ಎಲ್ಲಾ ಮ್ಯೂಚುವಲ್‌ಫಂಡ್‌ಗಳು ರಿಸ್ಕ್ ಹೊಂದಿರುತ್ತವೆಯೇ?

ಎಲ್ಲಾ  ಮ್ಯೂಚುವಲ್‌ಫಂಡ್‌ಗಳು ರಿಸ್ಕ್ ಹೊಂದಿರುತ್ತವೆಯೇ?

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ನಾವು ಮಾಡುವ ಪ್ರತಿ ಹೂಡಿಕೆಯಲ್ಲೂ ರಿಸ್ಕ್ ಇರುತ್ತದೆ. ಇದರ ರೀತಿ ಮತ್ತು ಪ್ರಮಾಣದಲ್ಲಿ ವ್ಯತ್ಯಾಸವಿರುತ್ತದೆ. ಇದೇ ನಿಯಮ ಮ್ಯೂಚುವಲ್‌ಫಂಡ್‌ಗಳಿಗೂ ಅನ್ವಯಿಸುತ್ತದೆ.

ಹೂಡಿಕೆಯ ಮೇಲೆ ರಿಟರ್ನ್ಸ್‌ವಿಚಾರದಲ್ಲಿ ಎಲ್ಲಾ ಮ್ಯೂಚುವಲ್ ‌ಫಂಡ್‌ ಸ್ಕೀಮ್‌ಗಳು ಇದೇ ರಿಸ್ಕ್ ಅನ್ನು ಹೊಂದಿರುವುದಿಲ್ಲ.

ಸಂಪತ್ತು ಸೃಷ್ಟಿಸುವ ದೀರ್ಘಕಾಲದಲ್ಲಿ ಉತ್ತಮ ರಿಟರ್ನ್ಸ್‌ಒದಗಿಸುವ ಸಾಧ್ಯತೆಯನ್ನು ಈಕ್ವಿಟಿ ಸ್ಕೀಮ್‌ಗಳು ಹೊಂದಿರುತ್ತವೆ. ನೆನಪಿಡಿ, ಹಣದುಬ್ಬರವೇ ಒಂದು ರಿಸ್ಕ್ ಮತ್ತು ಹಣದುಬ್ಬರವನ್ನು ಮೀರಿಸಲು ಈಕ್ವಿಟಿಗಳು ಉತ್ತಮ ಅಸೆಟ್ ಕ್ಲಾಸ್ ಆಗಿದೆ. ಹೀಗಾಗಿ, ಈ ನಿಟ್ಟಿನಲ್ಲಿ ಕೆಲವು ರಿಸ್ಕ್ ಗಳನ್ನು ನಾವು ಎದುರಿಸಲೇಬೇಕಾಗುತ್ತದೆ.

ಇನ್ನೊಂದೆಡೆ, ಈಕ್ವಿಟಿ ಫಂಡ್‌ಗಳಿಗೆ ಹೋಲಿಸಿದರೆ ಲಿಕ್ವಿಡ್‌ಫಂಡ್‌ಗಳಿಗೆ ಸಂಬಂಧಿಸಿದ ರಿಸ್ಕ್‌ಅತ್ಯಂತ ಕಡಿಮೆಯಾಗಿರುತ್ತದೆ. ಕಡಿಮೆ ರಿಸ್ಕ್ ಹೊಂದುವುದರ  ಮೂಲಕ ಬಂಡವಾಳದ ರಕ್ಷಣೆಯ ಮೇಲೆ ಲಿಕ್ವಿಡ್ ಫಂಡ್‌ಹೆಚ್ಚು ಗಮನ ಹರಿಸುತ್ತದೆ.

ಅಷ್ಟೇ ಅಲ್ಲದೆ, ನೀವು ನೆನಪಿಡಬೇಕಾದ ಮತ್ತೊಂದು ಸಂಗತಿಯೆಂದರೆ ರಿಟರ್ನ್ಸ್‌ಮೇಲಿನ ರಿಸ್ಕ್ ಅನ್ನು ಮಾತ್ರ ನೀವು ಪರಿಗಣಿಸಬಾರದು. ಇದರಲ್ಲಿ ಲಿಕ್ವಿಡಿಟಿ ರಿಸ್ಕ್‌ನಂತಹ ಇತರ ರಿಸ್ಕ್‌ಗಳೂ ಇರುತ್ತವೆ. ನಿಮ್ಮ ಹೂಡಿಕೆಯನ್ನು ನಗದು ರೂಪದಲ್ಲಿ ಎಷ್ಟು ಸುಲಭವಾಗಿ ಪರಿವರ್ತನೆ ಮಾಡಬಹುದು ಎಂಬುದನ್ನು ಲಿಕ್ವಿಡಿಟಿ ರಿಸ್ಕ್‌ಅಳೆಯುತ್ತದೆ. ಈ ರಿಸ್ಕ್ ಮ್ಯೂಚುವಲ್‌ಫಂಡ್‌ಗಳಲ್ಲಿ ಅತ್ಯಂತ ಕಡಿಮೆಯದಾಗಿದೆ.

ಅಂತಿಮವಾಗಿ, ಸ್ಕೀಮ್‌ನ ಬಗ್ಗೆ ಸರಿಯಾಗಿ ತಿಳಿವಳಿಕೆ ಪಡೆಯುವುದು ಮತ್ತು ಮೌಲ್ಯೀಕರಣವನ್ನು ಮಾಡುವುದು ಮತ್ತು ಮ್ಯೂಚುವಲ್ ‌ಫಂಡ್ ವಿತರಕರ ಮಾರ್ಗದರ್ಶನ ಪಡೆಯುವುದು ಅಥವಾ ಹೂಡಿಕೆದಾರರ ಸಲಹೆ ಪಡೆಯುವ ಮೂಲಕ ರಿಸ್ಕ್ ನ ರೀತಿ ಮತ್ತು ವ್ಯಾಪ್ತಿಯನ್ನು ಉತ್ತಮವಾಗಿ ತಿಳಿದುಕೊಳ್ಳಬಹುದು.

436
ನಾನು ಹೂಡಿಕೆ ಮಾಡಲು ಸಿದ್ಧ