ಎಕ್ಸ್‌ಚೇಂಜ್‌ ಟ್ರೇಡೆಡ್‌ ಫಂಡ್ (ಇಟಿಎಫ್‌) ಎಂದರೇನು?

Video

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ಇಟಿಎಫ್‌ ಎಂದರೆ ಎಕ್ಸ್‌ಚೇಂಜ್‌ ಟ್ರೇಡೆಡ್‌ ಫಂಡ್‌. ಇದು ಸಾಮಾನ್ಯ ಮ್ಯೂಚುವಲ್‌ ಫಂಡ್‌ಗಳಿಗಿಂತ ವಿಭಿನ್ನವಾಗಿ ಸ್ಟಾಕ್ ಎಕ್ಸ್‌ಚೇಂಜ್‌ ರೀತಿಯಲ್ಲೇ ವ್ಯವಹರಿಸುತ್ತದೆ.

ದೃಢೀಕರಿಸಿದ ಸ್ಟಾಕ್ ಎಕ್ಸ್‌ಚೇಂಜ್‌ನ ನೋಂದಾಯಿತ ಬ್ರೋಕರ್ ಮೂಲಕ ಸಾಮಾನ್ಯವಾಗಿ ಇಟಿಎಫ್‌ನ ಯೂನಿಟ್‌ಗಳನ್ನು ಖರೀದಿ ಮತ್ತು ಮಾರಾಟ ಮಾಡಲಾಗುತ್ತದೆ. ಇಟಿಎಫ್‌ ಯೂನಿಟ್‌ಗಳನ್ನು ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಲಿಸ್ಟ್ ಮಾಡಲಾಗಿರುತ್ತದೆ ಮತ್ತು ಮಾರ್ಕೆಟ್‌ನ ಚಲನವಲನಗಳಿಗೆ ಅನುಗುಣವಾಗಿ ಎನ್‌ಎವಿ ಬದಲಾಗುತ್ತದೆ. ಇಟಿಎಫ್‌ ಯೂನಿಟ್‌ಗಳನ್ನು ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಮಾತ್ರ ಲಿಸ್ಟ್ ಮಾಡಿರುವುದರಿಂದ, ಸಾಮಾನ್ಯ ಈಕ್ವಿಟಿ ಫಂಡ್‌ ರೀತಿ ಅದನ್ನು ಖರೀದಿ ಮಾಡಲು ಸಾಧ್ಯ ಇರುವುದಿಲ್ಲ. ಎಕ್ಸ್‌ಚೇಂಜ್‌ ಮೂಲಕ ಖರೀದಿ ಮಾಡಲು ಯಾವುದೇ ಮಿತಿ ಇರುವುದಿಲ್ಲ. ಹೂಡಿಕೆದಾರರು ತಮಗೆ ಇಷ್ಟ ಬಂದಷ್ಟು ಯೂನಿಟ್‌ಗಳನ್ನು ಖರೀದಿ ಮಾಡಬಹುದು.

ಸರಳವಾಗಿ ಹೇಳುವುದಾದರೆ, ಸಿಎನ್ಎಕ್ಸ್‌ ನಿಫ್ಟಿ ಅಥವಾ ಬಿಎಸ್‌ಇ ಸೆನ್ಸೆಕ್ಸ್‌ ಇತ್ಯಾದಿಯಂತಹ ಇಂಡೆಕ್ಸ್‌ಗಳನ್ನು ಟ್ರ್ಯಾಕ್‌ ಮಾಡುವ ಫಂಡ್‌ಗಳೇ ಈ ಇಟಿಎಫ್‌ಗಳು. ಇಟಿಎಫ್‌ನ ಒಂದು ಷೇರು ಅಥವಾ ಯೂನಿಟ್‌ ಅನ್ನು ಖರೀದಿ ಮಾಡಿದಾಗ, ತನ್ನ ಮೂಲ ಸೂಚ್ಯಂಕದ ಗಳಿಕೆ ಮತ್ತು ರಿಟರ್ನ್‌ ಅನ್ನು ಟ್ರ್ಯಾಕ್ ಮಾಡುತ್ತಿರುವ ಪೋರ್ಟ್‌ಫೋಲಿಯೋದ ಷೇರು ಅಥವಾ ಯೂನಿಟ್‌ಗಳನ್ನು ನೀವು ಖರೀದಿ ಮಾಡಿರುತ್ತೀರಿ. ಇಟಿಎಫ್‌ಗಳು ಮತ್ತು ಇತರ ಇಂಡೆಕ್ಸ್‌ ಫಂಡ್‌ಗಳ ವಿಧದಲ್ಲಿನ ಮುಖ್ಯ ವ್ಯತ್ಯಾಸವೇನೆಂದರೆ, ಇಟಿಎಫ್‌ಗಳು ತಮ್ಮ ಮೂಲ ಇಂಡೆಕ್ಸ್‌ಗಿಂತ ಹೆಚ್ಚು ಕಾರ್ಯಕ್ಷಮತೆ ತೋರಿಸುವುದಿಲ್ಲ. ಆದರೆ ಇಂಡೆಕ್ಸ್‌ನ ಕಾರ್ಯಕ್ಷಮತೆಯನ್ನೇ ಇವು ಪ್ರತಿಫಲಿಸುತ್ತಿರುತ್ತವೆ. ಮಾರ್ಕೆಟ್‌ಗಿಂತ ಅವು ಮುಂದೆ ಹೋಗುವುದಿಲ್ಲ. ಅವು ಮಾರ್ಕೆಟ್‌ ಅನ್ನೇ ಅನುಸರಿಸುತ್ತವೆ.

ಇಟಿಎಫ್‌ಗಳು ಸಾಮಾನ್ಯವಾಗಿ ನಿತ್ಯ ಅಧಿಕ ಲಿಕ್ವಿಡಿಟಿ ಹೊಂದಿರುತ್ತವೆ. ಅಷ್ಟೇ ಅಲ್ಲ, ಮ್ಯೂಚುವಲ್‌ ಫಂಡ್ ಸ್ಕೀಮ್‌ಗಳಿಗಿಂತ ಕಡಿಮೆ ಫೀ ಹೊಂದಿರುತ್ತವೆ. ಹೀಗಾಗಿ ವೈಯಕ್ತಿಕ ಹೂಡಿಕೆದಾರರಿಗೆ ಇದು ಆಕರ್ಷಕ ಎನಿಸುತ್ತದೆ.

436
ನಾನು ಹೂಡಿಕೆ ಮಾಡಲು ಸಿದ್ಧ