ಮ್ಯೂಚುವಲ್‌ ಫಂಡ್‌ಗಳಲ್ಲಿ ನಾವು ಏಕೆ ಹೂಡಿಕೆ ಮಾಡಬೇಕು?

ಮ್ಯೂಚುವಲ್‌ ಫಂಡ್‌ಗಳಲ್ಲಿ ನಾವು ಏಕೆ ಹೂಡಿಕೆ ಮಾಡಬೇಕು? zoom-icon

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ಮ್ಯೂಚುವಲ್‌ ಫಂಡ್‌ಗಳಲ್ಲಿ ಎಂದಿಗೂ ಹೂಡಿಕೆ ಮಾಡಬಾರದು. ಆದರೆ ಮ್ಯೂಚುವಲ್‌ ಫಂಡ್‌ಗಳ ಮೂಲಕ ಹೂಡಿಕೆ ಮಾಡಬೇಕು.

ವಿವರವಾಗಿ ಹೇಳುವುದಾದರೆ, ನಮ್ಮ ಅಗತ್ಯಗಳನ್ನು ಆಧರಿಸಿ ವಿವಿಧ ಹೂಡಿಕೆ ವಿಧಗಳ ಮೇಲೆ ಹೂಡಿಕೆ ಮಾಡುತ್ತೇವೆ. ಉದಾಹರಣೆಗೆ ಬಂಡವಾಳ ಹೆಚ್ಚಳಕ್ಕಾಗಿ ನಾವು ಈಕ್ವಿಟಿ ಷೇರುಗಳಲ್ಲಿ ಹೂಡಿಕೆ ಮಾಡುತ್ತೇವೆ, ಬಂಡವಾಳದ ಸುರಕ್ಷತೆಗೆ ಮತ್ತು ನಿಯತ ಆದಾಯಕ್ಕಾಗಿ ನಾವು ಫಿಕ್ಸೆಡ್‌ ಇನ್‌ಕಮ್‌ ಉತ್ಪನ್ನಗಳನ್ನು ಖರೀದಿ ಮಾಡುತ್ತೇವೆ.

ಬಹುತೇಕ ಹೂಡಿಕೆದಾರರ ಕಾಳಜಿಯೆಂದರೆ ತಮಗೆ ಯಾವ ಸಲಕರಣೆ ಸೂಕ್ತ ಎಂದು ಹೇಗೆ ತಿಳಿಯುವುದು ಎಂಬುದೇ ಆಗಿದೆ. ಸಂಶೋಧನೆ ಮಾಡಲು ನಮಗೆ ಸಾಕಷ್ಟು ಸಾಮರ್ಥ್ಯ, ಸಮಯ ಅಥವಾ ಆಸಕ್ತಿ ಇಲ್ಲದೇ ಇರಬಹುದು.

ಹೂಡಿಕೆಯನ್ನು ನಿರ್ವಹಿಸಲು, ನಮ್ಮಿಂದ ಸಾಧ್ಯವಾಗದ ಕೆಲಸಗಳನ್ನು ಇತರರಿಗೆ ವಹಿಸಬೇಕು. ತಮ್ಮ ಹೂಡಿಕೆ ನಿರ್ವಹಣೆ ಮಾಡುವ ಕೆಲಸವನ್ನು ವೃತ್ತಿಪರ ಸಂಸ್ಥೆಗೆ ಅಂದರೆ ಮ್ಯೂಚುವಲ್‌ ಫಂಡ್‌ ಕಂಪನಿಗೆ ಔಟ್‌ಸೋರ್ಸ್‌ ಮಾಡಬಹುದು. ವಿವಿಧ ಉದ್ದೇಶಗಳನ್ನು ಈಡೇರಿಸಲು ಮ್ಯೂಚುವಲ್‌ ಫಂಡ್‌ಗಳು ಅವಕಾಶವನ್ನು ಒದಗಿಸುತ್ತವೆ. ಇದರಲ್ಲಿ ಹೂಡಿಕೆದಾರರು ತಮ್ಮ ವಿಶಿಷ್ಟ ಸನ್ನಿವೇಶ ಮತ್ತು ಉದ್ದೇಶವನ್ನು ಆಧರಿಸಿ ಆಯ್ಕೆ ಮಾಡಿಕೊಳ್ಳಬಹುದು.

ಕಾಗದಪತ್ರಗಳೂ ಸೇರಿದಂತೆ ಎಲ್ಲ ನಿರ್ವಹಣೆ ಕೆಲಸಗಳನ್ನು ಮ್ಯೂಚುವಲ್‌ ಫಂಡ್ ಕಂಪನಿಗಳು ಮಾಡಿಕೊಳ್ಳುತ್ತವೆ. ಅವು ಅಕೌಂಟಿಂಗ್‌ ಸೌಲಭ್ಯ ಒದಗಿಸುತ್ತವೆ ಮತ್ತು ನೆಟ್ ಅಸೆಟ್ ವ್ಯಾಲ್ಯೂ (ಎನ್‌ಎವಿ) ಮತ್ತು ಖಾತೆ ಸ್ಟೇಟ್‌ಮೆಂಟ್‌ಗಳ ಮೂಲಕ ಹೂಡಿಕೆ ಪೋರ್ಟ್‌ಫೋಲಿಯೋದ ಪ್ರಗತಿಯನ್ನೂ ವರದಿ ಮಾಡುತ್ತವೆ.

ಭವಿಷ್ಯದ ಅಗತ್ಯಕ್ಕೆ ತಮ್ಮ ಹಣವನ್ನು ಹೂಡಿಕೆ ಮಾಡುವವರಿಗೆ ಮ್ಯೂಚುವಲ್‌ ಫಂಡ್‌ ಉತ್ತಮ ವಿಧವಾಗಿದೆ. ಹಣವನ್ನು ವೃತ್ತಿಪರರ ತಂಡವು ನಿರ್ವಹಿಸುತ್ತದೆ ಮತ್ತು ಸಣ್ಣ ಪುಟ್ಟ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಅಗತ್ಯವಿರವುದಿಲ್ಲವಾದ್ದರಿಂದ, ಅವರ ಪರಿಣಿತಿಯ ಫಲವನ್ನು ಹೂಡಿಕೆದಾರರು ಪಡೆಯುತ್ತಾರೆ.

437
ನಾನು ಹೂಡಿಕೆ ಮಾಡಲು ಸಿದ್ಧ