ನನ್ನ ಹಣಕಾಸಿನ ಗುರಿಗಳನ್ನು ಯೋಜಿಸಲು ನನಗೆ ಏನಾದರೂ ಬಾಹ್ಯ ಸಹಾಯ ಸಿಗುವುದೇ?

ನನ್ನ ಹಣಕಾಸಿನ ಗುರಿಗಳನ್ನು ಯೋಜಿಸಲು ನನಗೆ ಏನಾದರೂ ಬಾಹ್ಯ ಸಹಾಯ ಸಿಗುವುದೇ?

ಮ್ಯೂಚುವಲ್‌ ಫಂಡ್‌ ಸೂಕ್ತವೇ??

“ನನ್ನ ಮಗ 9ನೇ ತರಗತಿಯಲ್ಲಿದ್ದಾನೆ. ಆತನ ಆಸಕ್ತಿ ಯಾವುದು ಎಂದು ನನಗೆ ಗೊತ್ತಿಲ್ಲ ಅಥವಾ ಶಿಕ್ಷಣದಲ್ಲಿ ಯಾವ ವಿಧವನ್ನು ಅವನ್ನು ಬಳಸುತ್ತಾನೆ ಎಂಬುದೂ ನನಗೆ ತಿಳಿದಿಲ್ಲ. ಆತ ವಿಜ್ಞಾನ, ವಾಣಿಜ್ಯ ಅಥವಾ ಕಲಾ ವಿಭಾಗಕ್ಕೆ ಹೋಗಬೇಕೆ? ಯಾರಾದರೂ ಸಹಾಯ ಮಾಡಬಹುದೇ?” ಹಲವು ಪಾಲಕರಿಗೆ ಈ ಗೊಂದಲಗಳಿರುತ್ತವೆ. ಈ ಸಮಯದಲ್ಲಿ ನಾವು ಶಿಕ್ಷಣ ಅಥವಾ ವೃತ್ತಿ, ಸಲಹೆಗಾರರ ಸಲಹೆಯನ್ನು ಪಡೆಯಬೇಕು. ಇವರು ಯುವಕರಿಗೆ ಇರುವ ವಿವಿಧ ಆಯ್ಕೆಗಳನ್ನು ಪರಿಶೀಲಿಸಿರುತ್ತಾರೆ.

ಹಣಕಾಸು ಗುರಿಗಳನ್ನು ಸಾಧಿಸಲು ಯೋಜನೆ ರೂಪಿಸುವುದಕ್ಕಾಗಿ ಸಹಾಯವನ್ನು ಬಯಸುವ ಹೂಡಿಕೆದಾರರು ಈ ಮೇಲಿನ ಪ್ರಕರಣದಲ್ಲಿನ ಪಾಲಕರ ಸ್ಥಾನದಲ್ಲಿಯೇ ಇರುತ್ತಾರೆ. ಇತ್ತೀಚಿನ ದಿನಗಳಲ್ಲಿ ತುಂಬಾ ಅತಿಯಾದ   ಮಾಹಿತಿಯನ್ನು ಹೂಡಿಕೆದಾರರು ಪಡೆಯುತ್ತಿದ್ದಾರೆ. ಇದು ಕಂಗೆಡಿಸುವ  ಸಂಗತಿಯಾಗಿದೆ. ಹೆದರುವುದು ಅಥವಾ ತಪ್ಪುಗಳನ್ನು ಮಾಡುವ ಸಾಧ್ಯತೆ ಹೆಚ್ಚಿರುತ್ತದೆ.

ಈ ಸಮಯದಲ್ಲಿ ಹೂಡಿಕೆ ಸಲಹೆಗಾರರು ಅಥವಾ ಮ್ಯೂಚುವಲ್ ಫಂಡ್ ವಿತರಕರು ಇರುವುದು ಒಳ್ಳೆಯದು.

ಹೂಡಿಕೆದಾರರ ಹಣಕಾಸು ಸನ್ನಿವೇಶವನ್ನು ಇವರು ವಿಶ್ಲೇಷಿಸುತ್ತಾರೆ ಮತ್ತು ಹಣಕಾಸಿನ ಗುರಿಗಳನ್ನು ನೋಡುತ್ತಾರೆ. ಇದರ ಆಧಾರದಲ್ಲಿ, ಹೂಡಿಕೆ ಮಾಡಲು ವಿವಿಧ ಸ್ಕೀಮ್‌ಗಳನ್ನು ಅವರು ಶಿಫಾರಸು ಮಾಡುತ್ತಾರೆ. ಇಂತಹ ವ್ಯಕ್ತಿಯು ವಿವಿಧ ಮ್ಯೂಚುವಲ್‌ ಫಂಡ್‌ ಸ್ಕೀಮ್‌ಗಳ ಬಗ್ಗೆ ತುಂಬಾ ತಿಳಿದುಕೊಂಡಿರಬೇಕು ಮತ್ತು ಹೂಡಿಕೆದಾರರ ಸನ್ನಿವೇಶ ಮತ್ತು ವಿವಿಧ ಶಿಫಾರಸು ಮಾಡಿದ ಸ್ಕೀಮ್‌ಗಳೆರಡರ ಮೇಲೂ ನಿಯತವಾಗಿ ಕಣ್ಣಿಟ್ಟಿರಬೇಕು. ಇಂತಹ ಅನುಸಂಧಾನವು ಹೂಡಿಕೆದಾರರು ಹಣಕಾಸು ಗುರಿಗಳನ್ನು ಮ್ಯೂಚುವಲ್‌ ಫಂಡ್‌ಗಳ ಮೂಲಕ ಸಾಧಿಸಲು ನೆರವು ನೀಡುತ್ತದೆ.

441
ನಾನು ಹೂಡಿಕೆ ಮಾಡಲು ಸಿದ್ಧ