ಡೆಟ್ ಫಂಡ್‌ಗಳು ಎಂದರೆ ಯಾವುದು?

Video

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ಡೆಟ್ ಫಂಡ್ ಎಂಬುದು ಒಂದು ಮ್ಯೂಚುವಲ್‌ ಫಂಡ್‌ ಸ್ಕೀಮ್‌ ಆಗಿದ್ದು, ಇದು ಬಂಡವಾಳ ವರ್ಧನೆಯನ್ನು ಒದಗಿಸುವ ಫಿಕ್ಸೆಡ್ ಇನ್‌ಕಮ್‌ ಇನ್‌ಸ್ಟ್ರುಮೆಂಟ್‌ಗಳಾದ ಕಾರ್ಪೊರೇಟ್‌ ಮತ್ತು ಸರ್ಕಾರಿ ಬಾಂಡ್‌ಗಳು, ಕಾರ್ಪೊರೇಟ್‌ ಡೆಟ್ ಸೆಕ್ಯುರಿಟಿಗಳು ಮತ್ತು ಮನಿ ಮಾರ್ಕೆಟ್‌ ಇನ್‌ಸ್ಟ್ರುಮೆಂಟ್‌ಗಳು ಇತ್ಯಾದಿಯಲ್ಲಿ ಹೂಡಿಕೆ ಮಾಡುತ್ತವೆ. ಡೆಟ್ ಫಂಡ್‌ಗಳನ್ನೂ ಫಿಕ್ಸೆಡ್ ಇನ್‌ಕಮ್‌ ಫಂಡ್‌ಗಳು ಅಥವಾ ಬಾಂಡ್‌ ಫಂಡ್‌ಗಳು ಎಂದು ಕರೆಯಲಾಗುತ್ತದೆ.

ಡೆಟ್‌ ಫಂಡ್‌ಗಳಲ್ಲಿ ಹೂಡಿಕೆ ಮಾಡುವ ಕೆಲವು ಪ್ರಮುಖ ಅನುಕೂಲಗಳೆಂದರೆ, ಬಹುತೇಕ ಸುಸ್ಥಿರ ರಿಟರ್ನ್ಸ್‌, ಬಹುತೇಕ ಅಧಿಕ ಲಿಕ್ವಿಡಿಟಿ ಮತ್ತು ಸಕಾರಣ ಸುರಕ್ಷತೆ ಆಗಿರುತ್ತದೆ.

ನಿಯತ ಆದಾಯವನ್ನು ಬಯಸುವ, ಆದರೆ ರಿಸ್ಕ್‌ ತೆಗೆದುಕೊಳ್ಳಲು ಬಯಸದ ಹೂಡಿಕೆದಾರರಿಗೆ ಡೆಟ್ ಫಂಡ್‌ಗಳು ಸೂಕ್ತವಾಗಿವೆ. ಡೆಟ್ ಫಂಡ್‌ಗಳು ಕಡಿಮೆ ಅಸ್ಥಿರತೆಯನ್ನು ಹೊಂದಿರುತ್ತವೆ. ಹೀಗಾಗಿ ಇವು ಈಕ್ವಿಟಿ ಫಂಡ್‌ಗಳಿಗಿಂತ ಕಡಿಮೆ ರಿಸ್ಕಿ ಆಗಿವೆ. ಬ್ಯಾಂಕ್‌ ಡೆಪಾಸಿಟ್‌ಗಳಂತಹ ಸಾಂಪ್ರದಾಯಿಕ ಫಿಕ್ಸೆಡ್ ಇನ್‌ಕಮ್‌ ಉತ್ಪನ್ನಗಳಲ್ಲಿ ನೀವು ಉಳಿತಾಯ ಮಾಡುತ್ತಿದ್ದರೆ ಮತ್ತು ಕಡಿಮೆ ಅಸ್ಥಿರತೆಯನ್ನು ಹೊಂದಿರುವ ರಿಟರ್ನ್ಸ್‌ ಅನ್ನು ಎದುರು ನೋಡುತ್ತಿದ್ದರೆ ಆಗ ಡೆಟ್ ಮ್ಯೂಚುವಲ್‌ ಫಂಡ್‌ಗಳು ಉತ್ತಮ ಆಯ್ಕೆಯಾಗಿರಬಹುದು. ಇವು ಹೆಚ್ಚು ತೆರಿಗೆ ದಕ್ಷ ವಿಧಾನದಲ್ಲಿ ಹಣಕಾಸು ಗುರಿಗಳನ್ನು ಸಾಧಿಸಲು ಸಹಾಯವಾಗುತ್ತವೆ ಮತ್ತು ಈ ಮೂಲಕ ಉತ್ತಮ ರಿಟರ್ನ್ಸ್ ಗಳಿಸಲು ಸಹಾಯವಾಗುತ್ತವೆ.

ಕಾರ್ಯನಿರ್ವಹಣೆ ವಿಚಾರದಲ್ಲಿ, ಇತರ ಮ್ಯೂಚುವಲ್‌ ಫಂಡ್‌ ಸ್ಕೀಮ್‌ಗಳಿಗಿಂತ ಡೆಟ್ ಫಂಡ್‌ಗಳು ಸಂಪೂರ್ಣ ವಿಭಿನ್ನವಾಗಿರುತ್ತವೆ. ಆದರೆ, ಬಂಡವಾಳ ಸುರಕ್ಷತೆ ವಿಚಾರದಲ್ಲಿ ಈಕ್ವಿಟಿ ಮ್ಯೂಚುವಲ್‌ ಫಂಡ್‌ಗಳಿಗಿಂತ ಹೆಚ್ಚು ಸ್ಕೋರ್ ಮಾಡುತ್ತವೆ.

434
442
435
ನಾನು ಹೂಡಿಕೆ ಮಾಡಲು ಸಿದ್ಧ