ಸಿಸ್ಟಮ್ಯಾಟಿಕ್‌ ಇನ್ವೆಸ್ಟ್‌ಮೆಂಟ್‌ ಪ್ಲಾನ್ (ಎಸ್‌ಐಪಿ) ಎಂದರೇನು?

Video

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ಸಿಸ್ಟಮ್ಯಾಟಿಕ್ ಹೂಡಿಕೆ ಪ್ಲಾನ್ (ಎಸ್‌ಐಪಿ) ಎಂಬುದು ಮ್ಯೂಚುವಲ್‌ ಫಂಡ್‌ಗಳು ಒದಗಿಸುವ ಒಂದು ಹೂಡಿಕೆ ವಿಧಾನವಾಗಿದ್ದು, ಇದರಲ್ಲಿ ಒಂದೇ ಬಾರಿಗೆ ಒಟ್ಟಾರೆ ಮೊತ್ತವನ್ನು ಹೂಡಿಕೆ ಮಾಡುವುದರ ಬದಲಿಗೆ ನಿಯತ ಅಂತರದಲ್ಲಿ ಅಂದರೆ ತಿಂಗಳಿಗೊಮ್ಮೆ ಅಥವಾ ಮೂರು ತಿಂಗಳಿಗೊಮ್ಮೆ ಮ್ಯೂಚುವಲ್‌ ಫಂಡ್ ಸ್ಕೀಮ್‌ನಲ್ಲಿ ಖಚಿತ ಮೊತ್ತವನ್ನು ಹೂಡಿಕೆ ಮಾಡಬಹುದು. ಕಂತಿನ ಮೊತ್ತವು ತಿಂಗಳಿಗೆ ಕನಿಷ್ಠ ರೂ. 500 ಕೂಡ ಆಗಿರಬಹುದು ಮತ್ತು ಇದು ರಿಕರಿಂಗ್ ಡೆಪಾಸಿಟ್‌ಗೆ ಸಮಾನವಾಗಿರುತ್ತದೆ. ಪ್ರತಿ ತಿಂಗಳೂ ಮೊತ್ತವನ್ನು ಡೆಬಿಟ್ ಮಾಡಲು ನಿಮ್ಮ ಬ್ಯಾಂಕ್‌ಗೆ ಸ್ಟಾಂಡಿಂಗ್ ಸೂಚನೆಗಳನ್ನು ನೀಡಬಹುದಾದ್ದರಿಂದ ಇದು ಅನುಕೂಲಕರವಾಗಿದೆ.

ಭಾರತೀಯ ಎಂಎಫ್‌ ಹೂಡಿಕೆದಾರರಲ್ಲಿ ಎಸ್‌ಐಪಿ ಜನಪ್ರಿಯವಾಗುತ್ತಿದೆ. ಮಾರ್ಕೆಟ್‌ನ ಅಸ್ಥಿರತೆ ಮತ್ತು ಮಾರ್ಕೆಟ್‌ನ ಸಮಯದ ಬಗ್ಗೆ ಚಿಂತೆ ಮಾಡದೇ ಇದು ಶಿಸ್ತುಬದ್ಧ ವಿಧಾನದಲ್ಲಿ ಹೂಡಿಕೆ ಮಾಡಲು ಅನುವು ಮಾಡುತ್ತದೆ. ದೀರ್ಘಕಾಲದ ಹೂಡಿಕೆಗಳ ಜಗತ್ತಿಗೆ ಪ್ರವೇಶಿಸಲು ಮ್ಯೂಚುವಲ್‌ ಫಂಡ್‌ಗಳು ಒದಗಿಸಿದ ಸಿಸ್ಟಮ್ಯಾಟಿಕ್ ಇನ್ವೆಸ್ಟ್‌ಮೆಂಟ್ ಪ್ಲಾನ್‌ಗಳು ಉತ್ತಮ ವಿಧಾನವಾಗಿವೆ. ದೀರ್ಘಕಾಲಕ್ಕೆ ಹೂಡಿಕೆ ಮಾಡುವುದು ಅತ್ಯಂತ ಪ್ರಮುಖವಾಗಿದೆ. ಅಂದರೆ, ಕೊನೆಯಲ್ಲಿ ರಿಟರ್ನ್ಸ್‌ ಅನ್ನು ಹೆಚ್ಚಿಸಿಕೊಳ್ಳಲು ನೀವು ಸಾಕಷ್ಟು ಮೊದಲೇ ಹೂಡಿಕೆ ಆರಂಭಿಸಬೇಕು. ಹೀಗಾಗಿ, ನಿಮ್ಮ ಹೂಡಿಕೆಯ ಅನುಕೂಲವನ್ನು ಪಡೆಯಲು ನಿಮ್ಮ ಧ್ಯೇಯವು ಮೊದಲೇ ಆರಂಭಿಸಿ, ನಿಯತವಾಗಿ ಹೂಡಿಕೆ ಮಾಡುತ್ತಿರಿ ಎಂಬುದಾಗಿದೆ.

438
ನಾನು ಹೂಡಿಕೆ ಮಾಡಲು ಸಿದ್ಧ