ಬಳಕೆಯ ನಿಯಮಗಳು ಮತ್ತು ಗೌಪ್ಯತೆ ನೋಟಿಸ್

www.mutualfundssahihai.com.  ಗೆ ಭೇಟಿ ನೀಡಿದ್ದಕ್ಕೆ ಧನ್ಯವಾದಗಳು. ನಾವು ನಿಮ್ಮ ಗೌಪ್ಯತೆಯನ್ನು ಗೌರವಿಸುತ್ತೇವೆ ಮತ್ತು ನಮ್ಮ ಸೇವೆಯ ಪ್ರಮುಖ ಅಂಶವನ್ನಾಗಿ ಇದನ್ನು ನಾವು ಪರಿಗಣಿಸಿದ್ದೇವೆ. ನಮ್ಮ ಖಾಸಗಿತ್ವ ನೀತಿ ನೇರವಾಗಿದೆ: ನೀವು ನಮ್ಮ ವೆಬ್‌ಸೈಟ್‌ ಬೇಟಿ ನೀಡಿದಾಗ ನಮಗೆ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಸ್ವಯಂಪ್ರೇರಿತವಾಗಿ ನೀಡಲು ನೀವು ಬಯಸದಿದ್ದರೆ, ನಿಮ್ಮ ವೈಯಕ್ತಿಕ ಮಾಹಿತಿಯನ್ನು ನಾವು ಸಂಗ್ರಹಿಸುವುದಿಲ್ಲ.

ಕೇವಲ ಬ್ರೌಸ್‌ ಮಾಡಲು, ಪುಟಗಳನ್ನು ಓದಲು ಅಥವಾ ಮಾಹಿತಿ ಡೌನ್‌ಲೋಡ್ ಮಾಲು ನೀವು ನಮ್ಮ ವೆಬ್‌ಸೈಟ್‌ಗೆ ಭೇಟಿ ನೀಡಿದರೆ, ನಿಮ್ಮ ಭೇಟಿಯ ಬಗ್ಗೆ ಕೆಲವು ಮಾಹಿತಿಯನ್ನು ಸ್ವಯಂಚಾಲಿತವಾಗಿ ನಾವು ಪಡೆಯುತ್ತೇವೆ ಮತ್ತು ಸಂಗ್ರಹಿಸುತ್ತೇವೆ. ಈ ಮಾಹಿತಿಯು ನಿಮ್ಮನ್ನು ವೈಯಕ್ತಿಕವಾಗಿ ಗುರುತಿಸುವುದಿಲ್ಲ ಮತ್ತು ಗುರುತಿಸಲು ಸಾಧ್ಯವಿರುವುದಿಲ್ಲ. ಸ್ವಯಂಚಾಲಿತವಾಗಿ ಜನರೇಟ್ ಆಗುವ ಮಾಹಿತಿಯಲ್ಲಿ ನೀವು ಬಳಸುತ್ತಿರುವ ಬ್ರೌಸರ್‌ನ ವಿಧ (ಉದಾ., ಇಂಟರ್ನೆಟ್ ಎಕ್ಸ್‌ಪ್ಲೋರರ್‌, ಫೈರ್‌ಫಾಕ್ಸ್‌ ಇತ್ಯಾದಿ), ನೀವು ಬಳಸುತ್ತಿರುವ ಆಪರೇಶನ್‌ ಸಿಸ್ಟಂನ ವಿಧ (ಉದಾ., ವಿಂಡೋಸ್ ಅಥವಾ ಮ್ಯಾಕ್ ಒಎಸ್‌) ಮತ್ತು ನಿಮ್ಮ ಇಂಟರ್ನೆಟ್‌ ಸೇವೆ ಪೂರೈಕೆದಾರರ ಡೊಮೇನ್‌ ಹೆಸರು, ನಿಮ್ಮ ಭೇಟಿಯ ದಿನಾಂಕ ಮತ್ತು ಸಮಯ ಹಾಗೂ ನೀವು ಭೇಟಿ ಮಾಡಿದ ಪುಟಗಳ ವಿವರಗಳು ಒಳಗೊಂಡಿರುತ್ತವೆ. ನಮ್ಮ ವೆಬ್‌ಸೈಟ್‌(ಗಳ) ವಿನ್ಯಾಸ, ವಿಷಯವನ್ನು ಸುಧಾರಿಸಲು ಮತ್ತು ಪ್ರಾಥಮಿಕವಾಗಿ ಉತ್ತಮ ಬ್ರೌಸಿಂಗ್‌ ಅನುಭವವನ್ನು ಒದಗಿಸುವುದಕ್ಕಾಗಿ ಈ ವೈಯಕ್ತಿಕವಲ್ಲದ ಗುರುತಿಸಬಹುದಾದ ಮಾಹಿತಿಯನ್ನು ಕೆಲವ ಬಾರಿ ಬಳಸುತ್ತೇವೆ.

ಕುಕೀಗಳ ನೀತಿ

ಈ ಸೈಟ್‌ನಲ್ಲಿ ನಾವು "ಕುಕೀಗಳನ್ನು" ಬಳಸುತ್ತೇವೆ. ಆದರೆ, ಕುಕೀಗಳ ಬಳಕೆಯು ನಮ್ಮ ಸೈಟ್‌ಗೆ ಯಾವುದೇ ವೈಯಕ್ತಿಕ ಮಾಹಿತಿಯನ್ನು ಬಹಿರಂಗಗೊಳಿಸುವುದಿಲ್ಲ. ಕುಕೀ ಎಂಬುದು ಸಂದರ್ಶಕರ ಕಂಪ್ಯೂಟರ್ ಹಾರ್ಡ್‌ ಡ್ರೈವ್‌ನಲ್ಲಿ ಸಂಗ್ರಹವಾಗುವ ಡೇಟಾದ ತುಣುಕಾಗಿದ್ದು, ಸಂದರ್ಶಕರು ಈಗಾಗಲೇ ಭೇಟಿ ನೀಡಿದ ವೆಬ್‌ಸೈಟ್‌ಗಳಿಗೆ ಪ್ರವೇಶಾವಕಾಶವನ್ನು ಸುಧಾರಿಸಲು ಇದು ಸಹಾಯ ಮಾಡುತ್ತದೆ. ಬ್ರೌಸಿಂಗ್ ಮಾಹಿತಿಯನ್ನು ಗುರುತಿಸಲು ಕುಕೀಗಳು ಸಹಾಯ ಮಾಡುತ್ತವೆ.

ನಮ್ಮ ವೆಬ್‌ಸೈಟ್‌ಗೆ ನೀವು ಭೇಟಿ ನೀಡಿದರೆ, ಈ ಕುಕೀಗಳ ರೂಪದಲ್ಲಿ ನಿಮ್ಮ ಕಂಪ್ಯೂಟರಿನಲ್ಲಿ ಮಾಹಿತಿಯನ್ನು ಉಳಿಸಬಹುದು. ಇದು ನಮ್ಮ ಹೋಮ್‌ಪೇಜ್‌ಗೆ ಮುಂದಿನ ಬಾರಿ ನೀವು ಭೇಟಿ ನೀಡಿದಾಗ ಸ್ವಯಂಚಾಲಿತವಾಗಿ ನಿಮ್ಮ ಕಂಪ್ಯೂಟರನ್ನು ಗುರುತಿಸಲು ನಮಗೆ ಸಹಾಯ ಮಾಡುತ್ತದೆ. ಇದು ನಿಮ್ಮ ಬ್ರೌಸಿಂಗ್ ಅನುಭವವನ್ನು ಸುಧಾರಿಸಲು ಇದು ನಮಗೆ ಸಹಾಯ ಮಾಡುತ್ತದೆ.

ನಿಮ್ಮ ಮಶೀನ್‌ನಲ್ಲಿ ನಮ್ಮ ವೆಬ್‌ಸೈಟ್‌ಗಳು ಕುಕೀಗಳನ್ನು ಇಡಲು ನೀವು ಬಯಸದೇ ಇದ್ದರೆ, ಕುಕೀಗಳನ್ನು ಅಳಿಸುವ ಅಥವಾ ಕುಕೀಗಳನ್ನು ನಿರ್ಬಂಧಿಸುವ ಅಥವಾ ಕುಕೀಗಳನ್ನು ಬಳಕೆ ಮಾಡುವ ವೆಬ್‌ಸೈಟ್‌ಗಳನ್ನು ಗುರುತಿಸಲು ನಿಮಗೆ ಅನುವು ಮಾಡುವ ರೀತಿಯಲ್ಲಿ ನಿಮ್ಮ ಇಂಟರ್‌ನೆಟ್‌ ಬ್ರೌಸರ್ ಅನ್ನು ಸೆಟಪ್‌ ಮಾಡಿಕೊಳ್ಳಿ.