ರಿಟೈರ್‌ಮೆಂಟ್ ಪ್ಲಾನಿಂಗ್ ಕ್ಯಾಲಕ್ಯುಲೇಟರ್

ನಿಮ್ಮ ನಿವೃತ್ತಿ ನಿಧಿಯ ಭವಿಷ್ಯದ ಬ್ಯಾಲೆನ್ಸ್ ಅನ್ನು ಅಂದಾಜು ಮಾಡಿ.

ವರ್ಷಗಳು
ವರ್ಷಗಳು
ವರ್ಷಗಳು
%
%
%
ನಿವೃತ್ತಿಯ ನಂತರ ತಕ್ಷಣ ಅಗತ್ಯವಿರುವ ವಾರ್ಷಿಕ ಆದಾಯ
ನಿವೃತ್ತಿಯ ನಂತರ ಅಗತ್ಯವಿರುವ ಒಟ್ಟು ಬಂಡವಾಳ
ಹಣವನ್ನು ಕ್ರೋಢೀಕರಿಸಲು ಅಗತ್ಯವಿರುವ ಮಾಸಿಕ ಉಳಿತಾಯ

ಹಕ್ಕು ನಿರಾಕರಣೆ:

ಹಿಂದಿನ ಕಾರ್ಯಕ್ಷಮತೆಯು ಭವಿಷ್ಯದಲ್ಲಿ ಉಳಿಯಬಹುದು ಅಥವಾ ಇಲ್ಲದಿರಬಹುದು ಮತ್ತು ಯಾವುದೇ ಭವಿಷ್ಯದ ಆದಾಯದ ಭರವಸೆ ಅಲ್ಲ.
ಈ ಲೆಕ್ಕಾಚಾರಗಳು ಕೇವಲ ಸಾಂದರ್ಭಿಕವಾಗಿವೆ ಮತ್ತು ನಿಜವಾದ ವಾಪಸಾತಿಗಳನ್ನು ಪ್ರತಿನಿಧಿಸುವುದಿಲ್ಲ.
ಮ್ಯೂಚುವಲ್‌ ಫಂಡ್‌ಗಳು ಖಚಿತ ವಾಪಸಾತಿ ದರವನ್ನು ಹೊಂದಿರುವುದಿಲ್ಲ ಮತ್ತು ವಾಪಸಾತಿ ದರವನ್ನು ಊಹಿಸುವುದು ಸಾಧ್ಯವಿಲ್ಲ.

MFSH ರಿಟೈರ್‌ಮೆಂಟ್ ಪ್ಲಾನಿಂಗ್ ಕ್ಯಾಲಕ್ಯುಲೇಟರ್

ರಿಟೈರ್‌ಮೆಂಟ್ ಪ್ಲಾನಿಂಗ್ ಎಂಬುದು ಕೆಲಸ ಮಾಡುವ ಪ್ರತಿ ವ್ಯಕ್ತಿಗೂ ಅಗತ್ಯದ್ದಾಗಿದೆ. ರಿಟೈರ್‌ಮೆಂಟ್ ಪ್ಲಾನ್ ಅನ್ನು ರಚಿಸುವ ಪ್ರಕ್ರಿಯೆಯಲ್ಲಿ ಆದಾಯ ಮೂಲಗಳನ್ನು ಗುರುತಿಸುವುದು, ಪರಿಣಾಮಕಾರಿ ಉಳಿತಾಯ ಯೋಜನೆಯನ್ನು ಸಾಧಿಸುವುದು, ಅಗತ್ಯ ಮೊತ್ತವನ್ನು ಅಂದಾಜು ಮಾಡುವುದು ಮತ್ತು ವಿವಿಧ ಸ್ವತ್ತುಗಳಲ್ಲಿ ನಿಮ್ಮ ಆದಾಯವನ್ನು ಹೂಡಿಕೆ ಮಾಡುವುದು ಒಳಗೊಂಡಿರುತ್ತದೆ.

ಆದಾಗ್ಯೂ, ಉತ್ತಮವಾದ ರಿಟೈರ್‌ಮೆಂಟ್ ಜೀವನವನ್ನು ನಡೆಸಲು ಸರಿಯಾದ ಲೆಕ್ಕಾಚಾರಗಳನ್ನು ಮಾಡುವುದು ಮತ್ತು ನಿಮ್ಮ ಇನ್ವೆಸ್ಟ್‌ಮೆಂಟ್‌ಗಳಿಂದ ಎಷ್ಟು ರಿಟರ್ನ್ ಬರುತ್ತದೆ ಎಂದು ಅಂದಾಜು ಮಾಡುವುದು ಕಷ್ಟಕರ ಸಂಗತಿಯಾಗಿದೆ. ಎಷ್ಟು ರಿಟೈರ್‌ಮೆಂಟ್‌ ನಿಧಿ ಬೇಕು ಎಂದು ಲೆಕ್ಕ ಮಾಡುವಾಗ ಮತ್ತು ಆ ಹಣವನ್ನು ಕ್ರೋಢೀಕರಿಸಲು ನಾವು ಎಷ್ಟು ಹಣ ಉಳಿಸಬೇಕು ಅಥವಾ ಹೂಡಿಕೆ ಮಾಡಬೇಕು ಎಂದು ಲೆಕ್ಕ ಮಾಡುವಾಗ ಸಮಯದಲ್ಲಿ ರಿಟೈರ್‌ಮೆಂಟ್ ಕ್ಯಾಲಕ್ಯುಲೇಟರ್‌ ಕೆಲಸಕ್ಕೆ ಬರುತ್ತದೆ.

ರಿಟೈರ್‌ಮೆಂಟ್ ಪ್ಲಾನಿಂಗ್ ಎಂದರೇನು?

ರಿಟೈರ್‌ಮೆಂಟ್ ಪ್ಲಾನಿಂಗ್ ಎಂದರೆ ನಿವೃತ್ತಿಗಾಗಿ ಸರಿಯಾದ ಹಣಕಾಸು ಸಿದ್ಧಪಡಿಸುವುದು ಎಂದಾಗಿದೆ. ರಿಟೈರ್‌ಮೆಂಟ್‌ಗೆ ಪ್ಲಾನ್ ಮಾಡುವಾಗ, ನೀವು ಹಣದುಬ್ಬರವನ್ನು ಪರಿಗಣಿಸಬೇಕು, ನಿವೃತ್ತಿ ನಂತರದ ವೆಚ್ಚಗಳನ್ನು ಅಂದಾಜು ಮಾಡಬೇಕು, ನಿವೃತ್ತಿಯ ಕಾಲಾವಧಿಯ ಅಂದಾಜು ಮಾಡಬೇಕು, ರಿಸ್ಕ್‌ಗಳನ್ನು ವಿಶ್ಲೇಷಣೆ ಮಾಡಬೇಕು ಮತ್ತು ಒಳನೋಟಗಳುಳ್ಳ ಹೂಡಿಕೆಗಳನ್ನು ಮಾಡಬೇಕು.

ಅಷ್ಟಕ್ಕೂ, ಜೀವಿತಾವಧಿಯ ವರ್ಷ ಹೆಚ್ಚುತ್ತಲೇ ಇರುವುದರಿಂದ, ನಿಮ್ಮ ಉದ್ಯೋಗದಿಂದ ನೀವು ನಿವೃತ್ತಿಯಾದಾಗ ಸುರಕ್ಷಿತವಾದ ಹಣಕಾಸು ಸೌಲಭ್ಯವನ್ನು ಹೊಂದಿರುವುದೂ ಅಗತ್ಯವಿದೆ. ಮ್ಯೂಚುವಲ್ ಫಂಡ್ ಸಹಿ ಹೈ ಯಲ್ಲಿರುವ ರಿಟೈರ್‌ಮೆಂಟ್ ಪ್ಲಾನಿಂಗ್ ಕ್ಯಾಲಕ್ಯುಲೇಟರ್‌ ನಿಮಗೆ ನಿವೃತ್ತಿಯ ನಂತರ ಬೇಕಿರುವ ಹಣದ ಮೊತ್ತವನ್ನು ವಿಶ್ಲೇಷಣೆ ಮಾಡಲು ಮತ್ತು ನಿವೃತ್ತಿಗೂ ಮೊದಲು ಮತ್ತು ನಂತರ ಹೂಡಿಕೆಗಳ ಮೇಲೆ ನೀವು ಪಡೆಯಬಹುದಾದ ರಿಟರ್ನ್ಸ್‌ ಲೆಕ್ಕಾಚಾರ ಮಾಡಲು ಸಹಾಯ ಮಾಡುತ್ತದೆ.

MFSH ರಿಟೈರ್‌ಮೆಂಟ್ ಪ್ಲಾನಿಂಗ್ ಕ್ಯಾಲಕ್ಯುಲೇಟರ್‌ ಎಂದರೇನು?

MFSH ರಿಟೈರ್‌ಮೆಂಟ್ ಕ್ಯಾಲಕ್ಯುಲೇಟರ್‌ ಒಂದು ಆನ್‌ಲೈನ್ ಯುಟಿಲಿಟಿ ಟೂಲ್ ಆಗಿದ್ದು, ನಿಮ್ಮ ನಿವೃತ್ತಿಯ ನಂತರ ನಿಮಗೆ ಅಗತ್ಯವಿರುವ ಹಣದ ಮೊತ್ತವನ್ನು ತೋರಿಸುತ್ತದೆ. ನೀವು ಸಂಚಯಗೊಳಿಸುವ ನಿವೃತ್ತಿ ನಿಧಿಯ ಆಧಾರದಲ್ಲಿ ನಿಮ್ಮ ಹೂಡಿಕೆಯನ್ನು ಯೋಜಿಸಲು ಕೂಡಾ ಇದು ಸಹಾಯ ಮಾಡುತ್ತದೆ.

ಇದು ಎರಡು ಪ್ರಾಥಮಿಕ ವಿಧಾನಗಳಲ್ಲಿ ಕೆಲಸ ಮಾಡುತ್ತದೆ. ಅವುಗಳೆಂದರೆ:

1. ನೀವು ವಾಸಿಸುತ್ತಿರುವ ಪ್ರಸ್ತುತ ಜೀವನಶೈಲಿಯನ್ನು ಮುಂದುವರಿಸಲು ನಿಮ್ಮ ನಿವೃತ್ತಿಯ ನಂತರ ನಿಮಗೆ ಬೇಕಿರುವ ಹಣವನ್ನು ಇದು ತೋರಿಸುತ್ತದೆ.

2. ನಿಮ್ಮ ಇನ್ವೆಸ್ಟ್‌ಮೆಂಟ್‌ಗಳ ರಿಟರ್ನ್‌ ಅನ್ನು ಅಂದಾಜು ಮಾಡಲು ಮತ್ತು ನಿಮ್ಮ ನಿವೃತ್ತಿ ನಿಧಿಯನ್ನು ಸಂಗ್ರಹಿಸಲು ನೀವು ಹೇಗೆ ಹೂಡಿಕೆ ಮಾಡಬೇಕು ಎಂಬುದನ್ನು ನಿರ್ಧಾರ ಮಾಡಲೂ ಇದು ನೆರವಾಗುತ್ತದೆ.

ರಿಟೈರ್‌ಮೆಂಟ್ ಪ್ಲಾನಿಂಗ್ ಕ್ಯಾಲಕ್ಯುಲೇಟರ್‌ ಹೇಗೆ ಕೆಲಸ ಮಾಡುತ್ತದೆ?

MFSH ರಿಟೈರ್‌ಮೆಂಟ್ ಕ್ಯಾಲಕ್ಯುಲೇಟರ್‌ನಲ್ಲಿ ಒಂದು ಫಾರ್ಮುಲಾ ಬಾಕ್ಸ್ ಇರುತ್ತದೆ. ಇದರಲ್ಲಿ ನೀವು ನಿಮ್ಮ ಪ್ರಸ್ತುತ ವಯಸ್ಸು, ನಿಮ್ಮ ನಿವೃತ್ತಿ ವಯಸ್ಸು, ಜೀವಿತಾವಧಿಯ ಅಂದಾಜು ಮತ್ತು ನಿವೃತ್ತಿಯ ನಂತರ ನಿಮಗೆ ಬೇಕಿರುವ ಮಾಸಿಕ ಆದಾಯವನ್ನು ಆಯ್ಕೆ ಮಾಡಬಹುದು. ಅಂದಾಜು ಹಣದುಬ್ಬರ ದರ ಮತ್ತು ಹೂಡಿಕೆಯ ಮೇಲೆ ಅಂದಾಜು ಮಾಡಿದ ರಿಟರ್ನ್‌ ಅನ್ನೂ ನೀವು ಆಯ್ಕೆ ಮಾಡಬಹುದು ಮತ್ತು ನೀವು ಪ್ರಸ್ತುತ ಉಳಿತಾಯವನ್ನು ಹೊಂದಿದ್ದರೆ ಅದನ್ನೂ ಆರಿಸಬಹುದು.

ಈ ವಿವರಗಳನ್ನು ನಮೂದಿಸಿದ ನಂತರ, ರಿಟೈರ್‌ಮೆಂಟ್‌ನಲ್ಲಿ ನಿಮಗೆ ಬೇಕಿರುವ ವಾರ್ಷಿಕ ಆದಾಯ ಮತ್ತು ಈ ಹಣವನ್ನು ಕ್ರೋಢೀಕರಿಸುವುದಕ್ಕೆ ನೀವು ಮಾಡಬೇಕಾದ ಮಾಸಿಕ ಉಳಿತಾಯವನ್ನೂ ಕ್ಯಾಲಕ್ಯುಲೇಟರ್‌ ತೋರಿಸುತ್ತದೆ.

MFSH ರಿಟೈರ್‌ಮೆಂಟ್ ಪ್ಲಾನಿಂಗ್ ಕ್ಯಾಲಕ್ಯುಲೇಟರ್‌ ಬಳಕೆ ಮಾಡುವುದು ಹೇಗೆ?

ಕೆಲವೇ ಹಂತಗಳಲ್ಲಿ ನೀವು ಕ್ಯಾಲಕ್ಯುಲೇಟರ್ ಅನ್ನು ನೀವು ಬಳಸಬಹುದು ಮತ್ತು ಆ ಹಂತಗಳನ್ನು ಈ ಕೆಳಗೆ ಪಟ್ಟಿ ಮಾಡಲಾಗಿದೆ:

ಹಂತ 1: ನಿಮ್ಮ ಪ್ರಸ್ತುತ ವಯಸ್ಸನ್ನು ನಮೂದಿಸಿ.

ಹಂತ 2: ನೀವು ಬಯಸಿದ ನಿವೃತ್ತಿ ವಯಸ್ಸನ್ನು ನಮೂದಿಸಿ.

ಹಂತ 3: ನಿಮ್ಮ ಜೀವಿತಾವಧಿ ಅಂದಾಜನ್ನು ಆಯ್ಕೆ ಮಾಡಿ.

ಹಂತ 4: ನಿವೃತ್ತಿಯ ವರ್ಷಗಳಲ್ಲಿ ನಿಮಗೆ ಬೇಕಿರುವ ಮಾಸಿಕ ಆದಾಯವನ್ನು ನಮೂದಿಸಿ.

ಹಂತ 5: ದೇಶದಲ್ಲಿನ ಅಂದಾಜು ಹಣದುಬ್ಬರ ದರವನ್ನು ನಮೂದಿಸಿ.

ಹಂತ 6: ನಿವೃತ್ತಿಗೂ ಮೊದಲು ಹೂಡಿಕೆಗಳ ಮೇಲೆ ನಿರೀಕ್ಷಿತ ರಿಟರ್ನ್ಸ್ ಅನ್ನು ನಮೂದಿಸಿ.

ಹಂತ 7: ನಿವೃತ್ತಿಯ ನಂತರ ಹೂಡಿಕೆಗಳ ಮೇಲೆ ನಿರೀಕ್ಷಿತ ರಿಟರ್ನ್‌ಗಳನ್ನು ನಮೂದಿಸಿ.

ಹಂತ 8: ನಿವೃತ್ತಿಗೆ ತೆಗೆದಿರಿಸಿದ ಪ್ರಸ್ತುತ ಉಳಿತಾಯಗಳು ಅಥವಾ ಹೂಡಿಕೆಗಳನ್ನು ನಮೂದಿಸಿ.

ಈ ವಿವರಗಳನ್ನು ನೀಡಿದ ನಂತರ, ಕ್ಯಾಲಕ್ಯುಲೇಟರ್‌ ಏನನ್ನು ಪ್ರದರ್ಶಿಸುತ್ತದೆ ಎಂಬುದು ನಿಮಗೆ ಕಾಣಿಸುತ್ತದೆ:

  • • ರಿಟೈರ್‌ಮೆಂಟ್‌ ನಂತರ ನಿಮಗೆ ಬೇಕಿರುವ ವಾರ್ಷಿಕ ಆದಾಯ.
  • • ಕ್ರೋಢೀಕರಿಸಬೇಕಿರುವ ಹೆಚ್ಚುವರಿ ಹಣ.
  • • ಈ ಅಗತ್ಯ ಮೊತ್ತವನ್ನು ಕ್ರೋಢೀಕರಿಸಲು ಪ್ರತಿ ತಿಂಗಳು ಉಳಿಸಬೇಕಿರುವ ಮೊತ್ತ.

MFSH ರಿಟೈರ್‌ಮೆಂಟ್ ಪ್ಲಾನಿಂಗ್ ಕ್ಯಾಲಕ್ಯುಲೇಟರ್‌ ಬಳಕೆ ಮಾಡುವ ಪ್ರಯೋಜನಗಳು

ಈ ರಿಟೈರ್‌ಮೆಂಟ್ ಕ್ಯಾಲಕ್ಯುಲೇಟರ್‌ ಬಳಕೆಯ ಪ್ರಾಥಮಿಕ ಪ್ರಯೋಜನಗಳು:

ಇದು ರಿಟೈರ್‌ಮೆಂಟ್‌ಗೆ ಉಳಿತಾಯ ಮಾಡಲು ಸಹಾಯ ಮಾಡುತ್ತದೆ: ರಿಟೈರ್‌ಮೆಂಟ್ ಉಳಿತಾಯ ಮಾಡುವಿಕೆಯು 20 ಮತ್ತು 30 ರ ವಯಸ್ಸಿನಲ್ಲೇ ಶುರುವಾಗುವುದು ಒಳಿತು. ಅಗತ್ಯವಿರುವ ಹಣ ಮತ್ತು ನಿರ್ದಿಷ್ಟ ಅವಧಿಯಲ್ಲಿ ಅವರಿಗೆ ಬೇಕಾದ ಮೊತ್ತವನ್ನು ಕ್ರೋಢೀಕರಿಸುವ ವಿಧಾನವನ್ನು ತಿಳಿಸಿ ಹೇಳುವ ಮೂಲಕ ವ್ಯಕ್ತಿಗಳು ಸಾಧ್ಯವಾದಷ್ಟು ಬೇಗ ಉಳಿತಾಯ ಮಾಡುವುದು ಮತ್ತು ಹೂಡಿಕೆ ಮಾಡುವುದರ ಪ್ರಾಮುಖ್ಯತೆಯನ್ನು ಕ್ಯಾಲಕ್ಯುಲೇಟರ್‌ ಮನವರಿಕೆ ಮಾಡುತ್ತದೆ.

ರಿಟೈರ್‌ಮೆಂಟ್ ನಂತರ ಅಗತ್ಯವಿರುವ ಅಂದಾಜು ಹಣವನ್ನು ತಿಳಿಯಲು ಸಹಾಯ ಮಾಡುತ್ತದೆ: ನಿಮ್ಮ ನಿವೃತ್ತಿ ಜೀವನಕ್ಕೆ ನಿಮಗೆ ಎಷ್ಟು ಹಣ ಬೇಕು ಎಂದು ಅಂದಾಜು ಮಾಡುವುದು ತುಂಬಾ ಕಷ್ಟಕರವಾಗಿದೆ ಮತ್ತು ಈ ಕ್ಯಾಲಕ್ಯುಲೇಟರ್‌ ಈ ಅಂದಾಜನ್ನು ಯಾವುದೇ ಕಷ್ಟವಿಲ್ಲದೇ ಸಾಧಿಸುತ್ತದೆ. ಅಷ್ಟಕ್ಕೂ, ಒಂದು ನಿರ್ದಿಷ್ಟ ಅವಧಿಯಲ್ಲಿ ಅಂದಾಜು ಮೊತ್ತವನ್ನು ಕ್ರೋಢೀಕರಿಸಲು ನೀವು ಈಗ ಎಷ್ಟು ಹೂಡಿಕೆ ಮಾಡಬೇಕು ಅಥವಾ ಉಳಿತಾಯ ಮಾಡಬೇಕು ಎಂಬುದನ್ನು ಇದು ನಿಮಗೆ ಹೇಳುತ್ತದೆ.

ರಿಟೈರ್‌ಮೆಂಟ್‌ ಸಮಯದಲ್ಲಿ ಹೆಚ್ಚುವರಿ ವೆಚ್ಚಗಳನ್ನು ಯೋಜಿಸಲು ಇದು ಸಹಾಯ ಮಾಡುತ್ತದೆ: ನಿಮ್ಮ ರಿಟೈರ್‌ಮೆಂಟ್ ಸಮಯದಲ್ಲಿ ಹೆಚ್ಚುವರಿ ವೆಚ್ಚ ಎದುರಾಗಬಹುದು ಎಂದಾದರೆ, ಅದನ್ನು ನೀವು ಮೊದಲೇ ಯೋಜಿಸಬಹುದು ಮತ್ತು ಅದಕ್ಕೆ ಸಿದ್ಧವಾಗಬಹುದು. ಏಕೆಂದರೆ, ನಿಮಗೆ ಈಗಾಗಲೇ ರಿಟೈರ್‌ಮೆಂಟ್‌ ಜೀವನದ ವೆಚ್ಚಗಳು ತಿಳಿದಿರುತ್ತವೆ.

ಎಫ್‌ಎಕ್ಯೂಗಳು

ಪ್ರಶ್ನೆ 1. ಮ್ಯೂಚುವಲ್ ಫಂಡ್ಸ್ ಸಹಿ ಹೈ ರಿಟೈರ್‌ಮೆಂಟ್ ಕ್ಯಾಲಕ್ಯುಲೇಟರ್‌ ಎಂದರೇನು?

MFSH ರಿಟೈರ್‌ಮೆಂಟ್ ಪ್ಲಾನಿಂಗ್ ಕ್ಯಾಲಕ್ಯುಲೇಟರ್‌ ಒಂದು ಆನ್‌ಲೈನ್ ಟೂಲ್ ಆಗಿದ್ದು, ರಿಟೈರ್‌ಮೆಂಟ್‌ ನಂತರ ನಿಮ್ಮ ಜೀವನಕ್ಕೆ ಬೇಕಿರುವ ಹಣದ ಮೊತ್ತವನ್ನು ಅಂದಾಜು ಮಾಡಲು ಇದು ನಿಮಗೆ ಸಹಾಯ ಮಾಡುತ್ತದೆ.

ಪ್ರಶ್ನೆ 2. MFSH ರಿಟೈರ್‌ಮೆಂಟ್ ಕ್ಯಾಲಕ್ಯುಲೇಟರ್‌ ಹೇಗೆ ಕೆಲಸ ಮಾಡುತ್ತದೆ?

ನಿಮ್ಮ ರಿಟೈರ್‌ಮೆಂಟ್ ನಂತರ ಅಗತ್ಯ ಮೊತ್ತವನ್ನು ಲೆಕ್ಕ ಮಾಡಲು ಈ ಕ್ಯಾಲಕ್ಯುಲೇಟರ್‌ ಫಾರ್ಮುಲಾ ಬಾಕ್ಸ್ ಅನ್ನು ಬಳಸುತ್ತದೆ.

ಪ್ರಶ್ನೆ 3. ರಿಟೈರ್‌ಮೆಂಟ್ ಪ್ಲಾನಿಂಗ್ ಕ್ಯಾಲಕ್ಯುಲೇಟರ್‌ನಲ್ಲಿ ಯಾವ ವಿವರಗಳನ್ನು ನಾನು ಒದಗಿಸಬೇಕು?

ನಿಮ್ಮ ಪ್ರಸ್ತುತ ವಯಸ್ಸು, ಜೀವಿತಾವಧಿ ವಯಸ್ಸು, ನಿವೃತ್ತಿಯ ನಂತರ ಬೇಕಿರುವ ಮಾಸಿಕ ಆದಾಯ, ನಿಮ್ಮ ಅಂದಾಜು ರಿಟರ್ನ್ ದರ ಮತ್ತು ಹಣದುಬ್ಬರ ದರವನ್ನು ನೀವು ಒದಗಿಸಬೇಕು.

ಪ್ರಶ್ನೆ 4. ನನ್ನ ರಿಟೈರ್‌ಮೆಂಟ್‌ಗೆ ಹಣವನ್ನು ಕ್ರೋಢೀಕರಿಸಲು ಕೆಲವು ಶಿಫಾರಸು ಮಾಡಿದ ವಿಧಾನಗಳು ಯಾವುವು?

ನೀವು ಈಕ್ವಿಟಿ ಇನ್ವೆಸ್ಟ್‌ಮೆಂಟ್, ಮ್ಯೂಚುವಲ್ ಫಂಡ್, ಬಾಂಡ್‌, ಪಿಪಿಎಫ್‌, ರಾಷ್ಟ್ರೀಯ ಪಿಂಚಣಿ ಸ್ಕೀಮ್ ಹಾಗೂ ಇನ್ನಷ್ಟನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು.

ಪ್ರಶ್ನೆ 5. ರಿಟೈರ್‌ಮೆಂಟ್ ಪ್ಲಾನಿಂಗ್ ಕ್ಯಾಲಕ್ಯುಲೇಟರ್ ನಿಖರವಾಗಿದೆಯೇ?

ರಿಟೈರ್‌ಮೆಂಟ್ ಕ್ಯಾಲಕ್ಯುಲೇಟರ್‌ ಲೆಕ್ಕಾಚಾರಕ್ಕೆ ಒಂದು ನಿಖರವಾದ ವಿಧಾನವಾಗಿದೆ. ಆದರೆ, ಇದರಲ್ಲಿ ಹಲವು ಅಂಶಗಳನ್ನೂ ನಾವು ಪರಿಗಣಿಸಬೇಕಾಗುತ್ತದೆ. ಉದಾಹರಣೆಗೆ, ನಿಮ್ಮ ಇನ್ವೆಸ್ಟ್‌ಮೆಂಟ್‌ಗೆ ಇರುವ ರಿಸ್ಕ್‌ಗಳು, ಅನಿರೀಕ್ಷಿತ ತುರ್ತುಪರಿಸ್ಥಿತಿಗಳು ಇತ್ಯಾದಿ.