ಮ್ಯೂಚುವಲ್‌ ಫಂಡ್ ವಿತರಕರು ಮತ್ತು ಹೂಡಿಕೆ ಸಲಹೆಗಾರರ ಮಧ್ಯೆ ವ್ಯತ್ಯಾಸ ಏನಿದೆ?

ಮ್ಯೂಚುವಲ್‌ ಫಂಡ್ ವಿತರಕರು ಮತ್ತು ಹೂಡಿಕೆ ಸಲಹೆಗಾರರ ಮಧ್ಯೆ ವ್ಯತ್ಯಾಸ ಏನಿದೆ?

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ಒಂದು ರೀತಿಯಲ್ಲಿ , ನಿಮ್ಮ ಹೂಡಿಕೆ ನಿರ್ಧಾರಗಳಲ್ಲಿ ಇಬ್ಬರೂ ಸಹಾಯ ಮಾಡುತ್ತಾರೆ. ಇವರ ಸಲಹೆಗಳಲ್ಲಿ ಮ್ಯೂಚುವಲ್‌ ಫಂಡ್ ಸ್ಕೀಮ್‌ಗಳ ಆಯ್ಕೆಯೂ ಒಳಗೊಂಡಿರುತ್ತದೆ. ಆದರೆ, ಹೆಸರೇ ಹೇಳುವಂತೆ ಮ್ಯೂಚುವಲ್‌ ಫಂಡ್ ವಿತರಕರು ಸಾಮಾನ್ಯವಾಗಿ ಮ್ಯೂಚುವಲ್‌ ಫಂಡ್ ಉತ್ಪನ್ನಗಳ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸಿರುತ್ತಾರೆ. ಇನ್ನು, ಹೂಡಿಕೆ ಸಲಹೆಗಾರರು ವಿವಿಧ ರೀತಿಯ ಉತ್ಪನ್ನಗಳು ಮತ್ತು ಸೇವೆಗಳ ಬಗ್ಗೆಯೂ ಪರಿಣಿತಿ ಹೊಂದಿರಬಹುದು.

ಕಮಿಷನ್ ಗಳಿಸುವುದಕ್ಕೋಸ್ಕರ ಯಾವುದೇ ಮ್ಯೂಚುವಲ್‌ ಫಂಡ್‌ ಸ್ಕೀಮ್‌ ಅನ್ನು ಮ್ಯೂಚುವಲ್‌ ಫಂಡ್‌ ವಿತರಕರು ಮಾರುತ್ತಾರೆ ಎಂದು ಅರ್ಥವೇ? ಈ ನಿಟ್ಟಿನಲ್ಲಿ ನಿಯಂತ್ರಕಗಳು ತುಂಬಾ ಕಟ್ಟುನಿಟ್ಟಾಗಿರುತ್ತವೆ. ಸೂಕ್ತವಲ್ಲದ ಮ್ಯೂಚುವಲ್‌ ಫಂಡ್ ಸ್ಕೀಮ್‌ ಅನ್ನು ಹೂಡಿಕೆದಾರರಿಗೆ ಮ್ಯೂಚುವಲ್‌ ಫಂಡ್ ವಿತರಕರು ಮಾರಾಟ ಮಾಡಿದರೆ, ಅದನ್ನು “ತಪ್ಪು ಮಾರಾಟ” ಎಂದು ಕರೆಯಲಾಗುತ್ತದೆ. ಇದು ಅಪರಾಧವಾಗಿರುತ್ತದೆ.

ಹೂಡಿಕೆದಾರ ಸನ್ನಿವೇಶ/ರಿಸ್ಕ್ ಪ್ರೊಫೈಲ್‌ ಅನ್ನು ಮ್ಯೂಚುವಲ್‌ ಫಂಡ್ ವಿತರಕರು ತಿಳಿದುಕೊಳ್ಳಬೇಕು ಮತ್ತು ಶಿಫಾರಸು ಮಾಡುವ ಸಮಯದಲ್ಲಿ ಹೂಡಿಕೆದಾರರ ಅಗತ್ಯಕ್ಕೆ ಸೂಕ್ತವಾದ ಉತ್ಪನ್ನಗಳನ್ನು ಶಿಫಾರಸು ಮಾಡಬೇಕು. ಇನ್ನೊಂದೆಡೆ, ಹೂಡಿಕೆ ಸಲಹೆಗಾರರು ವಿಶಾಲವಾದ ಚಿತ್ರವನ್ನು ನೋಡುತ್ತಾರೆ. ಇದರಲ್ಲಿ ಹೂಡಿಕೆದಾರರ ಸ್ವತ್ತುಗಳು, ಆದಾಯ ಮತ್ತು ವೆಚ್ಚಗಳು ಹಾಗೂ ಶಿಫಾರಸು ಮಾಡಿದ ಉತ್ಪನ್ನಗಳ ವಿಶ್ಲೇಷಣೆಯೂ ಸೇರಿರಬಹುದು.

ಇವೆರಡೂ ನೋಂದಾಯಿತ ಸಂಸ್ಥೆಗಳಾಗಿದ್ದು, ಇವು ನಿಯಂತ್ರಣಕ್ಕೂ ಒಳಪಟ್ಟಿರುತ್ತದೆ. ಹೂಡಿಕೆ ಸಲಹೆಗಾರರು ಸೆಬಿಯಲ್ಲಿ ನೇರವಾಗಿ ನೋಂದಣಿ ಹೊಂದಿದ್ದು, ಮ್ಯೂಚುವಲ್‌ ಫಂಡ್ ವಿತರಕರು ಎಎಂಎಫ್‌ಐ ಅಂದರೆ ಭಾರತೀಯ ಮ್ಯೂಚುವಲ್‌ ಫಂಡ್‌ಗಳ ಸಂಘಟನೆಯಲ್ಲಿ ನೋಂದಣಿ ಮಾಡಿಕೊಂಡಿರುತ್ತಾರೆ. ಇದು ಮ್ಯೂಚುವಲ್‌ ಫಂಡ್ ಉದ್ಯಮದ ಸಂಘಟನೆಯಾಗಿರುತ್ತದೆ.

434
ನಾನು ಹೂಡಿಕೆ ಮಾಡಲು ಸಿದ್ಧ