ನೆಟ್‌ ಅಸೆಟ್ ವ್ಯಾಲ್ಯೂ (ಎನ್‌ಎವಿ) ಎಂದರೇನು?

Video

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ಮ್ಯೂಚುವಲ್‌ ಫಂಡ್‌ನ ಒಂದು ನಿರ್ದಿಷ್ಟ ಸ್ಕೀಮ್‌ನ ಕಾರ್ಯನಿರ್ವಹಣೆಯನ್ನು ನೆಟ್ ಅಸೆಟ್‌ ವ್ಯಾಲ್ಯೂ (ಎನ್‌ಎವಿ) ರೂಪದಲ್ಲಿ ಹೇಳಲಾಗುತ್ತದೆ. ಸರಳವಾಗಿ ಹೇಳುವುದಾದರೆ, ಸ್ಕೀಮ್‌ ಹೊಂದಿರುವ ಸೆಕ್ಯುರಿಟಿಗಳ ಮಾರ್ಕೆಟ್‌ ವ್ಯಾಲ್ಯೂ ಅನ್ನು ಎನ್‌ಎವಿ ಎಂದು ಕರೆಯಲಾಗುತ್ತದೆ. ಹೂಡಿಕೆದಾರರಿಂದ ಸಂಗ್ರಹಿಸಿದ ಹಣವನ್ನು ಸೆಕ್ಯುರಿಟಿ ಮಾರ್ಕೆಟ್‌ಗಳಲ್ಲಿ ಮ್ಯೂಚುವಲ್‌ ಫಂಡ್ ಹೂಡಿಕೆ ಮಾಡುತ್ತದೆ. ಸೆಕ್ಯುರಿಟಿಗಳ ಮಾರ್ಕೆಟ್ ವ್ಯಾಲ್ಯೂ ಪ್ರತಿ ದಿನ ಬದಲಾಗುವುದರಿಂದ ಸ್ಕೀಮ್‌ನ ಎನ್‌ಎವಿ ಕೂಡ ದಿನದಿಂದ ದಿನಕ್ಕೆ ಬದಲಾಗುತ್ತದೆ. ಪ್ರತಿ ಯೂನಿಟ್‌ ಎನ್‌ಎವಿ ಎಂಬುದು ಯಾವುದೇ ಒಂದು ದಿನದಲ್ಲಿ ಸ್ಕೀಮ್‌ನ ಒಟ್ಟು ಯೂನಿಟ್‌ಗಳ ಸಂಖ್ಯೆಯನ್ನು ಸೆಕ್ಯುರಿಟಿಗಳ ಮಾರ್ಕೆಟ್‌ ವ್ಯಾಲ್ಯೂನಿಂದ ಭಾಗಿಸಿದ ಮೊತ್ತವಾಗಿದೆ.

ಎಡಬದಿಯಲ್ಲಿರುವ ವೀಡಿಯೋವಿನಲ್ಲಿ ಹೇಗೆ ಎನ್‌ಎವಿ ಯನ್ನು ಲೆಕ್ಕ ಮಾಡಲಾಗುತ್ತದೆ ಎಂಬುದನ್ನು ವಿವರಿಸಲಾಗಿದೆ.

ಎಲ್ಲ ಮ್ಯೂಚುವಲ್‌ ಫಂಡ್ ಸ್ಕೀಮ್‌ಗಳ ಎನ್‌ಎವಿ ಯನ್ನು ಮಾರ್ಕೆಟ್‌ ಮುಗಿದ ನಂತರ ಟ್ರೇಡಿಂಗ್ ದಿನದ ಕೊನೆಯಲ್ಲಿ ಘೋಷಿಸಲಾಗುತ್ತದೆ. ಇದು ಸೆಬಿ ಮ್ಯೂಚುವಲ್‌ ಫಂಡ್ ನಿಯಮಾವಳಿಗಳಿಗೆ ಅನುಗುಣವಾಗಿರುತ್ತದೆ.

436
ನಾನು ಹೂಡಿಕೆ ಮಾಡಲು ಸಿದ್ಧ