ಮ್ಯೂಚುವಲ್‌ ಫಂಡ್‌ಗಳಲ್ಲಿ ಹೂಡಿಕೆ ಮಾಡುವ ವಿವಿಧ ವಿಧಾನಗಳು ಯಾವುವು?

ಮ್ಯೂಚುವಲ್‌ ಫಂಡ್‌ಗಳಲ್ಲಿ ಹೂಡಿಕೆ ಮಾಡುವ ವಿವಿಧ ವಿಧಾನಗಳು ಯಾವುವು? zoom-icon

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ಮ್ಯೂಚುವಲ್‌ ಫಂಡ್‌ ಸ್ಕೀಮ್‌ನಲ್ಲಿ ಹೂಡಿಕೆ ಆರಂಭಿಸಲು ಹಲವು ವಿಧಾನಗಳಿವೆ.

ಭರ್ತಿ ಮಾಡಿದ ಅರ್ಜಿ, ಚೆಕ್‌ ಅಥವಾ ಬ್ಯಾಂಕ್‌ ಡ್ರಾಫ್ಟ್‌ಅನ್ನು ಮ್ಯೂಚುವಲ್‌ ಫಂಡ್‌ಗಳ ಹೂಡಿಕೆದಾರರ ಸೇವಾ ಕೇಂದ್ರಗಳು (ಐಎಸ್‌ಸಿ) ಅಥವಾ ಶಾಖೆ ಕಚೇರಿಗಳು ಅಥವಾ ಸಂಬಂಧಿತ ಮ್ಯೂಚುವಲ್‌ ಫಂಡ್‌ಗಳ ರಿಜಿಸ್ಟ್ರಾರ್‌ಮತ್ತು ಟ್ರಾನ್ಸ್‌ಪರ್‌ಏಜೆಂಟ್‌ಗಳಲ್ಲಿ ಸಲ್ಲಿಸುವ ಮೂಲಕ ಹೂಡಿಕೆ ಮಾಡಬಹುದು.

ಸಂಬಂಧಿತ ಮ್ಯೂಚುವಲ್‌ ಫಂಡ್‌ಗಳ ವೆಬ್‌ಸೈಟ್‌ಗಳ ಮೂಲಕ ಆನ್‌ಲೈನ್‌ನಲ್ಲಿ ಹೂಡಿಕೆಯನ್ನೂ ಮಾಡಬಹುದು.

ಇನ್ನೂ ಮುಂದುವರಿದು,  ಹಣಕಾಸು ಮಧ್ಯವರ್ತಿಗಳು ಅಂದರೆ ಎಎಂಎಫ್‌ಐನಲ್ಲಿ ನೋಂದಾಯಿಸಿಕೊಂಡ ಮ್ಯೂಚುವಲ್‌ ಫಂಡ್ ಡಿಸ್ಟ್ರಿಬ್ಯೂಟರ್‌ ಸಹಾಯದಿಂದ ಹೂಡಿಕೆ ಮಾಡಬಹುದು ಅಥವಾ ಯಾವುದೇ ವಿತರಕರ ಮಧ್ಯವರ್ತಿತನ ಇಲ್ಲದೇ ಅಥವಾ ಸಹಾಯ ಪಡೆಯದೇ ನೇರವಾಗಿಯೂ ಹೂಡಿಕೆ ಮಾಡಬಹುದು.

ಮ್ಯೂಚುವಲ್‌ ಫಂಡ್ ವಿತರಕರು ವೈಯಕ್ತಿಕ ಅಥವಾ ವೈಯಕ್ತಿಕೇತರ ಸಂಸ್ಥೆಯಾಗಿರುವ ಬ್ಯಾಂಕ್‌, ಬ್ರೋಕರಿಂಗ್ ಹೌಸ್‌ಅಥವಾ ಆನ್ ಲೈನ್‌ಡಿಸ್ಟ್ರಿಬ್ಯೂಶನ್ ಚಾನೆಲ್ ಪಾಲುದಾರ ಆಗಿರಬಹುದು.

 ಇತ್ತೀಚಿನ ದಿನಗಳಲ್ಲಿ ಸುರಕ್ಷಿತ ಹೂಡಿಕೆ ಅಗತ್ಯಕ್ಕೆ ಪ್ಲಾಟ್‌ಫಾರಂಗಳು ಎಲ್ಲ ಅಗತ್ಯ ಸುರಕ್ಷತಾ ಕ್ರಮಗಳನ್ನೂ ಹೊಂದಿರುತ್ತವೆ. ಇದು ಹೆಚ್ಚಾಗಿ ಅನುಕೂಲದ ಸಂಗತಿಯಾಗಿರುತ್ತದೆ.

436
ನಾನು ಹೂಡಿಕೆ ಮಾಡಲು ಸಿದ್ಧ