಳಿಗಾಗಿ ಮ್ಯೂಚುವಲ್‌ ಫಂಡ್‌ಗಳಲ್ಲಿ ಹೂಡಿಕೆ ಮಾಡುವುದು

ಅಲ್ಪಾವಧಿ ಗುರಿಗಳಿಗಾಗಿ ಮ್ಯೂಚುವಲ್‌ ಫಂಡ್‌ಗಳಲ್ಲಿ ಹೂಡಿಕೆ ಮಾಡುವುದು zoom-icon

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ದೀರ್ಘಕಾಲದಲ್ಲಿ ಸಂಪತ್ತು ಸೃಜಿಸುವುದಕ್ಕೆ ಒಂದು ಪರಿಕರವನ್ನಾಗಿ ಮ್ಯೂಚುವಲ್ ಫಂಡ್‌ಗಳನ್ನು ನೋಡಲಾಗುತ್ತದೆ. ಆದರೆ, ಅಲ್ಪಾವಧಿ ಗುರಿಗಳಿಗೆ ಹೊಂದುವ ಮ್ಯೂಚುವಲ್ ಫಂಡ್‌ಗಳ ವಿಧಗಳೂ ಇವೆ. ತುಲನಾತ್ಮಕವಾಗಿ ಕಡಿಮೆ ಕಾಲಾವಧಿಯನ್ನು ಹೊಂದಿರುವ ಹಣಕಾಸು ಉದ್ದೇಶಗಳನ್ನು ಪೂರೈಸಲು ವಿನ್ಯಾಸ ಮಾಡಿದ ಹೂಡಿಕೆ ಸಲಕರಣೆಗಳಲ್ಲಿ ಅಲ್ಪಾವಧಿ ಗುರಿಗಳ ಮ್ಯೂಚುವಲ್ ಫಂಡ್‌ಗಳು ಹಣ ಹಾಕಿರುತ್ತವೆ.

ಮ್ಯೂಚುವಲ್ ಫಂಡ್‌ಗಳು ಫ್ಲೆಕ್ಸಿಬಲ್ ಮತ್ತು ಲಿಕ್ವಿಡ್ ಆಗಿರುವುದರಿಂದ, ಲಭ್ಯವಿರುವ ಸೀಮಿತ ಸಮಯದೊಳಗೆ ರಿಸ್ಕ್ ಅನ್ನು ಕಡಿಮೆ ಮಾಡುವ ಮೂಲಕ ಬಂಡವಾಳ ವರ್ಧನೆಯನ್ನು ಒದಗಿಸುವ ಗುರಿಯನ್ನು ಈ ಅಲ್ಪಕಾಲದ ಗುರಿಗಳ ಮ್ಯೂಚುವಲ್ ಫಂಡ್‌ಗಳು ಹೊಂದಿರುತ್ತವೆ. ಅಲ್ಪಾವಧಿ ಹಣಕಾಸು ಉದ್ದೇಶಗಳ ನಿರ್ದಿಷ್ಟ ಅಗತ್ಯಗಳಿಗೆ ಅನುಗುಣವಾಗಿ ಸಂಭಾವ್ಯ ರಿಟರ್ನ್ಸ್‌ ಮತ್ತು ರಿಸ್ಕ್ ಮಧ್ಯೆ ಸಮತೋಲನವನ್ನು ಒದಗಿಸುವುದಕ್ಕಾಗಿ ಈ ಫಂಡ್‌ಗಳನ್ನು ರಚಿಸಲಾಗಿದೆ.

ಅನಿರೀಕ್ಷಿತ ವೆಚ್ಚಗಳಿಗೆ ತುರ್ತು ನಿಧಿ ರಚಿಸುವುದು, ಯೋಜಿತ ರಜೆ ಅಥವಾ ರಜಾದಿನಕ್ಕೆ ಉಳಿತಾಯ ಮಾಡುವುದು, ಮನೆಯ ಡೌನ್ ಪೇಮೆಂಟ್‌ಗೆ ಹಣವನ್ನು ಕ್ರೋಢೀಕರಿಸುವುದು, ವಾಹನ ಖರೀದಿಗೆ ಹಣ ಒದಗಿಸುವುದು, ಶಿಕ್ಷಣದ ಉದ್ದೇಶಗಳಿಗೆ ಹಣವನ್ನು ನಿಗದಿಸುವುದು, ವಿವಾಹದ ವೆಚ್ಚ ನಿಭಾಯಿಸುವುದು ಮತ್ತು ಅಲ್ಪಾವಧಿ ಮನೆ ನವೀಕರಣ ಪ್ರಾಜೆಕ್ಟ್‌ಗಳಂತಹ ಉದ್ದೇಶಗಳಿಗೆ ಈ ಫಂಡ್‌ಗಳು ಉತ್ತಮವಾಗಿ ಹೊಂದುತ್ತವೆ.

ಅಲ್ಪಾವಧಿ ಗುರಿಗಳಿಗೆ ಮ್ಯೂಚುವಲ್ ಫಂಡ್ ಆಯ್ಕೆ ಮಾಡಿಕೊಳ್ಳುವ ಹೂಡಿಕೆದಾರರು ವೃತ್ತಿಪರ ಫಂಡ್ ನಿರ್ವಹಣೆ, ವೈವಿಧ್ಯಮಯ ಪೋರ್ಟ್‌ಫೋಲಿಯೋಗಳು ಮತ್ತು ಅಗತ್ಯವಿದ್ದಾಗ ತಮ್ಮ ಫಂಡ್‌ಗಳನ್ನು ಸುಲಭವಾಗಿ ಮರಳಿ ಪಡೆಯುವ ಪ್ರಯೋಜನವನ್ನು ಹೂಡಿಕೆದಾರರು ಪಡೆದುಕೊಳ್ಳಬಹುದು.

ಅಲ್ಪಾವಧಿ ಹೂಡಿಕೆಗೆ ಹಲವು ರೀತಿಯ ಮ್ಯೂಚುವಲ್ ಫಂಡ್‌ಗಳು ಸೂಕ್ತವಾಗಿದ್ದು, ಪ್ರತಿಯೊಂದರಲ್ಲೂ ಅದರದ್ದೇ ಆದ ಗುಣಗಳು ಮತ್ತು ರಿಸ್ಕ್‌ ಪ್ರೊಫೈಲ್‌ಗಳು ಇರುತ್ತವೆ. ಅಲ್ಪಾವಧಿ ಮ್ಯೂಚುಲ್ ಫಂಡ್‌ಗಳ ಕೆಲವು ಪ್ರಮುಖ ವಿಭಾಗಗಳೆಂದರೆ:

ಲಿಕ್ವಿಡ್: ಲಿಕ್ವಿಡ್ ಮ್ಯೂಚುವಲ್ ಫಂಡ್‌ಗಳು ಅತ್ಯಂತ ಲಿಕ್ವಿಡ್ ಆದ ಮತ್ತು ಸುರಕ್ಷಿತ ಅಸೆಟ್‌ಗಳಲ್ಲಿ ಹೂಡಿಕೆ ಮಾಡುತ್ತವೆ. ಉದಾಹರಣೆಗೆ, ಅಲ್ಪಾವಧಿ ಸರ್ಕಾರಿ ಸೆಕ್ಯುರಿಟಿಗಳು ಮತ್ತು ಹಣ ಮಾರ್ಕೆಟ್‌ ಸಲಕರಣೆಗಳು. ಇದರ ಪ್ರಮುಖ ಉದ್ದೇಶವು, ಅತ್ಯಧಿಕ ಮಟ್ಟದ ಸುರಕ್ಷತೆ ಮತ್ತು ಸ್ಥಿರತೆಯನ್ನು ಕಾಯ್ದುಕೊಳ್ಳುವುದರ ಜೊತೆಗೆ ಹೂಡಿಕೆದಾರರಿಗೆ ಅವರ ಫಂಡ್‌ಗೆ ತ್ವರಿತ ಮತ್ತು ಸುಲಭ ಆಕ್ಸೆಸ್ ಅನ್ನು ಒದಗಿಸುವುದಾಗಿದೆ.

ಮನಿ ಮಾರ್ಕೆಟ್ ಫಂಡ್‌ಗಳು: ಮನಿ ಮಾರ್ಕೆಟ್ ಫಂಡ್‌ಗಳು ಅಲ್ಪಾವಧಿ, ಕಡಿಮೆ ಅಪಾಯದ ಮತ್ತು ಸುಲಭವಾಗಿ ಕನ್ವರ್ಟಿಬಲ್ ಸೆಕ್ಯುರಿಟಿಗಳಿಗೆ (ಸುಲಭವಾಗಿ ಪರಿವರ್ತಿಸಬಹುದಾದ ಭದ್ರತೆಗಳು) ನಿಯೋಜನೆ ಮಾಡಬಹುದಾದ ಟ್ರೆಶರಿ ಬಿಲ್‌ಗಳು, ಡೆಪಾಸಿಟ್ ಸರ್ಟಿಫಿಕೇಟ್‌ಗಳು ಮತ್ತು ಕಮರ್ಷಿಯಲ್ ಪೇಪರ್‌ಗಳ ಮೇಲೆ ಹೂಡಿಕೆ ಮಾಡುವ ಮ್ಯೂಚುವಲ್ ಫಂಡ್‌ಗಳ ವಿಭಾಗವಾಗಿದೆ.

ಅಲ್ಪಾವಧಿ ಡೆಟ್ ಫಂಡ್‌ಗಳು: ಅಲ್ಪಾವಧಿ ಡೆಟ್ ಫಂಡ್‌ಗಳು ಅಲ್ಪಕಾಲದ ಮೆಚ್ಯುರಿಟಿಗಳನ್ನು ಹೊಂದಿರುವ ಫಿಕ್ಸೆಡ್ ಇನ್‌ಕಮ್ ಸೆಕ್ಯುರಿಟಿಗಳಿಗೆ ಹೂಡಿಕೆಗಳನ್ನು ನಿಯೋಜಿಸುವ ಮ್ಯೂಚುವಲ್ ಫಂಡ್‌ಗಳಾಗಿವೆ. ಬಡ್ಡಿ ದರಗಳಲ್ಲಿನ ಏರಿಳಿತದ ಪರಿಣಾಮಗಳನ್ನು ನಿವಾರಿಸುವುದರ ಜೊತೆಗೆ, ಬಡ್ಡಿ ಆದಾಯದ ಮೂಲಕ ಪ್ರಾಥಮಿಕವಾಗಿ ರಿಟರ್ನ್ಸ್ ಅನ್ನು ಜನರೇಟ್ ಮಾಡುವುದು ಇದರ ಉದ್ದೇಶವಾಗಿದೆ.

ಅಲ್ಪಾವಧಿ ಬಾಂಡ್ ಫಂಡ್‌ಗಳು: ಅಲ್ಪಾವಧಿ ಬಾಂಡ್‌ಗಳ ವೈವಿಧ್ಯಮಯವಾದ ಪೋರ್ಟ್‌ಫೋಲಿಯೋದಲ್ಲಿ ಹೂಡಿಕೆ ಮಾಡುವ ಮ್ಯೂಚುವಲ್ ಫಂಡ್‌ಗಳೇ ಅಲ್ಪಾವಧಿ ಬಾಂಡ್ ಫಂಡ್‌ಗಳಾಗಿವೆ. ಕಡಿಮೆ ರಿಸ್ಕ್ ಪ್ರೊಫೈಲ್ ಅನ್ನು ಇಟ್ಟುಕೊಂಡು ಮನಿ ಮಾರ್ಕೆಟ್ ಫಂಡ್‌ಗಳಿಗಿಂತ ತುಲನಾತ್ಮಕವಾಗಿ ಅಧಿಕ ರಿಟರ್ನ್‌ಗಳನ್ನು ಒದಗಿಸುವ ಗುರಿಯನ್ನು ಈ ಫಂಡ್‌ಗಳು ಹೊಂದಿವೆ.

ಜಿಲ್ಟ್‌ ಫಂಡ್‌ಗಳು: ಸರ್ಕಾರಿ ಸೆಕ್ಯುರಿಟಿಗಳು ಅಥವಾ ಜಿಲ್ಟ್‌ಗಳಲ್ಲಿ ಪ್ರಮುಖವಾಗಿ ಹೂಡಿಕೆ ಮಾಡುವ ಮ್ಯೂಚುವಲ್ ಫಂಡ್‌ಗಳೇ ಜಿಲ್ಟ್ ಫಂಡ್‌ಗಳ ವಿಧಗಳಾಗಿವೆ. ಈ ಫಂಡ್‌ಗಳು ತುಲನಾತ್ಮಕವಾಗಿ ಕಡಿಮೆ ರಿಸ್ಕ್‌ ಹೂಡಿಕೆ ಆಯ್ಕೆಯನ್ನು ಒದಗಿಸುತ್ತವೆ. ಯಾಕೆಂದರೆ, ಸರ್ಕಾರದ ಬೆಂಬಲಿತ ಸೆಕ್ಯುರಿಟಿಗಳು ಸಾಮಾನ್ಯವಾಗಿ ಅಧಿಕ ಕ್ರೆಡಿಟ್ ರೇಟಿಂಗ್ ಹೊಂದಿರುತ್ತವೆ.

ಅಷ್ಟಾಗಿಯೂ ಅಲ್ಪಾವಧಿ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವುದಕ್ಕೂ ಮೊದಲು, ತಮ್ಮ ರಿಸ್ಕ್ ಸಹಿಸಿಕೊಳ್ಳುವ ಸಾಮರ್ಥ್ಯ, ಹೂಡಿಕೆ ಅವಧಿ ಮತ್ತು ಹಣಕಾಸು ಗುರಿಗಳನ್ನು ಸರಿಯಾಗಿ ಮೌಲ್ಯೀಕರಿಸುವುದು ಮುಖ್ಯವಾಗಿರುತ್ತದೆ. ಇದರ ಜೊತೆಗೆ, ಹಣಕಾಸು ಸಲಹೆಗಾರರಿಂದ ಮಾರ್ಗದರ್ಶನವನ್ನು ಪಡೆದರೆ, ಅವರು ವ್ಯಕ್ತಿಯ ಅಗತ್ಯಗಳಿಗೆ ಅನುಗುಣವಾಗಿ ಮತ್ತು ಪ್ರಸ್ತುತ ಮಾರುಕಟ್ಟೆ ಸ್ಥಿತಿಗಳಿಗೆ ಪೂರಕವಾಗಿ ಹೂಡಿಕೆ ಕಾರ್ಯತಂತ್ರವನ್ನು ಕಸ್ಟಮೈಸ್ ಮಾಡಲು ಸಹಾಯ ಮಾಡುತ್ತಾರೆ.

ಹಕ್ಕು ನಿರಾಕರಣೆ

ಮ್ಯೂಚುಯಲ್ ಫಂಡ್ ಹೂಡಿಕೆಗಳು ಮಾರುಕಟ್ಟೆ ಅಪಾಯಗಳಿಗೆ ಒಳಪಟ್ಟಿರುತ್ತವೆ, ಎಲ್ಲಾ ಯೋಜನೆ ಸಂಬಂಧಿತ ದಾಖಲಾತಿಗಳನ್ನು ಜಾಗ್ರತೆಯಿಂದ ಓದಿರಿ.

290
ನಾನು ಹೂಡಿಕೆ ಮಾಡಲು ಸಿದ್ಧ