ಮ್ಯೂಚುವಲ್ ‌ಫಂಡ್‌ಗಳಲ್ಲಿ ನಾನು ರಿಟರ್ನ್ಸ್‌ ಪಡೆಯುವುದು ಹೇಗೆ?

Video

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ಇತರ ಅಸೆಟ್‌ ಕ್ಲಾಸ್‌ಗಳಂತೆಯೇ, ಮಾಡಿದ ಆರಂಭಿಕ ಹೂಡಿಕೆಗೆ ಹೋಲಿಸಿದರೆ ನಿಮ್ಮ ಹೂಡಿಕೆಯ ಮೌಲ್ಯವರ್ಧನೆಯನ್ನು ಲೆಕ್ಕ ಮಾಡಿ ಮ್ಯೂಚುವಲ್‌ ಫಂಡ್‌ ರಿಟರ್ನ್ಸ್‌ಅನ್ನು ಅಳೆಯಲಾಗುತ್ತದೆ. ಮ್ಯೂಚುವಲ್‌ಫಂಡ್‌ನ ನೆಟ್ ಅಸೆಟ್ ವ್ಯಾಲ್ಯೂಗಳು ಅದರ ಬೆಲೆಯನ್ನು ಸೂಚಿಸುತ್ತವೆ ಮತ್ತು ಇದನ್ನು ನಿಮ್ಮ ಮ್ಯೂಚುವಲ್‌ಫಂಡ್‌ಹೂಡಿಕೆಯಿಂದ ಸಿಗುವ ರಿಟರ್ನ್ಸ್‌ಅನ್ನು ಲೆಕ್ಕ ಮಾಡಲು ಬಳಸಲಾಗುತ್ತದೆ. ಖರೀದಿ ದಿನಾಂಕದ ಎನ್‌ಎವಿ ಮತ್ತು ಮಾರಾಟ ದಿನಾಂಕದ ಎನ್‌ಎವಿಯಲ್ಲಿನ ವ್ಯತ್ಯಾಸವನ್ನು ಲೆಕ್ಕ ಮಾಡಿ ನಿರ್ದಿಷ್ಟ ಕಾಲದಲ್ಲಿ ರಿಟರ್ನ್‌ಅನ್ನು ನಿರ್ಧರಿಸಲಾಗುತ್ತದೆ ಮತ್ತು 100 ಮೂಲಕ ರಿಸಲ್ಟ್ ಅನ್ನು ಗುಣಿಸುವ ಮೂಲಕ ಶೇಕಡಾವಾರು ರೂಪಕ್ಕೆ ಪರಿವರ್ತಿಸಲಾಗುತ್ತದೆ. ಹೋಲ್ಡಿಂಗ್ ಅವಧಿಯಲ್ಲಿ ಫಂಡ್‌ನೀಡಿದ ಯಾವುದೇ ನಿವ್ವಳ ಡಿವಿಡೆಂಡ್‌ಅಥವಾ ಇತರ ಆದಾಯ ವಿತರಣೆಯನ್ನೂ ಬಂಡವಾಳ ವರ್ಧನೆಗೆ ಸೇರಿಸಿ ಒಟ್ಟು ರಿಟರ್ನ್ಸ್‌ಲೆಕ್ಕ ಮಾಡಲಾಗುತ್ತದೆ.

ನಿರ್ದಿಷ್ಟ ಕಾಲದಲ್ಲಿ ಎನ್‌ಎವಿ ಹೆಚ್ಚಳದ ಲೆಕ್ಕ ಮಾಡುವ ಮೂಲಕ ಮ್ಯೂಚುವಲ್‌ಫಂಡ್‌ಗಳಲ್ಲಿನ ಬಂಡವಾಳ ವರ್ಧನೆಯನ್ನು ವ್ಯಾಖ್ಯಾನಿಸಲಾಗುತ್ತದೆ. ಫಂಡ್‌ನ ಪೋರ್ಟ್‌ಫೋಲಿಯೊದಲ್ಲಿರುವ ಕಂಪನಿಗಳ ಷೇರು ಬೆಲೆಗಳಿಂದ ಫಂಡ್‌ನ ಎನ್‌ಎವಿಯನ್ನು ಪಡೆಯಲಾಗುತ್ತದೆ ಮತ್ತು ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತದೆ. ಕಾಲ ಕಳೆದ ಫಂಡ್‌ನ ಎನ್‌ಎವಿಯಲ್ಲಿ ಬದಲಾವಣೆಯಾದಾಗ ನಿಮ್ಮ ಹೋಲ್ಡಿಂಗ್‌ನಲ್ಲಿ ನಷ್ಟ ಅಥವಾ ಬಂಡವಾಳ ವರ್ಧನೆ ಉಂಟಾಗುತ್ತದೆ. ಫಂಡ್‌ಹೌಸ್‌ನಿಮಗೆ ನೀಡಿದ ಖಾತೆ ಸ್ಟೇಟ್‌ಮೆಂಟ್‌ನಲ್ಲಿ ನಿಮ್ಮ ಹೂಡಿಕೆಯ ರಿಟರ್ನ್‌ಪರ್ಫಾರ್ಮೆನ್ಸ್‌ಅನ್ನು ನೋಡಿ. ಈ ಸ್ಟೇಟ್‌ಮೆಂಟ್‌ನಿಮ್ಮ ವಹಿವಾಟುಗಳು ಮತ್ತು ಹೂಡಿಕೆಯ ಮೆಲೆ ರಿಟರ್ನ್ಸ್‌ಅನ್ನು ಒಳಗೊಂಡಿರುತ್ತದೆ.

ಟಿಪ್ಪಣಿ: *ಫಂಡ್‌ನ ಎನ್‌ಎವಿಯು ಡಿವಿಡೆಂಡ್ ಪಾವತಿ ಮತ್ತು ಶಾಸನಾತ್ಮಕ ಲೆವಿಯ (ಇದ್ದರೆ ಮಾತ್ರ) ಮಟ್ಟಿಗೆ ಕೆಳಗೆ ಬೀಳುತ್ತದೆ.

439
ನಾನು ಹೂಡಿಕೆ ಮಾಡಲು ಸಿದ್ಧ