ನಿರ್ದಿಷ್ಟ ದೀರ್ಘಕಾಲೀನ ಗುರಿಗಳನ್ನು ಸಾಧಿಸಲು ಯೋಜನೆ ರೂಪಿಸುವುದಕ್ಕಾಗಿ ಮ್ಯೂಚುವಲ್ಫಂಡ್ಗಳ ಬಗ್ಗೆ ಲೇಖನಗಳನ್ನು ಬರೆಯಲಾಗಿದೆ ಮತ್ತು ಇತರ ಗುರಿಗಳಾದ ಅಲ್ಪಕಾಲದ ಗುರಿಗಳನ್ನು ಇದರಿಂದ ಸಾಧಿಸಲಾಗುವುದಿಲ್ಲ ಎಂದು ಹೂಡಿಕೆದಾರರು ಭಾವಿಸಿದ್ದಾರೆ.
ಆದರೆ ಒಂದು ಉದಾಹರಣೆಯ ಮೂಲಕ ಈ ಮಿಥ್ಯೆಯನ್ನು ಹೋಗಲಾಡಿಸೋಣ.
ರಮೇಶ್ಗೆ ತಿರುಗಾಟವೆಂದರೆ ಪಂಚಪ್ರಾಣ. ಅವರು ಕೆಲಸ ಮಾಡುತ್ತಿದ್ದ ಕಂಪನಿಯು ಮಹತ್ವದ ಸಾಧನೆಯೊಂದನ್ನು ಮಾಡಿದಾಗ, ಉದ್ಯೋಗಿಗಳಿಗೆ ಬೋನಸ್ ನೀಡಿತ್ತು.
ಈ ಬೋನಸ್ಅನ್ನು ಪಡೆದ ರಮೇಶ್ಯುರೋಪ್ಟ್ರಿಪ್ಕೈಗೊಳ್ಳಲು ನಿರ್ಧರಿಸಿದರು. ಆದರೆ ಅವರು ಮಾಡುತ್ತಿದ್ದ ದೊಡ್ಡ ಹಾಗೂ ಪ್ರತಿಷ್ಠಿತ ಪ್ರಾಜೆಕ್ಟ್ನಲ್ಲಿ ಅವರ ಕೆಲಸ ಇನ್ನೂ ಮುಗಿದಿರಲಿಲ್ಲ. ಡೆಡ್ಲೈನ್ಇನ್ನೇನು ಸಮೀಪಿಸುತ್ತಿತ್ತು. ಮುಂದಿನ ಎಂಟು ತಿಂಗಳಲ್ಲಿ ಪ್ರಾಜೆಕ್ಟ್ ಮುಗಿಯಲಿದೆ.
ರಮೇಶ್ಯಾವಾಗ ಪ್ರಯಾಣ ಮಾಡಬೇಕು ಎಂಬ ನಿಖರ ದಿನಾಂಕವನ್ನು ಇನ್ನಷ್ಟೇ ನಿರ್ಧರಿಸಬೇಕಿದೆ. ಅವರ ವೆಚ್ಚವನ್ನು ನೋಡಿದರೆ, ಪ್ರವಾಸ ಕೈಗೊಳ್ಳುವುದಕ್ಕೂ ಮೊದಲು ಮತ್ತು ಪ್ರವಾಸದ ವೇಳೆ ಸ್ವಲ್ಪ ಹಣವನ್ನು ವೆಚ್ಚ ಮಾಡಬೇಕಾಗಿದೆ. ಎಷ್ಟು ಹಣವನ್ನು ಯಾವ ದಿನಾಂಕದಂದು ವೆಚ್ಚ ಮಾಡಬೇಕು ಎಂಬ ಖಚಿತತೆ ಇಲ್ಲ.
ಇಂತಹ ಪ್ರಕರಣಗಳಿಗೆ ಕೆಲವು ಮ್ಯೂಚುವಲ್ಫಂಡ್ಗಳು ಸೂಕ್ತ.
ಸಾಮಾನ್ಯವಾಗಿ ರಮೇಶ್ಈ ಹಣವನ್ನು ಲಿಕ್ವಿಡ್ ಫಂಡ್ನಲ್ಲಿ ಹೂಡಿಕೆ ಮಾಡುತ್ತಾರೆ. ಇದನ್ನು ಯಾವುದೇ ಕೆಲಸದ ದಿನದಂದು ತೆಗೆದುಕೊಳ್ಳಬಹುದು. ಹಿಂಪಡೆಯಲು ವಿನಂತಿ ಸಲ್ಲಿಸಿದ ಮರುದಿನ ಅವರ ಖಾತೆಗೆ ಹಣ ಜಮೆಯಾಗಿರುತ್ತದೆ. ಎಸ್ಎಂಎಸ್ ಅಥವಾ ಆಪ್ಮೂಲಕ ಹಿಂಪಡೆಯಲೂ ರಮೇಶ್ವಿನಂತಿ ಸಲ್ಲಿಸಬಹುದು.
ಅಲ್ಪಕಾಲದ ಗುರಿಗಳ ಯೋಜನೆ ರೂಪಿಸುವುದು ಕೂಡ ಇದರಲ್ಲಿ ಅನುಕೂಲಕರವಾಗಿದೆ.