ಇಎಲ್ಎಸ್ಎಸ್ ಫಂಡ್ – ತೆರಿಗೆ ಉಳಿತಾಯದ ಮ್ಯೂಚುವಲ್‌ ಫಂಡ್

Video

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ಇಎಲ್ಎಸ್ಎಸ್ ಎಂಬುದು ಈಕ್ವಿಟಿ ಲಿಂಕ್ಡ್ ಸೇವಿಂಗ್ಸ್‌ ಸ್ಕೀಮ್  ಆಗಿದ್ದು,  ಆದಾಯ ತೆರಿಗೆ ಕಾಯ್ದೆ 1961 ರ 80ಸಿ ವಿಭಾಗದ ಅಡಿಯಲ್ಲಿ 1.5 ಲಕ್ಷರೂ. ವರೆಗೆ ಒಟ್ಟು ಆದಾಯದಲ್ಲಿ ವ್ಯಕ್ತಿ ಅಥವಾ ಅವಿಭಕ್ತ ಕುಟುಂಬದ ವ್ಯಕ್ತಿಗೆ ಆದಾಯ ತೆರಿಗೆ ಇಳಿಕೆಯನ್ನು ಒದಗಿಸುತ್ತದೆ.

ಹೀಗಾಗಿ, ಹೂಡಿಕೆದಾರರು ರೂ. 50,000 ಅನ್ನು ಇಎಲ್ಎಸ್ಎಸ್ ನಲ್ಲಿ  ಹೂಡಿಕೆ ಮಾಡಲು ನಿರ್ಧರಿಸಿದರೆ ಆಗ, ಈ ಮೊತ್ತವನ್ನು ಒಟ್ಟು ತೆರಿಗೆ ವಿಧಿಸ ಬಹುದಾದ ಆದಾಯದಿಂದ ಕಡಿತಗೊಳಿಸಲಾಗುತ್ತದೆ. ಹೀಗಾಗಿ ನಿಮಗೆ ತೆರಿಗೆ ಹೊರೆ ಕಡಿಮೆಯಾಗುತ್ತದೆ.

ಈ ಸ್ಕೀಮ್‌ಗಳು ಯೂನಿಟ್ಗಳನ್ನು  ನಿಯೋಜಿಸಿದ ದಿನದಿಂದ ಮೂರು ವರ್ಷಗಳವರೆಗಿನ ಲಾಕ್ಇನ್ ಅವಧಿಯನ್ನು ಹೊಂದಿರುತ್ತವೆ. ಲಾಕ್ಇನ್ ಅವಧಿ ಮುಗಿದ ನಂತರ, ಯೂನಿಟ್ಗಳನ್ನು  ರಿಡೀಮ್‌  ಮಾಡಿಕೊಳ್ಳಬಹುದು ಅಥವಾ ಬದಲಿಸಬಹುದು. ಇಎಲ್ಎಸ್ಎಸ್,  ಗ್ರೋತ್ ಮತ್ತು  ಡಿವಿಡೆಂಡ್ ಆಯ್ಕೆಗಳೆರಡನ್ನೂ ಒದಗಿಸುತ್ತವೆ. ಸಿಸ್ಟಮ್ಯಾಟಿಕ್ ಇನ್ವೆಸ್ಟ್ಮೆಂಟ್ ಪ್ಲಾನ್ (ಎಸ್ಐಪಿ) ನಲ್ಲೂ ಹೂಡಿಕೆದಾರರು ಹೂಡಿಕೆ ಮಾಡಬಹುದು. ಒಂದು ಹಣಕಾಸು ವರ್ಷದಲ್ಲಿ ಮಾಡಿದ 1.5 ಲಕ್ಷ ರೂ.ವರೆಗಿನ ಹೂಡಿಕೆಯು ತೆರಿಗೆ ಕಡಿತಕ್ಕೆ ಅರ್ಹವಾಗಿರುತ್ತದೆ.

435
ನಾನು ಹೂಡಿಕೆ ಮಾಡಲು ಸಿದ್ಧ