ಎಎಂಎಫ್ಐ (AMFI)

ಭಾರತೀಯ ಮ್ಯೂಚುವಲ್ ಫಂಡ್ ಅಸೋಸಿಯೇಶನ್‌ (ಎಎಂಎಫ್‌ಐ) ಭಾರತದ ಮ್ಯೂಚುವಲ್‌ ಫಂಡ್‌ ಉದ್ಯಮವನ್ನು ವೃತ್ತಿಪರ, ಆರೋಗ್ಯಕರ ಮತ್ತು ನೈತಿಕ ರೀತಿಯಲ್ಲಿ ಅಭಿವೃದ್ದಿಪಡಿಸಲು ಮತ್ತು ಮ್ಯೂಚುವಲ್ ಫಂಡ್‌ ಮತ್ತು ಅದರ ಯೂನಿಟ್‌ ಹೋಲ್ಡರುಗಳ ಹಿತಾಸಕ್ತಿಯನ್ನು ರಕ್ಷಿಸುವ ಮತ್ತು ಪ್ರೋತ್ಸಾಹಿಸುವ ದೃಷ್ಟಿಯಿಂದ ಎಲ್ಲ ವಲಯದಲ್ಲಿ ಮಾನದಂಡಗಳನ್ನು ಹೆಚ್ಚಿಸಲು ಮತ್ತು ನಿರ್ವಹಿಸಲು ಬದ್ಧವಾಗಿದೆ.

ಎಎಂಎಫ್‌ಐ ಎಂಬುದು ಎಲ್ಲ ನೋಂದಾಯಿತ ಅಸೆಟ್ ಮ್ಯಾನೇಜ್‌ಮೆಂಟ್‌ ಕಂಪನಿಗಳ ಸೆಬಿ ನೋಂದಾಯಿತ ಮ್ಯೂಚುವಲ್‌ ಫಂಡ್‌ಗಳ ಸಂಘಟನೆಯಾಗಿದ್ದು, 1995 ಆಗಸ್ಟ್‌ 22 ರಲ್ಲಿ ಲಾಭೋದ್ದೇಶವಿಲ್ಲದ ಸಂಘಟನೆಯಾಗಿ ಅಸ್ತಿತ್ವಕ್ಕೆ ಬಂತು. ಈವರೆಗೆ ಸೆಬಿಯಲ್ಲಿ ನೋಂದಣಿ ಮಾಡಿರುವ 42 ಅಸೆಟ್ ಮ್ಯಾನೇಜ್‌ಮೆಂಟ್ ಕಂಪನಿಗಳು ಇದರ ಸದಸ್ಯತ್ವ ಪಡೆದಿವೆ

ಹೆಚ್ಚಿನ ಮಾಹಿತಿಗಾಗಿ ಭೇಟಿ ನೀಡಿ www.amfiindia.com