ಕಾಸ್ಟ್‌ ಆಫ್ ಡಿಲೇ ಕ್ಯಾಲ್‌ಕ್ಯುಲೇಟರ್‌

ನಿಮ್ಮ ಹೂಡಿಕೆಯನ್ನು ವಿಳಂಬ ಮಾಡುವ ಬಗ್ಗೆ ಯೋಚಿಸುತ್ತಿದ್ದೀರಾ?
ನೀವು ನಿರ್ಧಾರ ಮಾಡುವುದಕ್ಕೂ ಮೊದಲು ನಿಮ್ಮ ರಿಟರ್ನ್ಸ್‌ನಲ್ಲಿ ಅದರಿಂದ ಬೀರುವ ಪರಿಣಾಮ ಲೆಕ್ಕ ಹಾಕಿ.

  ಇಂದೇ ಹೂಡಿಕೆ ಮಾಡಿ ತಡವಾಗಿ ಹೂಡಿಕೆ ಮಾಡಿ
ವರ್ಷಗಳು
ವರ್ಷಗಳು
10%
ಎಸ್‌ಐಪಿ ಕೊನೆಗೊಳ್ಳುವ ವಯಸ್ಸು
ವರ್ಷಗಳು
ವರ್ಷಗಳು
ಹೂಡಿಕೆ ಮಾಡಿದ ಒಟ್ಟು ವರ್ಷಗಳು 10 ವರ್ಷಗಳು 5 ವರ್ಷಗಳು
ಹೂಡಿಕೆ ಮಾಡಿದ ಒಟ್ಟು ಮೊತ್ತ ₹ 1.20 ಲಕ್ಷ ₹ 60,000
ನಿಮ್ಮ ಹೂಡಿಕೆಯ ಅಂತಿಮ ಮೌಲ್ಯ ₹ 2.05 ಲಕ್ಷ ₹ 77,437
ಸಂಪತ್ತು ಸೃಷ್ಟಿ ₹ 84,845 ₹ 17,437
ವಿಳಂಬದ ವೆಚ್ಚ  
₹ 1.27 ಲಕ್ಷ
  ಇಂದೇ ಹೂಡಿಕೆ ಮಾಡಿ ತಡವಾಗಿ ಹೂಡಿಕೆ ಮಾಡಿ
ವರ್ಷಗಳು
ವರ್ಷಗಳು
10%
ಹಿಂತೆಗೆದುಕೊಳ್ಳುವ ವಯಸ್ಸು
ವರ್ಷಗಳು
ವರ್ಷಗಳು
ಹೂಡಿಕೆ ಮಾಡಿದ ಒಟ್ಟು ವರ್ಷಗಳು 10 ವರ್ಷಗಳು 5 ವರ್ಷಗಳು
ಹೂಡಿಕೆ ಮಾಡಿದ ಒಟ್ಟು ಮೊತ್ತ ₹ 1 ಲಕ್ಷ ₹ 1 ಲಕ್ಷ
ನಿಮ್ಮ ಹೂಡಿಕೆಯ ಅಂತಿಮ ಮೌಲ್ಯ ₹ 2.59 ಲಕ್ಷ ₹ 1.61 ಲಕ್ಷ
ಸಂಪತ್ತು ಸೃಷ್ಟಿ ₹ 1.59 ಲಕ್ಷ ₹ 61,051
ವಿಳಂಬದ ವೆಚ್ಚ  
₹ 98,323

ಹಕ್ಕುಹೇಳಿಕೆ:

ಹಿಂದಿನ ಕಾರ್ಯಕ್ಷಮತೆಯು ಭವಿಷ್ಯದಲ್ಲಿ ಉಳಿಯಬಹುದು ಅಥವಾ ಇಲ್ಲದಿರಬಹುದು ಮತ್ತು ಯಾವುದೇ ಭವಿಷ್ಯದ ಆದಾಯದ ಭರವಸೆ ಅಲ್ಲ.
ದಯವಿಟ್ಟು ಗಮನಿಸಿ, ಈ ಕ್ಯಾಲ್‌ಕ್ಯುಲೇಟರ್‌ಗಳು ಚಿತ್ರಣದ ಉದ್ದೇಶಕ್ಕೆ ಮಾತ್ರ ಮತ್ತು ನಿಜವಾದ ರಿಟರ್ನ್ಸ್‌ ಅನ್ನು ಪ್ರತಿನಿಧಿಸುವುದಿಲ್ಲ.
ಮ್ಯೂಚುವಲ್ ಫಂಡ್‌ಗಳಿಗೆ ಫಿಕ್ಸೆಡ್‌ ರಿಟರ್ನ್ ದರ ಇರುವುದಿಲ್ಲ ಮತ್ತು ರಿಟರ್ನ್‌ ದರವನ್ನು ಊಹಿಸುವುದು ಸಾಧ್ಯವಿಲ್ಲ. *ಇಲ್ಲಿ ಪ್ರದರ್ಶಿಸಿದ ಮೌಲ್ಯದ ಮೇಲೆ ಹಣದುಬ್ಬರದ ಪರಿಣಾಮವನ್ನು ಇದು ಪರಿಗಣಿಸಿರುವುದಿಲ್ಲ.

ಕಾಸ್ಟ್ ಆಫ್‌ ಡಿಲೇ (ವಿಳಂಬ ವೆಚ್ಚ) ಎಂದರೇನು?

ಕಾಸ್ಟ್ ಆಫ್‌ ಡಿಲೇ ಎಂಬುದು ಹಲವು ವರ್ಷಗಳವರೆಗೆ ಹೂಡಿಕೆಯನ್ನು ಮುಂದೂಡಿದರೆ ಬೇಕಾಗುವ ಹಣದ ಮೊತ್ತವನ್ನು ಸೂಚಿಸುತ್ತದೆ.

ಕಾಸ್ಟ್ ಆಫ್‌ ಡಿಲೇ ಕ್ಯಾಲ್‌ಕ್ಯುಲೇಟರ್‌ ಎಂದರೇನು?

ಕಾಸ್ಟ್ ಆಫ್‌ ಡಿಲೇ ಕ್ಯಾಲ್‌ಕ್ಯುಲೇಟರ್‌ ನಿರ್ದಿಷ್ಟ ಅವಧಿಯವರೆಗೆ ನಿಮ್ಮ ಸಿಸ್ಟಮ್ಯಾಟಿಕ್ ಹೂಡಿಕೆ ವಿಳಂಬ ಮಾಡುವುದರಿಂದ ಉಂಟಾಗುವ ಪರಿಣಾಮವನ್ನು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ನಿಮ್ಮ ಹೂಡಿಕೆ ಆರಂಭಿಸುವುದರಲ್ಲಿ ನೀವು ವಿಳಂಬ ಮಾಡಿದಾಗ ಬೇಕಿರುವ ಹೆಚ್ಚುವರಿ ಹಣವನ್ನು ಕಂಡುಕೊಳ್ಳಲು ಇದು ಸಹಾಯ ಮಾಡುತ್ತದೆ.
ಅತ್ಯಂತ ಸಣ್ಣ ವಿಳಂಬ ಕೂಡಾ ನಿಮ್ಮ ದೀರ್ಘಕಾಲೀನ ಹೂಡಿಕೆಗಳ ಮೇಲೆ ಅಪಾರ ಪರಿಣಾಮವನ್ನು ಉಂಟು ಮಾಡಬಹುದು ಎಂಬುದನ್ನು ಇದು ತೋರಿಸುತ್ತದೆ. ಹೀಗಾಗಿ, ತಕ್ಷಣವೇ ಹೂಡಿಕೆ ಆರಂಭಿಸುವುದು ಆರ್ಥಿಕ ಯಶಸ್ಸಿಗೆ ಅತ್ಯಂತ ಮುಖ್ಯವಾಗಿರುತ್ತದೆ.

ಹೂಡಿಕೆ ವಿಳಂಬಕ್ಕೆ ಉಂಟಾಗುವ ಕಾರಣವೇನು?

ಹೂಡಿಕೆಯನ್ನು ಮಾಡುವಲ್ಲಿ ವಿಳಂಬಕ್ಕೆ ಕಾರಣವಾಗುವ ಪ್ರಮುಖ ಅಂಶಗಳೆಂದರೆ:

 • ಅಸರ್ಪಕ ಹಣಕಾಸು ತಿಳಿವಳಿಕೆ
 • ಸ್ಪಷ್ಟ ಗುರಿಗಳು ಮತ್ತು ಯೋಜನೆಯ ಕೊರತೆ
 • ಮುಂದೂಡುವುದು
 • ಕೆಟ್ಟ ಬಜೆಟ್ ಹವ್ಯಾಸಗಳು
 • ರಿಸ್ಕ್‌ಗಳನ್ನು ತೆಗೆದುಕೊಳ್ಳುವುದಕ್ಕೆ ಹೆದರುವುದು

ಹೂಡಿಕೆಯನ್ನು ವಿಳಂಬ ಮಾಡುವುದರಿಂದ ಗಮನಾರ್ಹ ಪರಿಣಾಮ ಉಂಟಾಗಬಹುದು:

 • ಸಮಯ ಹಾಳು ಮಾಡಿಕೊಂಡಿದ್ದರಿಂದ ದೀರ್ಘಕಾಲೀನ ಗುರಿಗಳಿಗೆ ಸೂಕ್ತ ಹಣಕಾಸು ಹೊಂದಿಲ್ಲದಂತಾಗುವುದು
 • ನಿಮ್ಮ ಹಣದ ಖರೀದಿ ಶಕ್ತಿ ಕುಂದುವುದು
 • ಸಂಚಯದ ಶಕ್ತಿಯನ್ನು ಕಳೆದುಕೊಳ್ಳುವುದು

ಕಾಸ್ಟ್ ಆಫ್‌ ಡಿಲೇ ಕ್ಯಾಲ್‌ಕ್ಯುಲೇಟರ್‌ ಅನ್ನು ನೀವು ಯಾವಾಗ ಬಳಸಬೇಕು?

ಹೂಡಿಕೆಯನ್ನು ಮುಂದೂಡುವ ಬಗ್ಗೆ ಯೋಚಿಸುತ್ತಿರುವಾಗ ಕಾಸ್ಟ್‌ ಆಫ್ ಡಿಲೇ ಕ್ಯಾಲ್‌ಕ್ಯುಲೇಟರ್‌ ಬಳಸಿ. ವಿಳಂಬದಿಂದಾಗಿ ಅಗತ್ಯ ಹೂಡಿಕೆ ಮೊತ್ತದಲ್ಲಿ ಇರುವ ವ್ಯತ್ಯಾಸವನ್ನು ಇದು ವಿಶ್ಲೇಷಿಸಲು ಸಹಾಯ ಮಾಡುತ್ತದೆ. ಅಲ್ಲದೆ, ತಕ್ಷಣ ಹೂಡಿಕೆ ಮಾಡುವುದು ಮತ್ತು ತಡವಾಗಿ ಹೂಡಿಕೆ ಮಾಡುವ ಆಯ್ಕೆಗಳನ್ನು ಹೋಲಿಸಿ ನೋಡುವುದು ಮತ್ತು ವಾಸ್ತವಿಕ ಅಂಕಿ ಸಂಖ್ಯೆಗಳನ್ನು ಆಧರಿಸಿ ಸ್ಮಾರ್ಟ್ ಆದ ನಿರ್ಧಾರಗಳನ್ನು ಮಾಡಲು ನೆರವಾಗುತ್ತದೆ.

ಕಾಸ್ಟ್ ಆಫ್‌ ಡಿಲೇ ಕ್ಯಾಲ್‌ಕ್ಯುಲೇಟರ್‌ ಬಳಕೆಯ ಪ್ರಯೋಜನಗಳು

 • ಸಕಾಲಿಕ ಅವಕಾಶಗಳನ್ನು ಮೌಲ್ಯಮಾಪನ ಮಾಡಿ: ಸಮಯ ಮಿತಿ ಇರುವ ಹೂಡಿಕೆ ಆಯ್ಕೆಗಳಲ್ಲಿ ತಕ್ಷಣವೇ ಕ್ರಮ ತೆಗೆದುಕೊಳ್ಳುವುದು ಆರ್ಥಿಕವಾಗಿ ಪ್ರಯೋಜನಕಾರಿಯೇ ಅಥವಾ ವಿಳಂಬ ಮಾಡುವುದು ಉತ್ತಮವೇ ಎಂದು ನಿರ್ಧರಿಸುವುದು.
 • ದೀರ್ಘಕಾಲೀನ ಬೆಳವಣಿಗೆಯನ್ನು ವಿಶ್ಲೇಷಿಸುವುದು: ರೆಗ್ಯುಲರ್ ಹೂಡಿಕೆಯನ್ನು ಮುಂದೂಡಿದರೆ ಉಂಟಾಗುವ ಬೆಳವಣಿಗೆಯ ಸಂಭಾವ್ಯ ನಷ್ಟ ಮತ್ತು ಸಂಚಯದ ಪರಿಣಾಮವನ್ನು ನೋಡಿ.
 • ಹೂಡಿಕೆ ಆಯ್ಕೆಗಳ ಹೋಲಿಕೆ ಮಾಡಿ: ವಿವಿಧ ಕಾಲಾವಧಿ ಅಥವಾ ಸಂಭಾವ್ಯ ರಿಟರ್ನ್‌ಗಳೊಂದಿಗೆ ವಿವಿಧ ಆಯ್ಕೆಗಳಲ್ಲಿ ಹೂಡಿಕೆ ವಿಳಂಬ ಮಾಡುವುದರ ವೆಚ್ಚವನ್ನು ಹೋಲಿಕೆ ಮಾಡಿ.

ಕಾಸ್ಟ್ ಆಫ್‌ ಡಿಲೇ ಕ್ಯಾಲ್‌ಕ್ಯುಲೇಟರ್‌ ಹೇಗೆ ಕೆಲಸ ಮಾಡುತ್ತದೆ?

ಈ ಕ್ಯಾಲ್‌ಕ್ಯುಲೇಟರ್‌ ಪೂರ್ವ ನಿಗದಿತ ಫಾರ್ಮುಲಾ ಆಧರಿಸಿ ಕೆಲಸ ಮಾಡುತ್ತದೆ. ಆದರೆ, ಇದು ಮಾರುಕಟ್ಟೆಯಲ್ಲಿ ಏರಿಳಿತ ಅಥವಾ ರಿಟರ್ನ್ಸ್‌ ಮೇಲೆ ಬಾಹ್ಯ ಪರಿಣಾಮವನ್ನು ಪರಿಗಣಿಸುವುದಿಲ್ಲ.

ಆಗಾಗ್ಗೆ ಕೇಳಿದ ಪ್ರಶ್ನೆಗಳು

ಪ್ರ. 1. ಹೂಡಿಕೆ ನಿರ್ಧಾರಗಳನ್ನು ಮಾಡುವಲ್ಲಿ ಹೂಡಿಕೆ ವಿಳಂಬ ವೆಚ್ಚ ಕ್ಯಾಲ್‌ಕ್ಯುಲೇಟರ್‌ ಹೇಗೆ ನೆರವಾಗುತ್ತದೆ?

ಉತ್ತರ. ಹೂಡಿಕೆಯನ್ನು ವಿಳಂಬ ಮಾಡುವುದರಿಂದ ಉಂಟಾಗುವ ಪರಿಣಾಮವನ್ನು ಚಿತ್ರಿಸುವ ಮೂಲಕ ಮಾಹಿತಿಯುಕ್ತ ನಿರ್ಧಾರಗಳನ್ನು ಮಾಡಲು ಹೂಡಿಕೆ ವಿಳಂಬ ಕ್ಯಾಲ್‌ಕ್ಯುಲೇಟರ್‌ ನೆರವಾಗುತ್ತದೆ. ಹೂಡಿಕೆ ಆರಂಭಿಸಲು ಸೂಕ್ತ ಸಮಯವನ್ನು ನಿರ್ಧರಿಸಲು ಮತ್ತು ನಿಮ್ಮ ಹಣಕಾಸಿನ ಗುರಿಗಳ ಕಡೆಗೆ ಕೆಲಸ ಮಾಡಲು ಇದು ಸಹಾಯ ಮಾಡುತ್ತದೆ.

ಪ್ರ. 2. ಹೂಡಿಕೆ ವಿಳಂಬದ ವೆಚ್ಚವನ್ನು ಲೆಕ್ಕ ಮಾಡುವುದು ಏಕೆ ಪ್ರಮುಖವಾಗಿದೆ?

ಉತ್ತರ. ಹೂಡಿಕೆಯನ್ನು ಮೊದಲೇ ಆರಂಭಿಸುವುದರ ಪ್ರಾಮುಖ್ಯತೆ ಮತ್ತು ಅದನ್ನು ಮುಂದೂಡುವುದರಿಂದ ಸಂಭಾವ್ಯ ಅವಕಾಶ ತಪ್ಪಿಹೋಗುವುದನ್ನು ಅರ್ಥ ಮಾಡಿಕೊಳ್ಳಲು ಹೂಡಿಕೆ ವಿಳಂಬದ ವೆಚ್ಚವನ್ನು ಲೆಕ್ಕ ಮಾಡುವಿಕೆ ಸಹಾಯ ಮಾಡುತ್ತದೆ.

ಪ್ರ. 3. ಹೂಡಿಕೆ ವಿಳಂಬದ ವೆಚ್ಚ ಕ್ಯಾಲ್‌ಕ್ಯುಲೇಟರ್ ಯಾವ ಅಂಶಗಳನ್ನು ಪರಿಗಣಿಸುತ್ತದೆ?

ಉತ್ತರ. ನೀವು ಹೂಡಿಕೆ ಮಾಡಲು ಬಯಸುವ ಮೊತ್ತ, ಕಾಲಾವಧಿ, ನಿರೀಕ್ಷಿತ ರಿಟರ್ನ್ಸ್‌ ಮತ್ತು ವಿಳಂಬದ ಅವಧಿಯನ್ನು ಕ್ಯಾಲ್‌ಕ್ಯುಲೇಟರ್‌ ಪರಿಗಣಿಸುತ್ತದೆ.

ಪ್ರ. 4. ಹೂಡಿಕೆ ವಿಳಂಬ ವೆಚ್ಚ ಕ್ಯಾಲ್‌ಕ್ಯುಲೇಟರ್‌ನ ಫಲಿತಾಂಶಗಳು ನಿಖರವಾಗಿರುತ್ತದೆಯೇ?

ಉತ್ತರ. ಫಲಿತಾಂಶವು ಕೆಲವು ಊಹೆಗಳನ್ನು ಆಧರಿಸಿದ ಅಂದಾಜು ಆಗಿರುತ್ತದೆ ಮತ್ತು ಭವಿಷ್ಯದ ಫಲಿತಾಂಶಗಳ ಖಾತರಿಯಾಗಿ ನೋಡುವುದರ ಬದಲಿಗೆ ಒಂದು ಮಾರ್ಗದರ್ಶಿಯನ್ನಾಗಿ ಬಳಸಬೇಕು.

ಹಕ್ಕುಹೇಳಿಕೆ:

1. ಈ ಲೆಕ್ಕಾಚಾರಗಳು ಕೇವಲ ಸಾಂದರ್ಭಿಕವಾಗಿವೆ ಮತ್ತು ನಿಜವಾದ ವಾಪಸಾತಿಗಳನ್ನು ಪ್ರತಿನಿಧಿಸುವುದಿಲ್ಲ.

2. ಮ್ಯೂಚುವಲ್‌ ಫಂಡ್‌ಗಳು ಖಚಿತ ವಾಪಸಾತಿ ದರವನ್ನು ಹೊಂದಿರುವುದಿಲ್ಲ ಮತ್ತು ವಾಪಸಾತಿ ದರವನ್ನು ಊಹಿಸುವುದು ಸಾಧ್ಯವಿಲ್ಲ.

3. ಮ್ಯೂಚುಯಲ್ ಫಂಡ್ ಹೂಡಿಕೆಗಳು ಮಾರುಕಟ್ಟೆ ಅಪಾಯಗಳಿಗೆ ಒಳಪಟ್ಟಿರುತ್ತವೆ, ಎಲ್ಲಾ ಯೋಜನೆ ಸಂಬಂಧಿತ ದಾಖಲಾತಿಗಳನ್ನು ಜಾಗ್ರತೆಯಿಂದ ಓದಿರಿ.