ನಾನು ರೂ.₹ 500 ರಿಂದ ಆರಂಭಿಸಿ ನಂತರ ಹೆಚ್ಚಳ ಮಾಡಬಹುದೇ?

ನಾನು ರೂ.₹ 500 ರಿಂದ ಆರಂಭಿಸಿ ನಂತರ ಹೆಚ್ಚಳ ಮಾಡಬಹುದೇ?

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ಸಂಪತ್ತು ಸೃಷ್ಟಿಸುವುದಕ್ಕೆ ಜನಪ್ರಿಯ ಹೂಡಿಕೆ ಯೋಜನೆ ಎಂದರೆ ‘ಸಾಧ್ಯವಾದಷ್ಟೂ ಮೊದಲೇ ಹೂಡಿಕೆ ಆರಂಭಿಸುವುದು. ನಿಯತವಾಗಿ ಹೂಡಿಕೆ ಮಾಡಿ. ದೀರ್ಘಕಾಲದವರೆಗೆ ಹೂಡಿಕೆ ಮಾಡಿಕೊಂಡೇ ಇರಿ’. ಹೂಡಿಕೆ ರೂ. 500 ರಷ್ಟು ಕಡಿಮೆ ಇದ್ದರೂ, ಇದು ಪ್ರಯಾಣದ ಆರಂಭವನ್ನು ಮಾಡುವುದರಿಂದ ಅತ್ಯಂತ ಪ್ರಮುಖವಾಗಿರುತ್ತದೆ.

ನೀವು ಹೀಗೆಯೇ ಮುಂದೆ ಸಾಗಿದಂತೆ ಹೂಡಿಕೆ ಮೊತ್ತವನ್ನು ಹೆಚ್ಚಳ ಮಾಡುವ ಅವಕಾಶವನ್ನೂ ನೀವು ಹೊಂದಿರುತ್ತೀರಿ. ಮ್ಯೂಚುವಲ್‌ ಫಂಡ್‌ ಸ್ಕೀಮ್‌ನಲ್ಲಿ, ಅದೇ ಫಂಡ್/ಖಾತೆಯಲ್ಲಿ ಹೆಚ್ಚುವರಿ ಖರೀದಿಗಳನ್ನು ನೀವು ಯಾವುದೇ ಸಮಯದಲ್ಲಿ ಮಾಡಬಹುದಾಗಿರುತ್ತದೆ. ಹಲವು ಮ್ಯೂಚುವಲ್‌ ಫಂಡ್ ಹೌಸ್‌ಗಳಲ್ಲಿ, ₹ರೂ. 100 ಅನ್ನೂ ಹೂಡಿಕೆ ಮಾಡಬಹುದು ಹಾಗೂ ಹಣವನ್ನು ಇತರ ಸ್ಕೀಮ್‌ಗಳಿಗೆ ವರ್ಗಾವಣೆ ಮಾಡಬಹುದು ಅಥವಾ ಬದಲಾವಣೆ ಮಾಡಬಹುದು. ನೀವು ಸಿಸ್ಟಮ್ಯಾಟಿಕ್ ಇನ್ವೆಸ್ಟ್‌ಮೆಂಟ್ ಪ್ಲ್ಯಾನ್ (ಎಸ್‌ಐಪಿ) ಅನ್ನು ಆರಂಭಿಸಬಹುದು. ಇದರಲ್ಲಿ ರಿಕರಿಂಗ್‌ ಡೆಪಾಸಿಟ್‌ ರೀತಿಯಲ್ಲಿ ಸಾಮಾನ್ಯ ಹೂಡಿಕೆಯನ್ನೂ ಕೂಡ ಸ್ಕೀಮ್‌ ಆಗಿ ಪರಿವರ್ತಿಸಬಹುದಾಗಿರುತ್ತದೆ. ಹಾಗೆಯೇ, ಪ್ರತಿ ವರ್ಷವೂ ಎಸ್‌ಐಪಿ ಕೊಡುಗೆಯನ್ನು ನಿಧಾನವಾಗಿ ಹೂಡಿಕೆದಾರರು ಹೆಚ್ಚಳ ಮಾಡಲು ಹಲವು ಎಎಂಸಿಗಳು ಅನುವು ಮಾಡುತ್ತವೆ. ಇದರಿಂದಾಗಿ ಸಂಬಳ ಹೆಚ್ಚಳ ಅಥವಾ ಆದಾಯ ಹೆಚ್ಚಳವಾದಾಗ ಎಸ್‌ಐಪಿ ಹೆಚ್ಚಳ ಮಾಡಬಹುದು.

ಫ್ಲೆಕ್ಸಿಬಿಲಿಟಿ ಮತ್ತು ಅನುಕೂಲವನ್ನು ಹೊಂದಿರುವ ಮ್ಯೂಚುವಲ್‌ ಫಂಡ್‌ಗಳು ಇಂದಿನ ಧಾವಂತದ ಜಗತ್ತಿನಲ್ಲಿ ಅತ್ಯಂತ ಸೂಕ್ತ ಹೂಡಿಕೆ ವಿಧಾನಗಳಾಗಿವೆ.

438
ನಾನು ಹೂಡಿಕೆ ಮಾಡಲು ಸಿದ್ಧ