ಉಳಿತಾಯ ಖಾತೆ ಅಥವಾ ಎಫ್‌ಡಿ ರೀತಿ ಯಾಕೆ ಮ್ಯೂಚುವಲ್‌ ಫಂಡ್‌ಗಳು ಫಿಕ್ಸೆಡ್‌ ಬಡ್ಡಿ ದರವನ್ನು ನೀಡುವುದಿಲ್ಲ?

ಉಳಿತಾಯ ಖಾತೆ ಅಥವಾ ಎಫ್‌ಡಿ ರೀತಿ ಯಾಕೆ ಮ್ಯೂಚುವಲ್‌ ಫಂಡ್‌ಗಳು ಫಿಕ್ಸೆಡ್‌ ಬಡ್ಡಿ ದರವನ್ನು ನೀಡುವುದಿಲ್ಲ? zoom-icon

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ಮ್ಯೂಚುವಲ್‌ ಫಂಡ್‌ ಪೋರ್ಟ್‌ಫೋಲಿಯೋದಲ್ಲಿ ರಿಟರ್ನ್ಸ್‌ ಹಲವು ಅಂಶಗಳನ್ನು ಅವಲಂಬಿಸಿರುತ್ತವೆ. ಎಲ್ಲಿ ಹೂಡಿಕೆ ಮಾಡಿದ್ದಾರೆ, ಮಾರ್ಕೆಟ್‌ಗಳು ಸಾಗುವ ರೀತಿ, ಫಂಡ್‌ ನಿರ್ವಹಣೆ ತಂಡದ ಸಾಮರ್ಥ್ಯ ಮತ್ತು ಹೂಡಿಕೆ ಅವಧಿಯು ಪ್ರಭಾವ ಬೀರುತ್ತದೆ.

ಹೀಗಾಗಿ, ಈ ರೀತಿಯ ಹಲವು ಅಂಶಗಳು ಗಮನಕ್ಕೆ ಬರುವುದರಿಂದಾಗಿ, ರಿಟರ್ನ್ಸ್ ಅನ್ನು ಖಚಿತವಾಗಿ ಹೇಳಲಾಗದು. ಫಿಕ್ಸೆಡ್ ಡೆಪಾಸಿಟ್‌ನಲ್ಲಿ ಈ ಅಂಶಗಳು ಕನಿಷ್ಠ ಕೆಲವು ಕಾಲದವರೆಗಾದರೂ ಇರುವುದಿಲ್ಲ.

ಫಿಕ್ಸೆಡ್ ಡೆಪಾಸಿಟ್‌ನಲ್ಲಿ ಫಿಕ್ಸ್ ಆಗಿರುವ ರಿಟರ್ನ್ಸ್‌ ಕೇವಲ ನಿರ್ದಿಷ್ಟ ಅವಧಿಗೆ ಮಾತ್ರವಾಗಿರುತ್ತದೆ. ಈ ರಿಟರ್ನ್ಸ್ ಮತ್ತು ಅವಧಿಗಳೆರಡನ್ನೂ ವಿತರಕ ಕಂಪನಿಯು ನಿರ್ಧರಿಸುತ್ತದೆ. ಇದನ್ನು ಹೂಡಿಕೆದಾರರು ನಿರ್ಧರಿಸುವುದಿಲ್ಲ. ಹೀಗಾಗಿ, ಆರು ವರ್ಷಗಳಿಗೆ ವ್ಯಕ್ತಿಯೊಬ್ಬ ಹೂಡಿಕೆ ಮಾಡಬೇಕು ಎಂದಾದರೆ ಮತ್ತು ಐದು ವರ್ಷಗಳಿಗೆ ಆ ಡೆಪಾಸಿಟ್ ಲಭ್ಯವಿದೆ ಎಂದಾದರೆ, ರಿಟರ್ನ್ಸ್ ಅನ್ನು ಮೊದಲ ಐದು ವರ್ಷಗಳಿಗೆ ಮಾತ್ರ ಖಚಿತಪಡಿಸಲಾಗುತ್ತದೆ. ಇಡೀ ಆರು ವರ್ಷಗಳಿಗೆ ಫಿಕ್ಸ್‌ ಮಾಡಲಾಗಿರವುದಿಲ್ಲ. ಹೀಗಾಗಿ, ಖಚಿತ ರಿಟರ್ನ್ ಉತ್ಪನ್ನಗಳ ವಿಚಾರದಲ್ಲಿ ಮಾತ್ರ ಹೂಡಿಕೆ ರಿಟರ್ನ್ಸ್‌ ಅನ್ನು ಖಚಿತಪಡಿಸಲಾಗುತ್ತದೆ. ಇದರಲ್ಲಿ ಉತ್ಪನ್ನ ಪಕ್ವತೆ ಮತ್ತು ಹೂಡಿಕೆದಾರರ ಕಾಲಾವಧಿಯು ಸರಿಯಾಗಿ ಹೊಂದಿಕೆಯಾಗಿರುತ್ತದೆ.

ಇತರ ಎಲ್ಲ ಸನ್ನಿವೇಶಗಳಲ್ಲಿ, ಹೂಡಿಕೆದಾರರ ಹೂಡಿಕೆ ಅವಧಿಯಲ್ಲಿ ಹೂಡಿಕೆಯ ಮೇಲಿನ ರಿಟರ್ನ್ಸ್‌ ಖಚಿತವಾಗಿರುವುದಿಲ್ಲ.

439
ನಾನು ಹೂಡಿಕೆ ಮಾಡಲು ಸಿದ್ಧ