ಚಂಚಲ ಮಾರುಕಟ್ಟೆಯಲ್ಲಿ ಎಸ್ಐಪಿ ಮೂಲಕ ಹೂಡಿಕೆಯನ್ನು ಯಾಕೆ ಮುಂದುವರಿಸಬೇಕು?

Video

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ಮಾರುಕಟ್ಟೆಯು ಚಂಚಲವಾದಾಗ ಹಲವು ಹೂಡಿಕೆದಾರರು ತಮ್ಮ ಹೂಡಿಕೆ ನಿರ್ಧಾರದ ಬಗ್ಗೆ ಅನುಮಾನ ಹೊಂದುತ್ತಾರೆ ಮತ್ತು ಎಸ್ಐಪಿ ನಿಲ್ಲಿಸುವ ಬಗ್ಗೆ ಅಥವಾ ಹೂಡಿಕೆಯನ್ನು ಹಿಂಪಡೆಯುವ ಬಗ್ಗೆ ಯೋಚಿಸುತ್ತಾರೆ. ಚಂಚಲ ಮಾರುಕಟ್ಟೆಯಲ್ಲಿ ನಿಮ್ಮ ಹೂಡಿಕೆ ಕುಸಿತ ಕಂಡರೆ ಚಿಂತೆ ಕಾಡುವುದು ಸಹಜ. ಆದರೆ, ವಿಶೇಷವಾಗಿ ಮಾರುಕಟ್ಟೆ ಕುಸಿಯುತ್ತಿರುವಾಗ ಎಸ್ಐಪಿಯಲ್ಲಿ ನೀವು ಹೂಡಿಕೆ ಮಾಡುತ್ತಲೇ ಇರಬೇಕು. ಯಾಕೆಂದರೆ, ಅಷ್ಟೇ ಮೊತ್ತದ ಮಾಸಿಕ ಹೂಡಿಕೆಯಿಂದ ನೀವು ಹೆಚ್ಚು ಯೂನಿಟ್ಗಳನ್ನು ಖರೀದಿಸಬಹುದು. ಆನ್ಲೈನ್ ಸೇಲ್ನಲ್ಲಾಗಲೀ ಅಥವಾ ದಿನಸಿ ಅಂಗಡಿಯಲ್ಲಾಗಲೀ ಶಾಪಿಂಗ್ ಮಾಡುವಾಗ ಚೌಕಾಸಿ ಮಾಡುವುದು ನಮಗೆ ಇಷ್ಟ. ಅಲ್ಲವೇ ಹಾಗೆಯೇ, ಬೆಲೆ ಕುಸಿಯುತ್ತಿರುವಾಗ ಮ್ಯೂಚುವಲ್ ಫಂಡ್ ಹೂಡಿಕೆಯಲ್ಲೂ ಅದನ್ನೇ ಯಾಕೆ ಮಾಡಬಾರದು?

ನಮ್ಮ ಹವಾಮಾನ ಮುನ್ಸೂಚನೆಯಲ್ಲೂ ಮಾರುಕಟ್ಟೆ ಅತ್ಯಂತ ಅನಿರೀಕ್ಷಿತವಾಗಿರುತ್ತದೆ. ಮಾರುಕಟ್ಟೆ ಕುಸಿದಾಯ ಸಗಟು ಹೂಡಿಕೆ ಮಾಡುವಂಥ ಉತ್ತಮ ಸನ್ನಿವೇಶ ನಿಮಗೆ ಯಾವಾಗಲೂ ಸಿಗುವುದಿಲ್ಲ. ನೀವು ಹೂಡಿಕೆ ಮಾಡಿದ ನಂತರ ಮತ್ತೆ ಮಾರುಕಟ್ಟೆ ಕುಸಿದರೆ ಏನು ಮಾಡುವುದು? ನೀವು ಮಾರಾಟ ಮಾಡಿದ ನಂತರ ಮಾರುಕಟ್ಟೆ ಏರಿಕೆಯಾಗುವ ಸಾಧ್ಯತೆ ಇರುವ ಹಾಗೆಯೇ ನೀವು ಹೂಡಿಕೆ ಮಾಡಿದಾಗ ಕುಸಿಯುವ ಸಾಧ್ಯತೆಯೂ ಇರುತ್ತದೆ. ಮಾರ್ಕೆಟ್ ಅನ್ನು ಹಿಡಿಯಲು ಹೋದರೆ, ನಿಮಗೆ ಮಾರುಕಟ್ಟೆ ಚಲನೆಯಿಂದ ಬೇಸರವಾದರೆ, ನಿಮ್ಮ ರಿಟರ್ನ್ಸ್ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ, ಮಾರ್ಕೆಟ್ ಏರಿದಾಗ ಮತ್ತು ಕುಸಿದಾಗ, ಸ್ಪಷ್ಟ ಗುರಿಯೊಂದಿಗೆ ಎಸ್ಐಪಿ ಮೂಲಕ ಹೂಡಿಕೆ ಮಾಡುತ್ತಲೇ ಇರುವುದು ಅತ್ಯಂತ ಉತ್ತಮ. ನೀವು ಮಾರುಕಟ್ಟೆಯ ಚಚಂಲತೆಯ ಬಗ್ಗೆ ಚಿಂತೆ ಮಾಡಬೇಕಿಲ್ಲ. ಯಾಕೆಂದರೆ, ಕಾಲಾನಂತರದಲ್ಲಿ ನಿಮ್ಮ ಹೂಡಿಕೆಯ ವೆಚ್ಚವು ಸರಾಸರಿಯಾಗುತ್ತದೆ. 

436
480
ನಾನು ಹೂಡಿಕೆ ಮಾಡಲು ಸಿದ್ಧ