Skip to main content

ಮಾಹಿತಿಯುಕ್ತ ಹೂಡಿಕೆ ನಿರ್ಧಾರಗಳನ್ನು ಮಾಡಲು ಭಾರತವನ್ನು ಸಬಲೀಕರಿಸುವುದು

Grow Your Investment Knowledge with AMFI

"ಮ್ಯೂಚುವಲ್ ಫಂಡ್ ಸರಿ ಇದೆ" ಎಂಬುದು ಒಂದು ಹೂಡಿಕೆದಾರರ ಶಿಕ್ಷಣ ಕಾರ್ಯಕ್ರಮವಾಗಿದ್ದು, ಇದನ್ನು AMFI ನಡೆಸುತ್ತಿದ್ದು, ಮ್ಯೂಚುವಲ್ ಫಂಡ್‌ಗಳ ಅನುಕೂಲವನ್ನು ಒತ್ತಿ ಹೇಳುವುದು ಮತ್ತು ಹಣಕಾಸು ಸಾಕ್ಷರತೆಯನ್ನು ಮೂಡಿಸುವ ಗುರಿಯನ್ನು ಹೊಂದಿದೆ. SIP ಮೂಲಕ ಮ್ಯೂಚುವಲ್‌ ಫಂಡ್‌ಗಳಲ್ಲಿ ರೆಗ್ಯುಲರ್ ಆಗಿ ಸಣ್ಣ ಮೊತ್ತವನ್ನು ಹೂಡಿಕೆ ಮಾಡಿದರೆ ದೀರ್ಘಕಾಲದಲ್ಲಿ ಸಂಪತ್ತು ಹೇಗೆ ನಿರ್ಮಾಣವಾಗುತ್ತದೆ ಎಂಬುದನ್ನು ಎಲ್ಲ ಸ್ತರದ ಜನರಿಗೂ ಅರ್ಥ ಮಾಡಿಕೊಳ್ಳಲು ಸಹಾಯ ಮಾಡುವುದು ನಮ್ಮ ಗುರಿಯಾಗಿದೆ.

 

ಜಾಹೀರಾತುಗಳು, ಡಿಜಿಟಲ್ ವೀಡಿಯೊಗಳು ಮತ್ತು ವೆಬ್‌ಸೈಟ್ ಮೂಲಕ ಸರಳ ಆದರೆ ಸ್ಪಷ್ಟ ಸಂದೇಶಗಳನ್ನು ಬಹುಭಾಷೆಗಳಲ್ಲಿ ನೀಡುತ್ತಾ, ಮ್ಯೂಚುಯಲ್ ಫಂಡ್‌ಗಳಿಗೆ ಸಂಬಂಧಿಸಿದ ತಪ್ಪುಗ್ರಹಿಕೆಗಳನ್ನು MFSH ಅಭಿಯಾನವು ದೂರ ಮಾಡಿದೆ ಮತ್ತು ಹೂಡಿಕೆದಾರರಲ್ಲಿ ಮ್ಯೂಚುಯಲ್ ಫಂಡ್‌ ಹೂಡಿಕೆಗಳನ್ನು ಜನಪ್ರಿಯಗೊಳಿಸಿದೆ. ಅಲ್ಲದೆ, ಗಮನಾರ್ಹ ಸಂಖ್ಯೆ ಹೂಡಿಕೆದಾರರ ಖಾತೆಗಳು ಮತ್ತು ಹೂಡಿಕೆಗಳನ್ನು ಸೇರಿಸಲು ಉದ್ಯಮಕ್ಕೆ ಇದು ಸಹಾಯ ಮಾಡಿದೆ.

ಮ್ಯೂಚುವಲ್ ಫಂಡ್ ಸರಿ ಇದೆ ಬಗ್ಗೆ

About Mutual Funds Sahi Hai ಭಾರತೀಯ ಷೇರು ವಿನಿಮಯ ಮಂಡಳಿ (ಸೆಬಿ) ಮಾರ್ಗದರ್ಶನದಲ್ಲಿ ಭಾರತೀಯ ಮ್ಯೂಚುವಲ್ ಫಂಡ್ಸ್‌ ಸಂಘಟನೆ (AMFI) ಪ್ರಾಯೋಜಿತ 'ಮ್ಯೂಚುವಲ್ ಫಂಡ್ ಸರಿ ಇದೆ' ಅನ್ನು 2017 ರ ಮಾರ್ಚ್‌ನಲ್ಲಿ ಪ್ರಾರಂಭಿಸಲಾಯಿತು. ಹೂಡಿಕೆದಾರರ ಶಿಕ್ಷಣ ಕಾರ್ಯಕ್ರಮದ ಜೊತೆಗೆ ಇದರ ಪ್ರಾಥಮಿಕ ಗುರಿಯು ಮ್ಯೂಚುವಲ್ ಫಂಡ್‌ಗಳನ್ನು ಅರ್ಥಮಾಡಿಕೊಳ್ಳಲು ಸುಲಭವಾಗಿಸುವುದಾಗಿದೆ. ಸಂದೇಶವನ್ನು ಪಸರಿಸಲು, ನಾವು ಟಿವಿ, ಡಿಜಿಟಲ್, ರೇಡಿಯೋ, ಪ್ರಿಂಟ್, ಹೊರಾಂಗಣ ಮತ್ತು ಸಿನಿಮಾ ಸೇರಿದಂತೆ ವಿವಿಧ ಮಾಧ್ಯಮಗಳು ಮತ್ತು ಹಲವು ಭಾಷೆಗಳನ್ನು ನಾವು ಬಳಸುತ್ತೇವೆ.

ಭಾರತೀಯ ಮ್ಯೂಚುವಲ್ ಫಂಡ್‌ಗಳ ಸಂಘಟನೆಯ (AMFI) ಬಗ್ಗೆ

About Association of Mutual Funds in India (AMFI)ಭಾರತೀಯ ಮ್ಯೂಚುವಲ್ ಫಂಡ್‌ಗಳ ಸಂಘಟನೆಯು (AMFI) ವೃತ್ತಿಪರ, ಆರೋಗ್ಯಕರ ಮತ್ತು ನೈತಿಕ ವಿಧಾನದಲ್ಲಿ ಭಾರತೀಯ ಮ್ಯೂಚುವಲ್ ಫಂಡ್ ಉದ್ಯಮವನ್ನು ಅಭಿವೃದ್ಧಿಪಡಿಸುವುದಕ್ಕೆ ಬದ್ಧವಾಗಿದೆ ಮತ್ತು ಮ್ಯೂಚುವಲ್ ಫಂಡ್‌ಗಳು ಮತ್ತು ಅದರ ಯುನಿಟ್ ಹೋಲ್ಡರ್‌ಗಳ ಹಿತಾಸಕ್ತಿಯನ್ನು ರಕ್ಷಿಸುವುದು ಮತ್ತು ಪ್ರೋತ್ಸಾಹಿಸುವ ದೃಷ್ಟಿಕೋನದಿಂದ ಎಲ್ಲ ವಲಯಗಳಲ್ಲೂ ಮಾನದಂಡವನ್ನು ಕಾಯ್ದುಕೊಳ್ಳುವುದಕ್ಕೆ ಬದ್ಧವಾಗಿದೆ.

 

ಭಾರತೀಯ ಮ್ಯೂಚುವಲ್ ಫಂಡ್‌ಗಳ ಸಂಘಟನೆಯು (AMFI) ಷೇರು ವಿನಿಮಯ ಮಂಡಳಿಯಲ್ಲಿ ನೋಂದಣಿ ಆಗಿರುವ ಭಾರತದಲ್ಲಿನ ಎಲ್ಲ ಮ್ಯೂಚುವಲ್ ಫಂಡ್‌ಗಳ ಲಾಭೋದ್ದೇಶ ರಹಿತ ಉದ್ಯಮ ಮಂಡಳಿಯಾಗಿದೆ. ಲಾಭೋದ್ದೇಶ ರಹಿತ ಸಂಸ್ಥೆಯಾಗಿ 1995 ಆಗಸ್ಟ್ 22 ರಂದು AMFI ಅನ್ನು ಸ್ಥಾಪಿಸಲಾಗಿದೆ.

 

ಸೆಬಿ ಮಾರ್ಗದರ್ಶನದ ಅಡಿಯಲ್ಲಿ 2017 ರಲ್ಲಿ AMFI ಹಲವು ಭಾಷೆಗಳಲ್ಲಿ ಇಡೀ ದೇಶದಲ್ಲಿ ಹೂಡಿಕೆದಾರರಲ್ಲಿ ಜಾಗೃತಿ ಮೂಡಿಸುವ ಉದ್ದೇಶದ ಅಭಿಯಾನ ‘ಮ್ಯೂಚುವಲ್ ಫಂಡ್ ಸರಿ ಇದೆ’ ಆಗಿದೆ. ದೀರ್ಘಕಾಲದಲ್ಲಿ ಸಂಪತ್ತು ರಚನೆ ಮಾಡಲು ಸಹಾಯ ಮಾಡುವುದಕ್ಕಾಗಿ ವಿಭಿನ್ನ ಅಸೆಟ್ ವರ್ಗವನ್ನಾಗಿ ಮ್ಯೂಚುವಲ್ ಫಂಡ್‌ಗಳ ಬಗ್ಗೆ ಜಾಗೃತಿ ಮೂಡಿಸುವ AMFI ನ ಪ್ರಮುಖ ಪ್ರಯತ್ನ ಇದಾಗಿದೆ.

 

AMFI ಮತ್ತು ಅದರ ಹೂಡಿಕೆದಾರ ಜಾಗೃತಿ ಕಾರ್ಯಕ್ರಮಗಳ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಇಲ್ಲಿ ಕಂಡುಕೊಳ್ಳಿರಿ: www.amfiindia.com

ನಮ್ಮ ಧ್ಯೇಯ

ಮ್ಯೂಚುವಲ್ ಫಂಡ್ ವಿಶ್ವವನ್ನು ಸರಳವಾಗಿಸುವುದು, ಜನರಿಗೆ ಮಾಹಿತಿಯುಕ್ತ ನಿರ್ಧಾರ ಮಾಡಲು ಸಹಾಯ ಮಾಡುವುದು ಮತ್ತು ಅವರ ಹಣಕಾಸಿನ ಗುರಿಗಳನ್ನು ಸಾಧಿಸುವ ನಿಟ್ಟಿನಲ್ಲಿ ಸಣ್ಣ ಹೆಜ್ಜೆಯನ್ನು ಇಡಲು ಸಹಾಯ ಮಾಡುವುದು ನಮ್ಮ ಧ್ಯೇಯವಾಗಿದೆ.

Learn
ಕಲಿಯಿರಿ
Empower
ಸಬಲೀಕರಣ
Invest
ಹೂಡಿಕೆ

ಸಂಪರ್ಕಿಸಿ

ಯಾವುದೇ ಪ್ರಶ್ನೆಗಳಿದ್ದರೆ, ನಮ್ಮನ್ನು ಮುಕ್ತವಾಗಿ ಸಂಪರ್ಕಿಸಿ.

ನಮ್ಮನ್ನು ಸಂಪರ್ಕಿಸಿ
Get in touch