ಇಟಿಎಫ್‌ಗಳಲ್ಲಿ ಹೂಡಿಕೆ ಮಾಡುವ ಅನುಕೂಲಗಳು ಯಾವುವು?

ಇಟಿಎಫ್‌ಗಳಲ್ಲಿ ಹೂಡಿಕೆ ಮಾಡುವ ಅನುಕೂಲಗಳು ಯಾವುವು?

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ಸಾಮಾನ್ಯ ಮ್ಯೂಚುವಲ್‌ ಫಂಡ್‌ಗಳಿಗೆ ಹೋಲಿಸಿದರೆ ಎಕ್ಸ್‌ಚೇಂಜ್‌ ಟ್ರೇಡೆಡ್‌ ಫಂಡ್ಸ್ (ಇಟಿಎಫ್‌ಗಳು) ಹಲವು ಅನುಕೂಲಗಳನ್ನು ಒದಗಿಸುತ್ತವೆ. ಮ್ಯೂಚುವಲ್‌ ಫಂಡ್‌ಗಳಲ್ಲಿ ಹಣ ಕಳೆದುಕೊಳ್ಳುವ ಭೀತಿ ಹೊಂದಿರುವ ಮೊದಲ ಬಾರಿಗೆ ಈಕ್ವಿಟಿ ಹೂಡಿಕೆ ಮಾಡುವವರಿಗೆ ಇವು ಉತ್ತಮ ವಿಧಾನವಾಗಿದೆ. ಯಾಕೆ? ಎಂಬ ವಿವರ ಇಲ್ಲಿದೆ

• ಇಟಿಎಫ್‌ಗಳು ಜನಪ್ರಿಯ ಇಂಡೆಕ್ಸ್ ಅನ್ನು ಅನುಕರಿಸುತ್ತವೆ. ಆ ಇಂಡೆಕ್ಸ್‌ನಲ್ಲಿರುವ ಎಲ್ಲ ಸೆಕ್ಯುರಿಟಿಗಳನ್ನೂ ಇವು ಹೊಂದಿರುತ್ತವೆ ಮತ್ತು ಮ್ಯೂಚುವಲ್‌ ಫಂಡ್‌ಗಳಲ್ಲಿ ಅತ್ಯಂತ ಹೆಚ್ಚಿನ ವೈವಿಧ್ಯತೆಯನ್ನು ಒದಗಿಸುತ್ತವೆ • ಅನುಕರಿಸುವ ಕಾರ್ಯತಂತ್ರದಲ್ಲಿ (ಪ್ಯಾಸಿವ್ ಫಂಡ್‌ ನಿರ್ವಹಣೆ) ಸಕ್ರಿಯವಾಗಿ ನಿರ್ವಹಿಸಿದ ಫಂಡ್‌ಗಳಿಗಿಂತ ಕಡಿಮೆ ವಹಿವಾಟು ನಡೆಸುತ್ತವೆ. ಇವು ತಮ್ಮ ಪೋರ್ಟ್‌ಫೋಲಿಯೋದಿಂದ ಸೆಕ್ಯುರಿಟಿಗಳನ್ನು ಖರೀದಿ ಅಥವಾ ಮಾರಾಟ ಮಾಡಿ ತಮ್ಮ ಬೆಂಚ್‌ ಮಾರ್ಕ್‌ಗಿಂತ ಹೆಚ್ಚಿನ ರಿಟರ್ನ್‌ ನೀಡುತ್ತವೆ. ಸಕ್ರಿಯವಾಗಿ ನಿರ್ವಹಿಸಿದ ಮ್ಯೂಚುವಲ್‌ ಫಂಡ್‌ಗಳಲ್ಲಿನ ಈ ಮೊತ್ತವು ಅಧಿಕ ತೆರಿಗೆಗೆ ಬಾಧ್ಯವಾಗುತ್ತವೆ. ಯಾಕೆಂದರೆ ಇವು ತಮ್ಮ ಪೋರ್ಟ್‌ಫೋಲಿಯೋದಲ್ಲಿನ ಸೆಕ್ಯುರಿಟಿಗಳನ್ನು ಖರೀದಿ ಮಾಡುವಾಗ ಅಥವಾ ಮಾರಾಟ ಮಾಡುವಾಗ ಎಸ್‌ಟಿಟಿ (ಸೆಕ್ಯುರಿಟಿ ವಹಿವಾಟು ತೆರಿಗೆ) ಮತ್ತು ಕ್ಯಾಪಿಟಲ್ ಗೇನ್ಸ್‌ ತೆರಿಗೆಯನ್ನು ಪಾವತಿ ಮಾಡಬೇಕಾಗುತ್ತದೆ. ಹೀಗಾಗಿ, ಇತರ ಮ್ಯೂಚುವಲ್‌ ಫಂಡ್‌ಗಳಿಗೆ ಹೋಲಿಸಿದರೆ ಇಟಿಎಫ್‌ಗಳು ಹೆಚ್ಚು ತೆರಿಗೆ ದಕ್ಷವಾಗಿವೆ.

• ಸಕ್ರಿಯ ರಿಟರ್ನ್ಸ್‌ ಅನ್ನು ಗಳಿಸಿ, ತಮ್ಮ ಬೆಂಚ್‌ಮಾರ್ಕ್ ಇಂಡೆಕ್ಸ್‌ಗಿಂತ ಹೆಚ್ಚು ರಿಟರ್ನ್ಸ್‌ ಪಡೆಯಲು ಅತ್ಯಂತ ಕುಶಲ ಫಂಡ್‌ ಮ್ಯಾನೇಜರುಗಳನ್ನು ನೇಮಿಸಿಕೊಳ್ಳಬೇಕಿರುವ, ಸಕ್ರಿಯವಾಗಿ ನಿರ್ವಹಿಸಿದ ಮ್ಯೂಚುವಲ್‌ ಫಂಡ್‌ಗಳಿಗೆ ಹೋಲಿಸಿದರೆ, ಇಟಿಎಫ್‌ಗಳು ಕಡಿಮೆ ವೆಚ್ಚ ಅನುಪಾತವನ್ನು ಹೊಂದಿವೆ.

• ಇಟಿಎಫ್‌ಗಳು ಎಕ್ಸ್‌ಚೇಂಜ್‌ಗಳಲ್ಲಿ ಲಿಸ್ಟ್ ಮಾಡಲ್ಪಟ್ಟಿದ್ದು ಸ್ಟಾಕ್‌ಗಳ ರೀತಿ ವ್ಯಾಪಾರ ನಡೆಸುವುದರಿಂದಾಗಿ ಹೆಚ್ಚು ಅನುಕೂಲ ಮತ್ತು ಲಿಕ್ವಿಡಿಟಿಯನ್ನು ಹೂಡಿಕೆದಾರರಿಗೆ ಒದಗಿಸುತ್ತವೆ. ಮಾರ್ಕೆಟ್‌ ವಹಿವಾಟು ಅವಧಿಯಲ್ಲಿ ನೈಜ ಸಮಯದ ಬೆಲೆಗಳಲ್ಲಿ ಇಟಿಎಫ್‌ ಫಂಡ್‌ಗಳಲ್ಲಿ ಹೂಡಿಕೆದಾರರು ವಹಿವಾಟು ನಡೆಸಬಹುದು. ಆದರೆ ಸಕ್ರಿಯವಾಗಿ ನಿರ್ವಹಿಸಿದ ಮ್ಯೂಚುವಲ್‌ ಫಂಡ್‌ಗಳಲ್ಲಿ ಮಾರ್ಕೆಟ್‌ ಮುಗಿದ ನಂತರ ದಿನದ ಕೊನೆಯಲ್ಲಿ ಮಾತ್ರ ಎನ್‌ಎವಿಯನ್ನು ಲೆಕ್ಕ ಮಾಡಲಾಗುತ್ತದೆ. ಈಕ್ವಿಟಿ ಹೂಡಿಕೆಯ ಬಗ್ಗೆ ನಿಮಗೆ ಖಚಿತವಿಲ್ಲದಿದ್ದರೆ, ಇಟಿಎಫ್‌ಗಳು ನಿಮಗೆ ಉತ್ತಮ ಆರಂಭವಾಗಿರುತ್ತವೆ!

436
ನಾನು ಹೂಡಿಕೆ ಮಾಡಲು ಸಿದ್ಧ