Skip to main content

ಇನ್ಫ್ಲೇಶನ್ (ಹಣದುಬ್ಬರ) ಕ್ಯಾಲ್ಕುಲೇಟರ್

ನಿಮ್ಮ ಪ್ರಸ್ತುತ ವೆಚ್ಚಗಳು ಮತ್ತು ಭವಿಷ್ಯದ ಗುರಿಗಳ ಮೇಲೆ ಹಣದುಬ್ಬರದ ಪರಿಣಾಮವನ್ನು ಲೆಕ್ಕಹಾಕಿ.

%
ವರ್ಷಗಳು

ಭವಿಷ್ಯದ ವೆಚ್ಚ0

Disclaimer

  1. ಹಿಂದಿನ ಕಾರ್ಯಕ್ಷಮತೆಯು ಭವಿಷ್ಯದಲ್ಲಿ ಉಳಿಯಬಹುದು ಅಥವಾ ಇಲ್ಲದಿರಬಹುದು ಮತ್ತು ಯಾವುದೇ ಭವಿಷ್ಯದ ಆದಾಯದ ಭರವಸೆ ಅಲ್ಲ.
  2. ಈ ಲೆಕ್ಕಾಚಾರಗಳು ಕೇವಲ ಸಾಂದರ್ಭಿಕವಾಗಿವೆ ಮತ್ತು ನಿಜವಾದ ವಾಪಸಾತಿಗಳನ್ನು ಪ್ರತಿನಿಧಿಸುವುದಿಲ್ಲ.
  3. ಮ್ಯೂಚುವಲ್‌ ಫಂಡ್‌ಗಳು ಖಚಿತ ವಾಪಸಾತಿ ದರವನ್ನು ಹೊಂದಿರುವುದಿಲ್ಲ ಮತ್ತು ವಾಪಸಾತಿ ದರವನ್ನು ಊಹಿಸುವುದು ಸಾಧ್ಯವಿಲ್ಲ.
  4. ಮ್ಯೂಚುಯಲ್ ಫಂಡ್ ಹೂಡಿಕೆಗಳು ಮಾರುಕಟ್ಟೆ ಅಪಾಯಗಳಿಗೆ ಒಳಪಟ್ಟಿರುತ್ತವೆ, ಎಲ್ಲಾ ಯೋಜನೆ ಸಂಬಂಧಿತ ದಾಖಲಾತಿಗಳನ್ನು ಜಾಗ್ರತೆಯಿಂದ ಓದಿರಿ.

ಇತರ ಕ್ಯಾಲ್ಕುಲೇಟರ್ಗಳು

SIP Calculator
ಎಸ್‌ಐಪಿ (SIP) ಕ್ಯಾಲ್ಕುಲೇಟರ್

ನಿಮ್ಮ ಮಾಸಿಕ SIP ಹೂಡಿಕೆಯ ಭವಿಷ್ಯದ ಮೌಲ್ಯವನ್ನು ಅಂದಾಜು ಮಾಡಿ.

ಈಗಲೇ ಲೆಕ್ಕ ಹಾಕಿ
goal sip calculator
ಗುರಿ (ಗೋಲ್) SIP ಕ್ಯಾಲ್ಕುಲೇಟರ್

ನಿಮ್ಮ ಗುರಿಯನ್ನು ತಲುಪಲು ಅಗತ್ಯವಿರುವ ಮಾಸಿಕ SIP ಹೂಡಿಕೆಯನ್ನು ಕಂಡುಹಿಡಿಯಿರಿ.

ಈಗಲೇ ಲೆಕ್ಕ ಹಾಕಿ
smart goal calculator
ಸ್ಮಾರ್ಟ್‌ ಗೋಲ್‌ ಕ್ಯಾಲ್ಕುಲೇಟರ್

ನಿಮ್ಮ ಪ್ರಸ್ತುತ ಹೂಡಿಕೆಗಳನ್ನು ಪರಿಗಣಿಸಿ, ಅಗತ್ಯವಿರುವ SIP ಅಥವಾ ಒಟ್ಟು ಮೊತ್ತವನ್ನು ಲೆಕ್ಕಹಾಕುವ ಮೂಲಕ ನಿಮ್ಮ ಹಣಕಾಸಿನ ಗುರಿಗಳನ್ನು ಯೋಜಿಸಿ.

ಈಗಲೇ ಲೆಕ್ಕ ಹಾಕಿ
Cost of delay calculator
ವಿಳಂಬ ವೆಚ್ಚ (ಕಾಸ್ಟ್‌ ಆಫ್ ಡಿಲೇ) ಕ್ಯಾಲ್ಕುಲೇಟರ್

ನೀವು ಹೂಡಿಕೆಯನ್ನು ವಿಳಂಬ ಮಾಡಲು ಯೋಜಿಸುತ್ತಿದ್ದೀರಾ? ನಿಮ್ಮ ಸಂಪತ್ತು ಸೃಷ್ಟಿಯ ಮೇಲೆ ವಿಳಂಬದ ಪರಿಣಾಮವನ್ನು ಪರಿಶೀಲಿಸಿ.

ಈಗಲೇ ಲೆಕ್ಕ ಹಾಕಿ

ಕ್ಯಾಲ್ಕುಲೇಟರ್‌ಗಳನ್ನು ಬಳಸುವುದರ ಪ್ರಯೋಜನಗಳು

finance-planning
ಪ್ರಯಾಣದಲ್ಲಿರುವಾಗ ಹಣಕಾಸು ಯೋಜನೆ
saves-time
ಸಮಯವನ್ನು ಉಳಿಸುತ್ತದೆ
easy-to-use
ಬಳಸಲು ಸುಲಭ
helps-make-informed-decisions
ತಿಳಿವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ

ಇನ್ಫ್ಲೇಶನ್ (ಹಣದುಬ್ಬರ) ಬೆಲೆ ಏರಿಕೆ ಮತ್ತು ವ್ಯಕ್ತಿಯ ಕೊಳ್ಳುವ ಶಕ್ತಿ ಕಡಿಮೆಯಾಗುವುದಕ್ಕೆ ಸಂಬಂಧಿಸಿದೆ. ಇದು ಹಣದುಬ್ಬರವನ್ನು  ಗಮನಿಸಬೇಕಾದ ಪ್ರಮುಖ ಅಂಶವಾಗಿ ಮಾಡುತ್ತದೆ. ಪ್ರತಿಯೊಬ್ಬ ವ್ಯಕ್ತಿಯೂ ಹಣದುಬ್ಬರ ಅವರ ಕೊಳ್ಳುವ ಶಕ್ತಿಯ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕು - ಇದರಿಂದ ಭವಿಷ್ಯದಲ್ಲಿ ಹಣಕಾಸು ನಿರ್ವಹಿಸಲು ಸುಲಭವಾಗುತ್ತದೆ.
ಇನ್ಫ್ಲೇಶನ್ (ಹಣದುಬ್ಬರ) ದರ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಭವಿಷ್ಯದಲ್ಲಿ ನಿಮಗೆ ಎಷ್ಟು ಹಣ ಬೇಕಾಗಬಹುದು ಎಂದು ಲೆಕ್ಕಾಚಾರ ಮಾಡುವುದು ಒಂದು ಬೇಸರದ ಪ್ರಕ್ರಿಯೆ. ಆದರೆ ನೀವು ಹಣದುಬ್ಬರ ಕ್ಯಾಲ್ಕುಲೇಟರ್ ಅನ್ನು ಬಳಸಿಕೊಂಡು ಇದನ್ನು ಸುಲಭವಾಗಿ ಮಾಡಬಹುದು.

ಇನ್ಫ್ಲೇಶನ್ (ಹಣದುಬ್ಬರ) ಕ್ಯಾಲ್ಕುಲೇಟರ್ ಎಂದರೇನು?

ಇನ್ಫ್ಲೇಶನ್ (ಹಣದುಬ್ಬರ) ಕ್ಯಾಲ್ಕುಲೇಟರ್ ನಿಮ್ಮ ಖರೀದಿ ಶಕ್ತಿಯ ಮೇಲೆ ಇನ್ಫ್ಲೇಶನ್ (ಹಣದುಬ್ಬರ) ಪರಿಣಾಮವನ್ನು ಲೆಕ್ಕಾಚಾರ ಮಾಡಲು ಬಳಸಬಹುದಾದ ಆನ್‌ಲೈನ್ ಸಾಧನವಾಗಿದೆ. ಇದು ಪ್ರಾಥಮಿಕವಾಗಿ ಒಂದು ನಿರ್ದಿಷ್ಟ ಅವಧಿಯ ನಂತರ ಹಣದ ಪ್ರಮಾಣದ ಮೌಲ್ಯವನ್ನು ಸೂಚಿಸುತ್ತದೆ.

ಇನ್ಫ್ಲೇಶನ್ (ಹಣದುಬ್ಬರ) ಎಂದರೇನು ಮತ್ತು ಅದು ನಿಮ್ಮ ಉಳಿತಾಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ?

ಇನ್ಫ್ಲೇಶನ್ (ಹಣದುಬ್ಬರ)ವು ಒಂದು ನಿರ್ದಿಷ್ಟ ಅವಧಿಯಲ್ಲಿ ಆರ್ಥಿಕತೆಯಲ್ಲಿ ಸರಕು ಮತ್ತು ಸೇವೆಗಳ ಬೆಲೆಯಲ್ಲಿನ ಸಾಮಾನ್ಯ ಹೆಚ್ಚಳವಾಗಿದೆ. ಇದನ್ನು ಮುಖ್ಯವಾಗಿ ಕಾಲಾನಂತರದಲ್ಲಿ ಖರೀದಿ ಸಾಮರ್ಥ್ಯದಲ್ಲಿನ ಇಳಿಕೆ ಎಂದು ಭಾವಿಸಲಾಗಿದೆ.
ಇನ್ಫ್ಲೇಶನ್ (ಹಣದುಬ್ಬರ)ವು ನಿಮ್ಮ ಉಳಿತಾಯದ ಮೌಲ್ಯವನ್ನು, ವಿಶೇಷವಾಗಿ ನಿಮ್ಮ ಸ್ಥಿರ ಪಾವತಿ ಹೂಡಿಕೆಗಳನ್ನು ಸವೆಸುವ ಪ್ರವೃತ್ತಿಯನ್ನು ಹೊಂದಿದೆ ಏಕೆಂದರೆ ಅವು ಬೆಳೆಯುತ್ತಿರುವ ಬೆಲೆಗಳೊಂದಿಗೆ ವೇಗವನ್ನು ಕಾಯ್ದುಕೊಳ್ಳಲು ಸಾಧ್ಯವಿಲ್ಲ. ಹಣದುಬ್ಬರವು ನಿಮ್ಮ ಉಳಿತಾಯದ ಮೇಲೆ ಪರಿಣಾಮ ಬೀರುವ ಪ್ರಮುಖ ಮಾರ್ಗಗಳು:

ಬಡ್ಡಿದರಗಳು: ಇನ್ಫ್ಲೇಶನ್ (ಹಣದುಬ್ಬರ)ವು ಉಳಿತಾಯದ ಬಡ್ಡಿದರಗಳ ಮೇಲೆ ಪರಿಣಾಮ ಬೀರುತ್ತದೆ. ಏಕೆಂದರೆ ನಿಮ್ಮ ಉಳಿತಾಯದ ಮೇಲಿನ ಬಡ್ಡಿದರಗಳು ಹಣದುಬ್ಬರ ದರಕ್ಕಿಂತ ತುಲನಾತ್ಮಕವಾಗಿ ಕಡಿಮೆ ಇರುತ್ತದೆ.

ಮೌಲ್ಯ ಕುಸಿತ: ಉಳಿತಾಯ ಖಾತೆಗಳಲ್ಲಿ ಠೇವಣಿ ಇಡಲಾದ ಮೊತ್ತವು ಚಾಲ್ತಿಯಲ್ಲಿರುವ ದರದಲ್ಲಿ ಬೆಳೆಯುತ್ತದೆ - ಆದರೆ ಹಣದುಬ್ಬರವು ಬೆಲೆ ಏರಿಕೆಗೆ ಕಾರಣವಾಗುವುದರಿಂದ ಮೌಲ್ಯವು ಕುಸಿಯುತ್ತದೆ.

ನಗದು: ಇನ್ಫ್ಲೇಶನ್ (ಹಣದುಬ್ಬರ)ವು ನಗದಿಗೆ ಹೆಚ್ಚು ಹಾನಿಕಾರಕವಾಗಿದೆ - ಏಕೆಂದರೆ ನಗದು ಸಮಯದೊಂದಿಗೆ ಬೆಳೆಯುವುದಿಲ್ಲ. ನಿಮ್ಮ ಹೆಚ್ಚಿನ ಸ್ಥಿರ ಉಳಿತಾಯವು ಪ್ರಾಥಮಿಕವಾಗಿ ನಗದು ರೂಪದಲ್ಲಿದ್ದರೆ, ಅದು ಗಮನಾರ್ಹ ಕುಸಿತವನ್ನು ತೆಗೆದುಕೊಳ್ಳಬಹುದು.

ಇನ್ಫ್ಲೇಶನ್ (ಹಣದುಬ್ಬರ)ವು ನಿಮ್ಮ ಉಳಿತಾಯ, ಖರೀದಿ ಶಕ್ತಿ, ಹೂಡಿಕೆಗಳು ಮತ್ತು ಇನ್ನಿತರ ಹಲವು ಆರ್ಥಿಕ ಅಂಶಗಳನ್ನು ಈ ಕೆಳಗಿನ ರೀತಿಯಲ್ಲಿ ಪರಿಣಾಮ ಬೀರಬಹುದು. ಇಂತಹ ಸಂದರ್ಭಗಳಲ್ಲಿ, ಹಣದುಬ್ಬರ ಕ್ಯಾಲ್ಕುಲೇಟರ್ ಬಹಳ ಉಪಯುಕ್ತವಾಗಬಹುದು.

ಇನ್ಫ್ಲೇಶನ್ (ಹಣದುಬ್ಬರ)ವನ್ನು ನಿವಾರಿಸುವುದು ಹೇಗೆ?

ಕೆಲವು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ವ್ಯಕ್ತಿಗಳು ಇನ್ಫ್ಲೇಶನ್ (ಹಣದುಬ್ಬರ)ವನ್ನು ನಿವಾರಿಸಬಹುದು.
ಇನ್ಫ್ಲೇಶನ್ (ಹಣದುಬ್ಬರ)ವನ್ನು ನಿವಾರಿಸಲು, ಒಬ್ಬ ವ್ಯಕ್ತಿಯು ಕೆಳಗೆ ತಿಳಿಸಲಾದ ಕ್ರಮಗಳನ್ನು ತೆಗೆದುಕೊಳ್ಳಬಹುದು:

1. ಇನ್ಫ್ಲೇಶನ್ (ಹಣದುಬ್ಬರ) ವಿರುದ್ಧ ರಕ್ಷಣೆ: ಇನ್ಫ್ಲೇಶನ್ (ಹಣದುಬ್ಬರ) ವಿರುದ್ಧ ರಕ್ಷಣೆ ನೀಡುವ ಹೂಡಿಕೆಗಳು ವ್ಯಕ್ತಿಗಳನ್ನು ಹಣದ ಕೊಳ್ಳುವ ಶಕ್ತಿ ಕುಗ್ಗುವುದರಿಂದ ರಕ್ಷಿಸುತ್ತವೆ. ಈ ಹೂಡಿಕೆಗಳು ಇನ್ಫ್ಲೇಶನ್ (ಹಣದುಬ್ಬರ) ಚಕ್ರಗಳಲ್ಲಿ ಅವುಗಳ ಮೌಲ್ಯವನ್ನು ಕಾಪಾಡಿಕೊಳ್ಳುವುದು ಮತ್ತು ಹೆಚ್ಚಿಸುವುದು ಎಂದು ನಿರೀಕ್ಷಿಸಲಾಗುತ್ತದೆ. ಈ ರೀತಿಯ ಹೂಡಿಕೆಗಳ ಕೆಲವು ಉದಾಹರಣೆಗಳೆಂದರೆ ಮ್ಯೂಚುಯಲ್ ಫಂಡ್‌ಗಳು, ಚಿನ್ನ, ಷೇರುಗಳು, ಇಟಿಎಫ್‌ಗಳು, ಮತ್ತು ಇನ್ನಿತರವು.

2. ನಿಮ್ಮ ಆದಾಯವನ್ನು ವೈವಿಧ್ಯಗೊಳಿಸಿ: ಇನ್ಫ್ಲೇಶನ್ (ಹಣದುಬ್ಬರ)ವನ್ನು ನಿರ್ವಹಿಸಲು, ನಿಮ್ಮ ಆಸ್ತಿಗಳನ್ನು ನಗದು, ಬಾಂಡ್ಗಳು, ಷೇರುಗಳು, ಮತ್ತು ಪರ್ಯಾಯ ಹೂಡಿಕೆಗಳು ನಡುವೆ ವಿತರಿಸಬೇಕು. ಇದರಿಂದ ಇನ್ಫ್ಲೇಶನ್ (ಹಣದುಬ್ಬರ)ವು ನಿಮ್ಮ ಆರ್ಥಿಕ ಸ್ಥಿತಿಯ ಮೇಲೆ ಬೀರುವ ಪರಿಣಾಮವನ್ನು ಕಡಿಮೆ ಮಾಡಬಹುದು.

3. ಭವಿಷ್ಯದ ಬಗ್ಗೆ ಜಾಗರೂಕ ಆರ್ಥಿಕ ನಿರ್ವಹಣೆ: ಇನ್ಫ್ಲೇಶನ್ (ಹಣದುಬ್ಬರ) ಕ್ಯಾಲ್ಕುಲೇಟರ್ ಬಳಸುವುದು, ಮುಂಚಿತವಾಗಿ ಯೋಜನೆ ಮಾಡುವುದು, ಜಾಗರೂಕ ಆರ್ಥಿಕ ಕ್ರಮಗಳನ್ನು ತೆಗೆದುಕೊಳ್ಳುವುದು, ನಿಮ್ಮ ಪೋರ್ಟ್ಫೋಲಿಯೋವನ್ನು ವೈವಿಧ್ಯಗೊಳಿಸುವುದು, ಮತ್ತು ಇನ್ನಿತರ ಕ್ರಮಗಳು ಭವಿಷ್ಯದಲ್ಲಿ ಹಣದುಬ್ಬರದಿಂದ ಉತ್ತಮ ರಕ್ಷಣೆ ನೀಡಲು ಸಹಾಯ ಮಾಡುತ್ತವೆ.

ಇನ್ಫ್ಲೇಶನ್ (ಹಣದುಬ್ಬರ)ವನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ?

ಇನ್ಫ್ಲೇಶನ್ (ಹಣದುಬ್ಬರ)ವನ್ನು ಸಿಪಿಐ (CPI) ಮೂಲಕ ಲೆಕ್ಕಹಾಕಲಾಗುತ್ತದೆ. ಸಿಪಿಐ (CPI) ಎಂದರೆ ಗ್ರಾಹಕರು ಖರೀದಿಸುವ ಕಾಲ್ಪನಿಕ ಸರಕುಗಳು ಮತ್ತು ಸೇವೆಗಳ ಬುಟ್ಟಿಯಿಂದ ಸರಾಸರಿ ಬೆಲೆಗಳನ್ನು ಪರಿಶೀಲಿಸುವ ಮೂಲಕ ಅಳತೆ ಮಾಡಲಾಗುತ್ತದೆ. ಸಿಪಿಐ (CPI) ಅನ್ನು ಈ ಕೆಳಗಿನ ಸೂತ್ರದಿಂದ ಲೆಕ್ಕಹಾಕಬಹುದು:

ಸಿಪಿಐ (CPI) = (ಪ್ರಸ್ತುತ ವರ್ಷದಲ್ಲಿ ಸರಕು ಮತ್ತು ಸೇವೆಗಳ ಸ್ಥಿರ ಬುಟ್ಟಿಯ ವೆಚ್ಚ/ಮೂಲ ವರ್ಷದಲ್ಲಿ ಸರಕು ಮತ್ತು ಸೇವೆಗಳ ಸ್ಥಿರ ಬುಟ್ಟಿಯ ವೆಚ್ಚ) *100

ಸಿಪಿಐ (CPI) ಲೆಕ್ಕಾಚಾರದ ನಂತರ, ಇನ್ಫ್ಲೇಶನ್ (ಹಣದುಬ್ಬರ)ವನ್ನು ಸೂತ್ರದೊಂದಿಗೆ ಲೆಕ್ಕಹಾಕಲಾಗುತ್ತದೆ:

ಇನ್ಫ್ಲೇಶನ್ (ಹಣದುಬ್ಬರ) = ((CPI x +1 – CPIx)/ CPIx)*100

ಇನ್ಫ್ಲೇಶನ್ (ಹಣದುಬ್ಬರ) ಕ್ಯಾಲ್ಕುಲೇಟರ್ ಈ ಸೂತ್ರದ ಮೇಲೆ ಕಾರ್ಯನಿರ್ವಹಿಸುತ್ತದೆ ಮತ್ತು ನಿಮಗೆ ತ್ವರಿತ ಫಲಿತಾಂಶಗಳನ್ನು ನೀಡುತ್ತದೆ.

ಭವಿಷ್ಯದ ಮೌಲ್ಯವನ್ನು ಹೇಗೆ ಲೆಕ್ಕ ಹಾಕುವುದು?

ಭವಿಷ್ಯದ ಮೌಲ್ಯ ಕ್ಯಾಲ್ಕುಲೇಟರ್
ಭವಿಷ್ಯದ ಮೌಲ್ಯ (ಎಫ್‌ವಿ) ಎಂಬುದು ಒಂದು ನಿರ್ದಿಷ್ಟ ಬೆಳವಣಿಗೆಯ ದರವನ್ನು ಆಧರಿಸಿ ಭವಿಷ್ಯದಲ್ಲಿ ಒಂದು ನಿರ್ದಿಷ್ಟ ದಿನಾಂಕದಂದು ಆಸ್ತಿಯ ಮೌಲ್ಯವಾಗಿದೆ. ನೀವು ಸೂತ್ರದ ಮೂಲಕ ಎಫ್‌ವಿ ಅನ್ನು ಲೆಕ್ಕ ಹಾಕಬಹುದು:

FV = PV*(1+i)^n

PV: = ಪ್ರಸ್ತುತ ಮೌಲ್ಯ

i: = ಬಡ್ಡಿ ದರ

n: = ಕಾಲಾವಧಿಗಳ ಸಂಖ್ಯೆ

ಇದನ್ನು ನಾವು ಒಂದು ಉದಾಹರಣೆಯೊಂದಿಗೆ ಅರ್ಥಮಾಡಿಕೊಳ್ಳಬಹುದು.

ಶ್ರೀ. X ಅವರು ಸ್ವತ್ತುಗಳನ್ನು ಹೊಂದಿದ್ದಾರೆ ಮತ್ತು ಭವಿಷ್ಯದ ದಿನಾಂಕದಂದು ಅವುಗಳ ಮೌಲ್ಯವನ್ನು ತಿಳಿಯಲು ಬಯಸುತ್ತಾರೆ. ಮಾಪನದ ಅಂಶಗಳು ಹೀಗಿವೆ:

ಪ್ರಸ್ತುತ ಮೌಲ್ಯ (PV): 2,50,000

ಬೆಳವಣಿಗೆಯ ದರ (i): 12%

ಕಾಲಾವಧಿ (n): 5 ವರ್ಷಗಳು

FV = 2,50,000*(1+12%)^5

ಭವಿಷ್ಯದ ಮೌಲ್ಯ = 4,40,585

ಇನ್ಫ್ಲೇಶನ್ (ಹಣದುಬ್ಬರ) ಕ್ಯಾಲ್ಕುಲೇಟರ್‌ನ ಪ್ರಯೋಜನಗಳು

ಇನ್ಫ್ಲೇಶನ್ (ಹಣದುಬ್ಬರ) ಕ್ಯಾಲ್ಕುಲೇಟರ್ ಈ ಕೆಳಗಿನ ವಿಧಾನಗಳಲ್ಲಿ ಉಪಯುಕ್ತವಾಗಿದೆ:

1. ಬಳಕೆಯ ಸುಲಭತೆ: ಕ್ಯಾಲ್ಕುಲೇಟರ್ ಬಳಕೆದಾರರಿಗೆ ಸ್ನೇಹಪರವಾಗಿದೆ ಮತ್ತು ಯಾರಾದರೂ ಒಮ್ಮೆ ನೋಡಿದರೆ ಬಳಸಬಹುದು.

2. ಮಾನವ ತಪ್ಪನ್ನು ತೊಡೆದುಹಾಕುತ್ತದೆ: ಕ್ಯಾಲ್ಕುಲೇಟರ್ ನಿಮಗೆ ಅತ್ಯಂತ ನಿಖರವಾದ ಫಲಿತಾಂಶಗಳನ್ನು ನೀಡುತ್ತದೆ (ಏಕೆಂದರೆ ಇದು ಪೂರ್ವ-ಪ್ರೋಗ್ರಾಮ್ ಮಾಡಲಾದ ಅಲ್ಗಾರಿದಮ್ ಅನ್ನು ಬಳಸುತ್ತದೆ). ಇದರಿಂದ ಮಾನವ ತಪ್ಪುಗಳ ಸಾಧ್ಯತೆಯನ್ನು ಸಂಪೂರ್ಣವಾಗಿ ತೊಡೆದುಹಾಕಲಾಗುತ್ತದೆ.

3. ಉತ್ತಮ ಆರ್ಥಿಕ ಯೋಜನೆ ರಚಿಸಲು ಸಹಾಯ ಮಾಡುತ್ತದೆ: ಇನ್ಫ್ಲೇಶನ್ (ಹಣದುಬ್ಬರ) ಕ್ಯಾಲ್ಕುಲೇಟರ್ ಬಳಸಿ ನೀವು ಮುಂಚಿತವಾಗಿ ಯೋಜನೆ ರಚಿಸಬಹುದು. ಆರ್ಥಿಕ ಚಲನವಲನಗಳ ಆಧಾರದ ಮೇಲೆ ಹೂಡಿಕೆಗಳು, ಖರ್ಚು ಮತ್ತು ಉಳಿತಾಯಗಳಿಗೆ ಸಂಬಂಧಿಸಿದ ಕ್ರಮಗಳನ್ನು ತೆಗೆದುಕೊಳ್ಳಬಹುದು.

4. ಸಮಯವನ್ನು ಉಳಿಸುತ್ತದೆ: ಹಸ್ತಚಾಲಿತ ಲೆಕ್ಕಾಚಾರಗಳು ಸಮಯ ತೆಗೆದುಕೊಳ್ಳುವ ಮತ್ತು ಬೇಸರಿಕೆ ಉಂಟುಮಾಡುವಂತಹವು. ಈ ಕ್ಯಾಲ್ಕುಲೇಟರ್ ಬಳಸಿದರೆ ಫಲಿತಾಂಶಗಳು ತಕ್ಷಣವೇ ನಿಮಗೆ ಲಭಿಸುತ್ತವೆ, ಇದರಿಂದ ಸಮಯ ಮತ್ತು ಶ್ರಮ ಉಳಿಯುತ್ತದೆ.

5. ಭವಿಷ್ಯದ ಮೌಲ್ಯವನ್ನು ಅಂದಾಜು ಮಾಡಲು ಸಹಾಯ ಮಾಡುತ್ತದೆ: ಸರಿಯಾದ ಇನ್ಫ್ಲೇಶನ್ (ಹಣದುಬ್ಬರ)ದರಗಳ ಲೆಕ್ಕಾಚಾರಗಳ ಮೂಲಕ, ನಿಮ್ಮ ಆಸ್ತಿಗಳ ಭವಿಷ್ಯದ ಮೌಲ್ಯವನ್ನು ಅಂದಾಜು ಮಾಡಬಹುದು. ನಿಮ್ಮ ಹಣ ಅಥವಾ ಆಸ್ತಿಗಳು ಭವಿಷ್ಯದಲ್ಲಿ ಎಷ್ಟು ಮೌಲ್ಯವನ್ನು ಹೊಂದಿರುತ್ತವೆ ಎಂಬುದನ್ನು ತಿಳಿಯಲು, ನಿಖರವಾದ ಹಣದುಬ್ಬರ /ಬೆಳವಣಿಗೆ ದರ ಅಗತ್ಯವಿದೆ. ಈ ಕ್ಯಾಲ್ಕುಲೇಟರ್ ಅದನ್ನು ನಿಖರವಾಗಿ ಲೆಕ್ಕಹಾಕಲು ಸಹಾಯ ಮಾಡುತ್ತದೆ.

ಎಫ್ಎಕ್ಯೂ ಗಳು

ಇನ್ಫ್ಲೇಶನ್  (ಹಣದುಬ್ಬರ) ಕ್ಯಾಲ್ಕುಲೇಟರ್ ಅನ್ನು ಬಳಸುವುದರಿಂದ ಭವಿಷ್ಯದಲ್ಲಿ ನಿಮ್ಮ ಕೊಳ್ಳುವ ಶಕ್ತಿ ಎಷ್ಟು ಕಡಿಮೆಯಾಗಬಹುದು ಎಂಬುದನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ - ಇದು ಈ ಅಂದಾಜಿನ ಆಧಾರದ ಮೇಲೆ ನಿಮ್ಮ ಹಣಕಾಸು ಯೋಜನೆ ಮಾಡಲು ಸಹಾಯಕವಾಗಿದೆ.