ಡೆಟ್‌ ಫಂಡ್‌ಗಳ ಪರ್ಫಾರ್ಮೆನ್ಸ್‌ ಮೇಲೆ ಯಾವುದು ಪರಿಣಾಮ ಬೀರುತ್ತದೆ?

ಡೆಟ್‌ ಫಂಡ್‌ಗಳ ಪರ್ಫಾರ್ಮೆನ್ಸ್‌ ಮೇಲೆ ಯಾವುದು ಪರಿಣಾಮ ಬೀರುತ್ತದೆ? zoom-icon

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ಅಧಿಕ ನಿಯತ ಬಡ್ಡಿಯನ್ನು ಒದಗಿಸುವ ಭರವಸೆ ನೀಡುವ ಬಾಂಡ್‌ಗಳು ಮತ್ತು ಮನಿ ಮಾರ್ಕೆಟ್‌ ಸಲಕರಣೆಗಳಂತಹ ಬಡ್ಡಿ ಹೊಂದಿರುವ ಸೆಕ್ಯುರಿಟಿಗಳಲ್ಲಿ ನಮ್ಮ ಹಣವನ್ನು ಡೆಟ್ ಫಂಡ್‌ಗಳು ಹೂಡಿಕೆ ಮಾಡುತ್ತವೆ. ಈ ಬಡ್ಡಿ ಪಾವತಿಯನ್ನು ಫಂಡ್ ಸ್ವೀಕರಿಸುತ್ತದೆ. ನಂತರ ಇದು ನಮ್ಮಂಥ ಹೂಡಿಕೆದಾರರಿಗೆ ಒಟ್ಟು ರಿಟರ್ನ್ಸ್‌ನಲ್ಲಿ ಗಳಿಕೆಯನ್ನು ನೀಡುತ್ತದೆ. ಮಾರ್ಕೆಟ್‌ನಲ್ಲಿ ಬಡ್ಡಿ ದರ ಬದಲಾದಾಗ, ಬಾಂಡ್ ಮತ್ತು ಮನಿ ಮಾರ್ಕೆಟ್ ಸಲಕರಣೆಯಂತಹ ಫಿಕ್ಸೆಡ್ ಇನ್‌ಕಮ್‌ ಸೆಕ್ಯುರಿಟಿಗಳ ಬೆಲೆಯೂ ಬದಲಾಗುತ್ತದೆ. ಆದರೆ ಇದು ವಿರುದ್ಧ ದಿಕ್ಕಿನಲ್ಲಿರುತ್ತದೆ. ಬಡ್ಡಿ ದರವು ಹೆಚ್ಚಿದಾಗ ಈ ಅಸೆಟ್‌ಗಳ ಬೆಲೆ ಇಳಿಯುತ್ತದೆ ಮತ್ತು ಇಳಿದಾಗ ಏರುತ್ತದೆ. ಹೀಗಾಗಿ, ಡೆಟ್‌ ಫಂಡ್‌ಗಳ ಎನ್‌ಎವಿಯು ಈ ಸೆಕ್ಯುರಿಟಿಗಳ ಬೆಲೆಯಲ್ಲಿ ಬದಲಾವಣೆಯಾದಾಗ ಬದಲಾಗುತ್ತದೆ. ಎನ್‌ಎವಿಯಲ್ಲಿನ ಬದಲಾವಣೆಯು ಈ ಫಂಡ್‌ಗಳು ಜನರೇಟ್ ಮಾಡುವ ಒಟ್ಟು ರಿಟರ್ನ್‌ ಮೇಲೆ ಪರಿಣಾಮ ಬೀರುತ್ತದೆ.

ಬಡ್ಡಿ ದರ ಬದಲಾವಣೆಯ ಹೊರತಾಗಿ, ಬಾಂಡ್‌ಗಳ ಕ್ರೆಡಿಟ್ ರೇಟಿಂಗ್‌ನಲ್ಲಿ ಆಗುವ ಬದಲಾವಣೆಯು ಡೆಟ್‌ ಫಂಡ್‌ಗಳಿಂದ ಲಭ್ಯ ರಿಟರ್ನ್ಸ್‌ನ ಮೇಲೂ ಪರಿಣಾಮ ಬೀರುತ್ತವೆ. ಬಾಂಡ್ ವಿತರಕರ ಸಾಲ ಅರ್ಹತೆಯನ್ನು ಕ್ರೆಡಿಟ್ ರೇಟಿಂಗ್‌ಗಳು ಸೂಚಿಸುತ್ತವೆ. ರೇಟಿಂಗ್‌ನಲ್ಲಿ ಇಳಿಕೆಯಾದರೆ ಈ ಬಾಂಡ್‌ಗಳ ಬೆಲೆಯಲ್ಲೂ ಇಳಿಕೆಯಾಗುತ್ತದೆ. ಹೀಗಾಗಿ, ಈ ಬಾಂಡ್‌ಗಳನ್ನು ಹೊಂದಿರುವ ಎನ್‌ಎವಿಗಳ ಒತ್ತಡ ಕಡಿಮೆಯಾಗುತ್ತದೆ. ಈ ಮೂಲಕ ಡೆಟ್‌ ಫಂಡ್‌ನ ಪೋರ್ಟ್‌ಫೋಲಿಯೋದಲ್ಲಿರುವ ಬಾಂಡ್‌ಗಳ ಕ್ರೆಡಿಟ್ ಇಳಿಕೆ ಮಾಡಿದರೆ, ನಿಮ್ಮ ರಿಟರ್ನ್ಸ್ ಕೂಡ ಇಳಿಕೆಯಾಗುತ್ತದೆ.

ಡೀಫಾಲ್ಟ್‌ ರಿಸ್ಕ್‌ ಹೆಚ್ಚಳ ಅಥವಾ ಬಡ್ಡಿ ನೀಡುವ ಮತ್ತು ಅಸಲು ವಾಪಸು ಮಾಡುವಲ್ಲಿ ಬಾಂಡ್‌ ವಿತರಕರು ವಿಫಲವಾಗುವ ಸಾಧ್ಯತೆಯ ಹೆಚ್ಚಳವು ಡೆಟ್ ಫಂಡ್‌ಗಳಿಂದ ರಿಟರ್ನ್ಸ್‌ ಮೇಲೆ ಪರಿಣಾಮ ಬೀರುತ್ತದೆ. ಯಾಕೆಂದರೆ ಬಡ್ಡಿ ಪಾವತಿಯು ಫಂಡ್‌ನಲ್ಲಿ ನಿಮ್ಮ ಒಟ್ಟು ರಿಟರ್ನ್‌ಗೆ ಮಹತ್ವದ ಭಾಗವಾಗಿರುತ್ತದೆ.

436
ನಾನು ಹೂಡಿಕೆ ಮಾಡಲು ಸಿದ್ಧ