ಮ್ಯೂಚುವಲ್‌ ಫಂಡ್‌ಗಳಲ್ಲಿ ಹೂಡಿಕೆಯನ್ನು ನಾನು ಯಾವಾಗ ಆರಂಭಿಸಬೇಕು?

Video

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ಒಂದು ಸುಂದರ ಚೀನಾ ಗಾದೆ ಇದೆ. "ಮರವನ್ನು ನೆಡಲು ಉತ್ತಮ ಸಮಯವೆಂದರೆ, ಅದು 20 ವರ್ಷಗಳ ಹಿಂದೆ ಎಂಬುದಾಗಿದೆ. ಎರಡನೇ ಉತ್ತಮ ಸಮಯ ಎಂದರೆ ಈಗ."

ಹೂಡಿಕೆ ಮಾಡಲು ಹಣ ಇಲ್ಲ ಎಂಬುದನ್ನು ಹೊರತುಪಡಿಸಿದರೆ, ಹೂಡಿಕೆ ಮಾಡಲು ವಿಳಂಬ ಮಾಡುವುದಕ್ಕೆ ಯಾವುದೇ ಕಾರಣವೇ ಇಲ್ಲ. ಹೀಗಾಗಿ ಮ್ಯೂಚುವಲ್‌ ಫಂಡ್ಸ್‌ ಅನ್ನು ಬಳಸುವುದು ಉತ್ತಮ ವಿಧಾನ.

ಹೂಡಿಕೆ ಆರಂಭಿಸಲು ಯಾವುದೇ ಕನಿಷ್ಠ ವಯಸ್ಸು ಇಲ್ಲ. ಗಳಿಕೆ ಮತ್ತು ಉಳಿತಾಯವನ್ನು ಆರಂಭಿಸಿದ ಕ್ಷಣವೇ ಮ್ಯೂಚುವಲ್‌ ಫಂಡ್‌ಗಳಲ್ಲಿ ಹೂಡಿಕೆ ಮಾಡಲು ಆರಂಭಿಸಬಹುದು. ಅಷ್ಟಕ್ಕೂ, ಮಕ್ಕಳು ತಮ್ಮ ಬರ್ತ್‌ಡೇಗಳು ಅಥವಾ ಹಬ್ಬಗಳಲ್ಲಿ ಉಡುಗೊರೆ ರೂಪದಲ್ಲಿ ಸ್ವೀಕರಿಸಿದ ಹಣವನ್ನು ಬಳಸಿ ಮ್ಯೂಚುವಲ್‌ ಫಂಡ್ಸ್‌ನಲ್ಲಿ ಮಕ್ಕಳೂ ಕೂಡ ಹೂಡಿಕೆಯನ್ನು ಮಾಡಬಹುದು. ಇದೇ ರೀತಿ, ಮ್ಯೂಚುವಲ್‌ ಫಂಡ್‌ಗಳಲ್ಲಿ ಹೂಡಿಕೆಗೆ ಗರಿಷ್ಠ ವಯೋಮಿತಿ ಕೂಡ ಇಲ್ಲ.

ವಿಭಿನ್ನ ಉದ್ದೇಶಗಳಿಗೆ ಸೂಕ್ತವಾದ ಹಲವು ವಿಭಿನ್ನ ಸ್ಕೀಮ್‌ಗಳೂ ಮ್ಯೂಚುವಲ್‌ ಫಂಡ್‌ಗಳಲ್ಲಿ ಇವೆ. ಕೆಲವು ದೀರ್ಘಕಾಲದಲ್ಲಿ ಗ್ರೋತ್‌ಗೆ ಸೂಕ್ತವಾಗಿವೆ ಮತ್ತು ಕೆಲವು ನಿಯತ ಆದಾಯದ ಜೊತೆಗೆ ಸುರಕ್ಷತೆಯನ್ನು ಬಯಸುವವರಿಗೆ ಸೂಕ್ತವಾಗಿವೆ. ಅಷ್ಟೇ ಅಲ್ಲ, ಅಲ್ಪಾವಧಿಯಲ್ಲಿ ಲಿಕ್ವಿಡಿಟಿ ಒದಗಿಸಲು ಕೂಡ ಸೂಕ್ತವಾಗಿವೆ.

ನೀವು ಜೀವನದ ಯಾವುದೇ ಹಂತದಲ್ಲಿ ಇರಲಿ ಅಥವಾ ನಿಮ್ಮ ಅಗತ್ಯಗಳು ಯಾವುದೇ ಆಗಿರಲಿ, ಪ್ರತಿಯೊಬ್ಬರಿಗೂ ಸೂಕ್ತವಾದ ಮ್ಯೂಚುವಲ್‌ ಫಂಡ್‌ಗಳು ಇರಬಹುದಾಗಿರುತ್ತವೆ.

434
ನಾನು ಹೂಡಿಕೆ ಮಾಡಲು ಸಿದ್ಧ