ವಿವಿಧ ರೀತಿಯ ಫಂಡ್‌ಗಳು ಯಾವುವು?

Video

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ವಿಭಿನ್ನ ಜನರ ವಿಭಿನ್ನ ಅಗತ್ಯಗಳನ್ನು ಪೂರೈಸಲು ವಿವಿಧ ರೀತಿಯ ಮ್ಯೂಚುವಲ್‌ಫಂಡ್‌ಗಳು ಇವೆ. ವಿಶಾಲವಾಗಿ ನೋಡುವುದಾದರೆ, ಇದರಲ್ಲಿ ಮೂರು ವಿಧಗಳಿವೆ.

  1. ಈಕ್ವಿಟಿ ಅಥವಾ ಗ್ರೋತ್ ಫಂಡ್‌ಗಳು.

  • ಇವು ಪ್ರಮುಖವಾಗಿ ಈಕ್ವಿಟಿಗಳಲ್ಲಿ ಹೂಡಿಕೆ ಮಾಡುತ್ತವೆ. ಅಂದರೆ ಕಂಪನಿಗಳ ಷೇರುಗಳಲ್ಲಿ ಹೂಡಿಕೆ ಮಾಡುತ್ತವೆ.
  • ಪ್ರಾಥಮಿಕ ಉದ್ದೇಶವು ಸಂಪತ್ತು ಸೃಷ್ಟಿ ಅಥವಾ ಬಂಡವಾಳ ಹೆಚ್ಚಳ.
  • ಇವು ಅಧಿಕ ರಿಟರ್ನ್‌ಅನ್ನು ಜನರೇಟ್‌ಮಾಡುವ ಸಂಭಾವ್ಯತೆಯನ್ನು ಹೊಂದಿರುತ್ತವೆ ಮತ್ತು ದೀರ್ಘಕಾಲದ ಹೂಡಿಕೆಗಳಿಗೆ ಉತ್ತಮವಾಗಿವೆ.
  • ಉದಾಹರಣೆಗಳೆಂದರೆ, 
    • ದೊಡ್ಡ ಸ್ಥಾಪಿತ ವಹಿವಾಟುಗಳನ್ನು ನಡೆಸುವ ಕಂಪನಿಗಳಲ್ಲಿ ಲಾರ್ಜ್‌ಕ್ಯಾಪ್‌ಫಂಡ್‌ಗಳು ಪ್ರಮುಖವಾಗಿ ಹೂಡಿಕೆ ಮಾಡುತ್ತವೆ.
    • “ಮಿಡ್‌ಕ್ಯಾಪ್‌” ಫಂಡ್‌ಗಳು ಮಧ್ಯಮ ಗಾತ್ರದ ಕಂಪನಿಗಳಲ್ಲಿ ಹೂಡಿಕೆ ಮಾಡುತ್ತವೆ.
    • “ಸ್ಮಾಲ್ ಕ್ಯಾಪ್‌” ಫಂಡ್‌ಗಳು ಸಣ್ಣ ಗಾತ್ರದ ಕಂಪನಿಗಳಲ್ಲಿ ಹೂಡಿಕೆ ಮಾಡುತ್ತವೆ.
    • ”ಮಲ್ಟಿ ಕ್ಯಾಪ್‌” ಫಂಡ್‌ಗಳು ಲಾರ್ಜ್, ಮಿಡ್‌ಮತ್ತು ಸಣ್ಣ ಗಾತ್ರ ಕಂಪನಿಗಳಲ್ಲಿ ಹೂಡಿಕೆ ಮಾಡುತ್ತವೆ.
    • “ಸೆಕ್ಟರ್” ಫಂಡ್‌ಗಳು ಒಂದು ವಿಧದ ವಹಿವಾಟಿಗೆ ಸಂಬಂಧಿಸಿದ ಕಂಪನಿಗಳಲ್ಲಿ ಹೂಡಿಕೆ ಮಾಡುತ್ತವೆ. ಉದಾಹರಣೆಗೆ, ಟೆಕ್ನಾಲಜಿ ಫಂಡ್‌ಗಳು ಕೇವಲ ಟೆಕ್ನಾಲಜಿ ಕಂಪನಿಗಳಲ್ಲಿ ಹೂಡಿಕೆ ಮಾಡುತ್ತವೆ
    • “ಥೆಮ್ಯಾಟಿಕ್” ಫಂಡ್‌ಗಳು ಒಂದು ಸಾಮಾನ್ಯ ಥೀಮ್‌ನಲ್ಲಿ (ಧ್ಯೇಯ) ಹೂಡಿಕೆ ಮಾಡುತ್ತವೆ. ಉದಾಹರಣೆಗೆ, ಇನ್‌ಫ್ರಾಸ್ಟ್ರಕ್ಚರ್ ಫಂಡ್‌ಗಳು ಮೂಲಸೌಕರ್ಯ ವಿಭಾಗದ ಪ್ರಗತಿಯಿಂದ ಲಾಭವನ್ನು ನೀಡುವ ಕಂಪನಿಗಳಲ್ಲಿ ಹೂಡಿಕೆ ಮಾಡುತ್ತವೆ.
    • ತೆರಿಗೆ ಉಳಿತಾಯ ಫಂಡ್‌ಗಳು
  1. ಆದಾಯ ಅಥವಾ ಬಾಂಡ್‌ ಅಥವಾ ಫಿಕ್ಸೆಡ್‌ಇನ್‌ಕಮ್‌ಫಂಡ್‌ಗಳು

  • ಇವು ಫಿಕ್ಸೆಡ್‌ಇನ್‌ಕಮ್‌ಸೆಕ್ಯುರಿಟಿಗಳಾದ ಗವರ್ನಮೆಂಟ್‌ಸೆಕ್ಯುರಿಟಿಗಳು ಅಥವಾ ಬಾಂಡ್‌ಗಳು, ಕಮರ್ಷಿಯಲ್ ಪೇಪರುಗಳು ಮತ್ತು ಡಿಬೆಂಚರುಗಳು, ಡೆಪಾಸಿಟ್‌ಗಳ ಬ್ಯಾಂಕ್‌ಸರ್ಟಿಫಿಕೇಟ್ಉಗಳು ಮತ್ತು ಮನಿ ಮಾರ್ಕೆಟ್‌ಇನ್‌ಸ್ಟ್ರುಮೆಂಟ್‌ಗಳಾದ ಟ್ರೆಶರಿ ಬಿಲ್‌ಗಳು, ಕಮರ್ಷಿಯಲ್‌ಪೇಪರ್ ಇತ್ಯಾದಿಯಲ್ಲಿ ಹೂಡಿಕೆ ಮಾಡುತ್ತವೆ.
  • ಇವು ಸಾಮಾನ್ಯವಾಗಿ ಸುರಕ್ಷಿತ ಹೂಡಿಕೆಗಳಾಗಿವೆ ಮತ್ತು ಇವು ಆದಾಯ ಸೃಷ್ಟಿಗೆ ಸೂಕ್ತವಾಗಿವೆ.
  • ಉದಾಹರಣೆಗಳೆಂದರೆ ಲಿಕ್ವಿಡ್, ಶಾರ್ಟ್‌ಟರ್ಮ್‌, ಪ್ಲೋಟಿಂಗ್‌ರೇಟ್‌, ಕಾರ್ಪೊರೇಟ್‌ಡೆಟ್‌, ಡೈನಾಮಿಕ್‌ಬಾಂಡ್, ಗಿಫ್ಟ್ ಫಂಡ್‌ಗಳು ಇತ್ಯಾದಿ.
  1. ಹೈಬ್ರಿಡ್‌ಫಂಡ್‌ಗಳು

  • ಇವು ಈಕ್ವಿಟಿಗಳು ಮತ್ತು ಫಿಕ್ಸೆಡ್ ಇನ್‌ಕಮ್‌ನಲ್ಲಿ ಹೂಡಿಕೆ ಮಾಡುತ್ತವೆ. ಈ ಮೂಲಕ ಇವು ಪ್ರಗತಿ ಸಾಧ್ಯತೆ ಹಾಗೂ ಆದಾಯ ಸೃಷ್ಟಿ ಅನ್ನು ಒದಗಿಸುತ್ತವೆ.
  • ಉದಾಹರಣೆಗೆ ಅಗ್ರೆಸಿವ್‌ಬ್ಯಾಲೆನ್ಸ್ಡ್ ಫಂಡ್‌ಗಳು, ಕನ್ಸರ್ವೇಟಿವ್ ಬ್ಯಾಲೆನ್ಸ್ಡ್ ಫಂಡ್‌ಗಳು, ಪಿಂಚಣಿ ಯೋಜನೆಗಳು, ಮಕ್ಕಳ ಪ್ಲಾನ್‌ಗಳು ಮತ್ತು ಮಾಸಿಕ ಆದಾಯದ ಪ್ಲಾನ್‌ಗಳು ಇತ್ಯಾದಿ. 
435
ನಾನು ಹೂಡಿಕೆ ಮಾಡಲು ಸಿದ್ಧ