ಮ್ಯೂಚುವಲ್ ಫಂಡ್ಗಳಲ್ಲಿ ಹೂಡಿಕೆ ಮಾಡಲು ನನಗೆ ಭಾರಿ ಹಣ ಬೇಕಿಲ್ಲವೇ?

ಮ್ಯೂಚುವಲ್ ಫಂಡ್ಗಳಲ್ಲಿ ಹೂಡಿಕೆ ಮಾಡಲು ನನಗೆ ಭಾರಿ ಹಣ ಬೇಕಿಲ್ಲವೇ? zoom-icon

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ಮ್ಯೂಚುವಲ್ ಫಂಡ್ಗಳು ಶ್ರೀಮಂತರಿಗೇ ಸರಿ, ಶ್ರೀಮಂತರು ಮಾತ್ರ ಇದರಲ್ಲಿ ಹೂಡಿಕೆ ಮಾಡಬಹುದು ಎಂದು ಬಹುತೇಕ ಜನರು ಭಾವಿಸುತ್ತಾರೆ. ವಾಸ್ತವೇನೆಂದರೆ ಮ್ಯೂಚುವಲ್ ಫಂಡ್ಗಳಲ್ಲಿ ಹೂಡಿಕೆ ಮಾಡಲು ಭಾರಿ ಮೊತ್ತ ಬೇಕಿಲ್ಲ. ನೀವು ಕನಿಷ್ಠ 500 ರೂ. ಇಂದ ಆರಂಭಿಸಿ ಅಥವಾ 5000 ರೂ. ಹೂಡಿಕೆ ಮಾಡಬಹುದು. ಇದು ನೀವು ಯಾವ ಫಂಡ್ ಆಯ್ಕೆ ಮಾಡಿಕೊಳ್ಳುತ್ತೀರಿ ಎಂಬುದನ್ನು ಆಧರಿಸಿರುತ್ತದೆ.

ಯಾಕೆ ಕನಿಷ್ಠ ಮೊತ್ತವನ್ನು ಇಷ್ಟು ಕಡಿಮೆ ಇಟ್ಟಿರುತ್ತಾರೆ?

ಆರ್ಥಿಕತೆಯ ವ್ಯಾಪ್ತಿಯನ್ನು ವಿಮಾನದಲ್ಲಿ ಪ್ರಯಾಣಿಸುವುದಕ್ಕೆ ಹೋಲಿಕೆ ಮಾಡಬಹುದು. ವಿಮಾನ ಎಲ್ಲರ ಕೈಗೂ ಎಟಕುವಂಥದ್ದಲ್ಲ. ಒಂದು ವಿಮಾನವನ್ನು ಖರೀದಿಸಿ ಅದರಲ್ಲಿ ಪ್ರಯಾಣಿಸಬೇಕೆಂದರೆ ವೆಚ್ಚ ಕೋಟ್ಯಂತರ ರೂಪಾಯಿ ಆಗುತ್ತದೆ. ಆದರೆ, ಎಲ್ಲ ವೆಚ್ಚವನ್ನೂ ಎಲ್ಲ ಪ್ರಯಾಣಿಕರಿಗೂ ಸಮಾನವಾಗಿ ಹಂಚುವುದರಿಂದ ನಮಗೆ ಕಡಿಮೆ ವೆಚ್ಚದಲ್ಲಿ ಪ್ರಯಾಣಿಸಲು ಸಾಧ್ಯಯಾಗುತ್ತದೆ.

ಇದೇ ರೀತಿ, ದೊಡ್ಡ ಮಟ್ಟದಲ್ಲಿ ಹೂಡಿಕೆ ಮಾಡಲು ಒಬ್ಬ ವ್ಯಕ್ತಿಯ ಬಳಿ ಸಾಕಷ್ಟು ಹಣ ಇಲ್ಲದೇ ಇರಬಹುದು. ಹೂಡಿಕೆ ಮಾಡಲು ಅಥವಾ ಸಂಶೋಧನೆ ಮಾಡಲು ವ್ಯಕ್ತಿಯ ಬಳಿ ಸಾಕಷ್ಟು ಹಣ ಮತ್ತು ಸಮಯ ಇಲ್ಲದಿರಬಹುದು. ಆದಾಗ್ಯೂ,  ಆರ್ಥಿಕತೆಯ ವ್ಯಾಪ್ತಿಯಲ್ಲಿ  ಸಣ್ಣ ಹೂಡಿಕೆದಾರರೂ ಮ್ಯೂಚುವಲ್ ಫಂಡ್ಗಳ ಮೂಲಕ ಹಲವು ರೀತಿಯ ಲಾಭ ಪಡೆದುಕೊಳ್ಳಲು ಅವಕಾಶ ನೀಡಲಾಗುತ್ತದೆ.

ಹೀಗಾಗಿ ಉಳಿತಾಯ ಮತ್ತು ಹೂಡಿಕೆಗೆ ಸಣ್ಣ ಹೂಡಿಕೆದಾರರಿಗೆ ಮ್ಯೂಚುವಲ್ ಫಂಡ್ಗಳು ಉತ್ತಮ ವಾಹನವಾಗಿದೆ.

437
ನಾನು ಹೂಡಿಕೆ ಮಾಡಲು ಸಿದ್ಧ