ಈಕ್ವಿಟಿ ಫಂಡ್‌ಗಳು ಎಂದರೇನು?

Video

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ಈಕ್ವಿಟಿ ಫಂಡ್‌ ಎಂಬುದು ಮ್ಯೂಚುವಲ್‌ ಫಂಡ್‌ ಸ್ಕೀಮ್ ಆಗಿದ್ದು, ಇದು ಮುಖ್ಯವಾಗಿ ಕಂಪನಿಗಳ ಷೇರುಗಳು/ಸ್ಟಾಕ್‌ಗಳಲ್ಲಿ ಹೂಡಿಕೆ ಮಾಡುತ್ತದೆ. ಇವುಗಳನ್ನು ಗ್ರೋತ್ ಫಂಡ್‌ಗಳು ಎಂದೂ ಸಹ ಕರೆಯಲಾಗುತ್ತದೆ.

ಈಕ್ವಿಟಿ ಫಂಡ್‌ಗಳು ಆಕ್ಟಿವ್ ಅಥವಾ ಪ್ಯಾಸಿವ್‌ ಫಂಡ್‌ಗಳಾಗಿರುತ್ತವೆ. ಒಂದು ಆಕ್ಟಿವ್‌ ಫಂಡ್‌ನಲ್ಲಿ ಫಂಡ್‌ಮ್ಯಾನೇಜರ್‌ ಮಾರ್ಕೆಟ್‌ಅನ್ನು ಸ್ಕ್ಯಾನ್ ಮಾಡುತ್ತಾರೆ, ಕಂಪನಿಗಳ ಬಗ್ಗೆ ಸಂಶೋಧನೆ ನಡೆಸುತ್ತಾರೆ, ಅವುಗಳ ಪರ್ಫಾರ್ಮೆನ್ಸ್ ಅನ್ನು ಪರಿಶೀಲಿಸುತ್ತಾರೆ ಮತ್ತು ಹೂಡಿಕೆ ಮಾಡಲು ಉತ್ತಮ ಸ್ಟಾಕ್‌ಗಳನ್ನು ಕಂಡುಕೊಳ್ಳುತ್ತಾರೆ. ಪ್ಯಾಸಿವ್‌ ಫಂಡ್‌ಗಳಲ್ಲಿ, ಜನಪ್ರಿಯ ಮಾರ್ಕೆಟ್‌ ಇಂಡೆಕ್ಸ್‌ಗಳನ್ನು ಉದಾಹರಣೆಗೆ ಸೆನ್ಸೆಕ್ಸ್ ಅಥವಾ ನಿಫ್ಟಿ ಫಿಫ್ಟಿಯನ್ನೇ ಹೋಲುವ ಪೋರ್ಟ್‌ಫೋಲಿಯೋವನ್ನು ಫಂಡ್ ಮ್ಯಾನೇಜರ್ ನಿರ್ಮಿಸುತ್ತಾರೆ.

ಇನ್ನೊಂದೆಡೆ, ಈಕ್ವಿಟಿ ಫಂಡ್‌ಗಳನ್ನು ಮಾರ್ಕೆಟ್ ಬಂಡವಾಳೀಕರಣದ ಆಧಾರದಲ್ಲೂ ವಿಭಜಿಸಬಹುದು. ಅಂದರೆ ಇಡೀ ಕಂಪನಿಯ ಈಕ್ವಿಟಿಯು ಬಂಡವಾಳ ಮಾರುಕಟ್ಟೆಯ ಎಷ್ಟು ಮೌಲ್ಯವನ್ನು ಹೊಂದಿದೆ ಎಂಬುದರ ಆಧಾರದಲ್ಲಿಯೂ ವಿಭಜಿಸಬಹುದು. ಆಗ ನಮಗೆ ಲಭ್ಯವಾಗುವುದೇ ಲಾರ್ಜ್ ಕ್ಯಾಪ್‌, ಮಿಡ್‌ ಕ್ಯಾಪ್‌, ಸ್ಮಾಲ್‌ ಅಥವಾ ಮೈಕ್ರೋ ಕ್ಯಾಪ್‌ ಫಂಡ್‌ಗಳು.

ಇವುಗಳನ್ನು ನಾವು ಇನ್ನೂ ಸಹ ಡೈವರ್ಸಿಫೈಯ್ಡ್‌ ಅಥವಾ ಸೆಕ್ಟೋರಲ್‌/ ಥೆಮಾಟಿಕ್‌ ಎಂದು ವರ್ಗೀಕರಿಸಬಹುದು. ಮೊದಲನೆಯದರಲ್ಲಿ ಇಡೀ ಮಾರ್ಕೆಟ್‌ವ್ಯಾಪ್ತಿಯ ಮೇಲೆ ಸ್ಟಾಕ್‌ಗಳಲ್ಲಿ ಸ್ಕೀಮ್ ಹೂಡಿಕೆ ಮಾಡಲಾಗುತ್ತದೆ. ಆದರೆ ನಂತರದಲ್ಲಿ , ಕೆಲವೇ ವಲಯ ಅಥವಾ ಥೀಮ್‌ಗಳಲ್ಲಿ ಉದಾ., ಇನ್‌ಫೋಟೆಕ್‌ ಅಥವಾ ಇನ್‌ಫ್ರಾಸ್ಟ್ರಕ್ಚರ್‌ನಲ್ಲಿ ಮಾತ್ರ ಹೂಡಿಕೆ ಮಾಡಲಾಗುತ್ತದೆ.

ಹೀಗಾಗಿ, ಒಂದು ಈಕ್ವಿಟಿ ಫಂಡ್‌, ಕಂಪನಿ ಷೇರುಗಳಲ್ಲಿ ಹೂಡಿಕೆ ಮಾಡಲಾಗುತ್ತದೆ ಮತ್ತು ವೃತ್ತಿಪರ ನಿರ್ವಹಣೆ ಮತ್ತು ವೈವಿಧ್ಯತೆಯನ್ನು ಸಾಮಾನ್ಯ ಹೂಡಿಕೆದಾರರಿಗೆ ಒದಗಿಸುವ ಉದ್ದೇಶವನ್ನು ಹೊಂದಿರುತ್ತದೆ.

435
ನಾನು ಹೂಡಿಕೆ ಮಾಡಲು ಸಿದ್ಧ