ದೀರ್ಘಕಾಲದವರೆಗೆ ಹೂಡಿಕೆ ಮಾಡಿರುವುದರಲ್ಲಿ ಯಾವ ಲಾಭವಿದೆ?

ದೀರ್ಘಕಾಲದವರೆಗೆ ಹೂಡಿಕೆ ಮಾಡಿರುವುದರಲ್ಲಿ ಯಾವ ಲಾಭವಿದೆ? zoom-icon

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ದೀರ್ಘಕಾಲದವರೆಗೆ ಹೂಡಿಕೆ ಎಂಬ ಸಲಹೆಯನ್ನು ಹಲವು ಮ್ಯೂಚುವಲ್‌ ಫಂಡ್ ವಿತರಕರು ಮತ್ತು ಹೂಡಿಕೆ ಸಲಹೆಗಾರರು ನೀಡುತ್ತಲೇ ಇರುತ್ತಾರೆ. ಇದು ಕೆಲವು ಮ್ಯೂಚುವಲ್‌ ಫಂಡ್‌ಗಳ ವಿಚಾರದಲ್ಲಿ ವಾಸ್ತವವೂ ಹೌದು. ಈಕ್ವಿಟಿ ಮತ್ತು ಬ್ಯಾಲೆನ್ಸ್‌ಡ್‌ ಫಂಡ್ ವಿಚಾರದಲ್ಲಿ ಇದು ನಿಜ.

ಯಾಕೆ ವೃತ್ತಿಪರರು ಇಂತಹ ಸಲಹೆಯನ್ನು ನೀಡುತ್ತಾರೆ ಎಂದು ನೋಡೋಣ. ದೀರ್ಘಕಾಲದಲ್ಲಿ ನಿಜವಾಗಿಯೂ ಏನಾಗುತ್ತದೆ? ದೀರ್ಘಕಾಲದವರೆಗೆ ಹೂಡಿಕೆ ಮಾಡುವುದರಲ್ಲಿ ಯಾವುದೇ ಲಾಭ ಇದೆಯೇ?

ನಿಮ್ಮ ಮ್ಯೂಚುವಲ್‌ ಫಂಡ್ ಅನ್ನು ಉತ್ತಮ ಗುಣಮಟ್ಟದ ಬ್ಯಾಟ್ಸ್‌ಮನ್‌ ಎಂದು ತಿಳಿಯಿರಿ. ಪ್ರತಿ ಉತ್ತಮ ಗುಣಮಟ್ಟದ ಬ್ಯಾಟ್ಸ್‌ಮನ್‌ಗೂ ಬ್ಯಾಟಿಂಗ್‌ನ ಒಂದು ನಿರ್ದಿಷ್ಟ ಸ್ಟೈಲ್ ಇರುತ್ತದೆ. ಆದರೆ ಎಲ್ಲ ಒಳ್ಳೆಯ ಬ್ಯಾಟ್ಸ್‌ ಮನ್‌ ಕೂಡ ಹಲವು ವರ್ಷಗಳವರೆಗೆ ಬ್ಯಾಟಿಂಗ್ ಮಾಡುತ್ತಲೇ ಇದ್ದರೆ ಒಳ್ಳೆಯ ರನ್‌ ಗಳಿಸುತ್ತಾನೆ.

ನಾವು “ಉತ್ತಮ ಗುಣಮಟ್ಟದ” ಬ್ಯಾಟ್ಸ್‌ಮನ್‌ನ ದಾಖಲೆಯ ಬಗ್ಗೆ ಮಾತನಾಡುತ್ತಿದ್ದೇವೆ. ಪ್ರತಿಯೊಬ್ಬ ಒಳ್ಳೆಯ ಬ್ಯಾಟ್ಸ್‌ಮನ್‌ ಕೂಡ ಒಂದಷ್ಟು ಒಳ್ಳೆಯ ಮತ್ತು ಒಂದಷ್ಟು ಕೆಟ್ಟ ಪರ್ಫಾರ್ಮೆನ್ಸ್‌ ಕೊಟ್ಟಿರುತ್ತಾನೆ. ಒಟ್ಟಾರೆ ಪರ್ಫಾರ್ಮೆನ್ಸ್ ನೋಡಿದಾಗ ಚೆನ್ನಾಗಿಯೇ ಇರುತ್ತದೆ.

ಇದೇ ರೀತಿ, ಒಳ್ಳೆಯ ಮ್ಯೂಚುವಲ್‌ ಫಂಡ್ ಕೂಡ ಒಂದಷ್ಟು ಏರಿಳಿತವನ್ನು ಕಂಡಿರುತ್ತದೆ. ಇದು ಫಂಡ್‌ ಮ್ಯಾನೇಜರ್ ನಿಯಂತ್ರಣಕ್ಕೂ ಮೀರಿರುತ್ತದೆ. ದೀರ್ಘ ಅವಧಿಯವರೆಗೆ ಹೂಡಿಕೆದಾರ ಹೂಡಿಕೆ ಮಾಡಿದ್ದರೆ, ಆತನಿಗೆ ಹೆಚ್ಚು ಲಾಭ ಸಿಗುತ್ತದೆ. ಹೀಗಾಗಿ, ಸಾಧ್ಯವಾದಷ್ಟೂ ಹೆಚ್ಚಿನ ಅವಧಿಗೆ ಹೂಡಿಕೆ ಮಾಡಿರಿ.

ಅದರಲ್ಲೂ ಎಲ್ಲಿಯವರೆಗೆ ನೀವು ನಿಭಾಯಿಸಬಹುದೋ ಅಲ್ಲಿಯವರೆಗೆ, ವಿಶೇಷವಾಗಿ ಈಕ್ವಿಟಿ ಮತ್ತು ಬ್ಯಾಲೆನ್ಸಡ್‌ ಫಂಡ್‌ಗಳಲ್ಲಿ ದೀರ್ಘಕಾಲದವರೆಗೆ ಹೂಡಿಕೆ ಮಾಡಿ.

434
ನಾನು ಹೂಡಿಕೆ ಮಾಡಲು ಸಿದ್ಧ