ಡೆಟ್‌ ಫಂಡ್‌ಗಳಲ್ಲಿ ಯಾವ ವಿಧಗಳಿವೆ?

ಡೆಟ್‌ ಫಂಡ್‌ಗಳಲ್ಲಿ ಯಾವ ವಿಧಗಳಿವೆ? zoom-icon

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ಹೂಡಿಕೆಯಿಂದ ನಿಯತ ಆದಾಯ ಅಥವಾ ಬಂಡವಾಳದ  ಸುರಕ್ಷತೆಯನ್ನು ಬಯಸುವವರಿಗೆ ಹಾಗೂ ಅಲ್ಪಕಾಲಕ್ಕೆ ಹಣವನ್ನು ಇಡುವಂತವರಿಗೆ ಡೆಟ್‌ ಫಂಡ್‌ಗಳು ಸೂಕ್ತ.

ಆದರೆ, ಡೆಟ್‌ ಫಂಡ್‌ಗಳಲ್ಲಿ ಹಲವು ವಿಧಗಳಿವೆ.

ಬ್ಯಾಂಕ್‌ಗಳಲ್ಲಿ ನೀವು ಉಳಿತಾಯ ಖಾತೆಯನ್ನು ತೆರೆದು ಬೇಕಾದಾಗ ಹಣವನ್ನು ಇಟ್ಟು, ವಾಪಸು ಪಡೆಯುವಂತೆ ಇದು. ಆದರೆ, ಸ್ವಲ್ಪ ಕಾಲದವರೆಗೆ ನೀವು ಈ ಹಣವನ್ನು ಬಳಸುವುದಿಲ್ಲ ಎಂದಾದರೆ ಹಣವನ್ನು ಇದರಲ್ಲಿ ಇಡುವುದು ಅಷ್ಟೇನೂ ಉತ್ತಮ ಸಂಗತಿಯಲ್ಲ. ಇಂತಹ ಪ್ರಕರಣಗಳಲ್ಲಿ ನೀವು ಫಿಕ್ಸೆಡ್‌ ಡೆಪಾಸಿಟ್ ಮಾಡಬಹುದು. ಇದರಲ್ಲಿ ನಿರ್ದಿಷ್ಟ ಸಮಯದವರೆಗೆ ಹಣ ಲಾಕ್ ಆಗುತ್ತದೆ. ಈ ಅವಧಿಯವರೆಗೆ ನಿಮಗೆ ಅಧಿಕ ಬಡ್ಡಿ ದರವನ್ನು ಒದಗಿಸುತ್ತದೆ. ನೀವು ರಿಕರಿಂಗ್‌ ಡೆಪಾಸಿಟ್‌ ಕೂಡ ಮಾಡಬಹುದು. ಇದರಲ್ಲಿ ನೀವು ಪ್ರತಿ ತಿಂಗಳು, ಮೊದಲೇ ನಿರ್ದಿಷ್ಟಪಡಿಸಿದ ಅವಧಿಯವರೆಗೆ ನಿಗದಿತ ಮೊತ್ತವನ್ನು ಹೂಡಿಕೆ ಮಾಡಬೇಕಾಗುತ್ತದೆ. ಈ ಎಲ್ಲ ಉತ್ಪನ್ನಗಳು ವಿವಿಧ ಅಗತ್ಯಗಳನ್ನು ಪೂರೈಸಲು ಸಹಾಯ ಮಾಡುತ್ತವೆ.

ಇದೇ ರೀತಿ, ಮ್ಯೂಚುವಲ್‌ ಫಂಡ್‌ಗಳಲ್ಲೂ ಡೆಟ್‌ ಫಂಡ್‌ ವಿಭಾಗದಲ್ಲಿ ಹಲವು ವಿಧಗಳಿದ್ದು, ಇವು ನಿಮ್ಮ ವಿವಿಧ ಹೂಡಿಕೆ ಅಗತ್ಯವನ್ನು ಪೂರೈಸುತ್ತವೆ. ಇವುಗಳೆಂದರೆ, ಲಿಕ್ವಿಡ್‌ ಫಂಡ್‌ಗಳು, ಇನ್‌ಕಮ್‌ ಫಂಡ್‌ಗಳು, ಸರ್ಕಾರಿ ಸೆಕ್ಯುರಿಟಿಗಳು ಮತ್ತು ಫಿಕ್ಸೆಡ್ ಮೆಚ್ಯುರಿಟಿ ಪ್ಲಾನ್‌ಗಳು.

ಹೂಡಿಕೆದಾರರು ತಮ್ಮ ಅಗತ್ಯಕ್ಕೆ ತಕ್ಕಂತೆ ಸ್ಕೀಮ್‌ಗಳನ್ನು ಆಯ್ಕೆ ಮಾಡಿಕೊಳ್ಳುವಂತೆ ಸಲಹೆ ನೀಡಲಾಗಿದೆ.

435
ನಾನು ಹೂಡಿಕೆ ಮಾಡಲು ಸಿದ್ಧ