ಮ್ಯೂಚುವಲ್ಫಂಡ್ಗಳಲ್ಲಿ ವಿಳಂಬದ ವೆಚ್ಚ/ಸಂಚಯದ ಪರಿಣಾಮ

Video

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ದೀರ್ಘಕಾಲದವರೆಗೆ ನೀವು ಮ್ಯೂಚುವಲ್ಫಂಡ್ನಲ್ಲಿ ಹೂಡಿಕೆ ಮಾಡಿದಾಗ, ನೀವು ಗಳಿಸುವ ರಿಟರ್ನ್ನ ಮೇಲೆ ಸಂಚಯದ ಪರಿಣಾಮ ಉಂಟಾಗುತ್ತದೆ. ಆದರೆ, ಕೆಲವು ವರ್ಷಗಳವರೆಗೆ ಹೂಡಿಕೆ ಮಾಡಲು ವಿಳಂಬ ಮಾಡಿದರೆ, ಅದರಲ್ಲಿ ನಿಮಗೆ ನಷ್ಟವೂ ಉಂಟಾಗುತ್ತದೆ. ಈ ಸಂಚಯದ ಪರಿಣಾಮವು, ನೀವು ವಾಸ್ತವವಾಗಿ ಗಳಿಸುವುದು ಮತ್ತು ಕೆಲವು ವರ್ಷಗಳ ಮೊದಲೇ ನೀವು ಕ್ರೋಢೀಕರಿಸುವುದನ್ನು ಆರಂಭಿಸಿದ್ದರೆ ಗಳಿಸಬಹುದಾಗಿದ್ದರ ಮಧ್ಯೆ ವ್ಯತ್ಯಾಸವನ್ನು ಹೆಚ್ಚಿಸುತ್ತದೆ. ಇದನ್ನು ಇನ್ನೂ ಉತ್ತಮವಾಗಿ ಅರ್ಥ ಮಾಡಿಕೊಳ್ಳಲು mutualfundssahihai.com/kn/what-age-should-one-start-investing ನೋಡಿ.

ಸಂಚಯದ ಪರಿಣಾಮವು ದೀರ್ಘಕಾಲದಲ್ಲಿ ತನ್ನ ಜಾದೂ ತೋರಿಸುತ್ತದೆ. ಯಾಕೆಂದರೆ, ನೀವು ಹೆಚ್ಚು ಕಾಲದವರೆಗೆ ಹೂಡಿಕೆ ಮಾಡಿಟ್ಟರೆ, ನಿಮ್ಮ ಹಣಕ್ಕೆ ಸಂಚಯಗೊಳ್ಳಲು ಹೆಚ್ಚು ಸಮಯ ಸಿಗುತ್ತದೆ. ಸಂಚಯದ ಶಕ್ತಿಯು  ಭೂತಗನ್ನಡಿ ಇದ್ದ ಹಾಗೆ. ಈ ಭೂತಗನ್ನಡಿಯು ಕಾಲ ಸರಿದಂತೆ ದೊಡ್ಡದಾಗುತ್ತಾ ಸಾಗುತ್ತದೆ. ನಿಮ್ಮ ಹೂಡಿಕೆಯನ್ನು ನೀವು ತಡ ಮಾಡಿದರೆ, ಅದು SIP (ಎಸ್.ಐಪಿ) ಮೂಲಕವೇ ಆಗಿರಲಿ ಅಥವಾ ಸಗಟು ರೂಪದಲ್ಲೇ ಆಗಿರಲಿ ಹಾಗೂ ಹೆಚ್ಚು ಮೊತ್ತವನ್ನು ಹೂಡಿಕೆ ಮಾಡಿದರೂ, ನಿಮಗಿಂತ ಐದು ವರ್ಷಗಳ ಮೊದಲು ಹೂಡಿಕೆ ಆರಂಭಿಸಿದವರನ್ನು ನೀವು ಸರಿಗಟ್ಟಲಾಗದು. SIP (ಎಸ್.ಐಪಿ) ಆಗಿದ್ದರೆ, ನೀವು ಹೂಡಿಕೆ ಮಾಡಿದ್ದಕ್ಕಿಂತ ಅರ್ಧದಷ್ಟು ಕಡಿಮೆ ಮೊತ್ತವನ್ನು ಅವರು ಹೂಡಿಕೆ ಮಾಡಿದ್ದರೂ, ನಿಮ್ಮ ಹೂಡಿಕೆ ಹಿಂದೆ ಬಿದ್ದಿರುತ್ತದೆ. ಸಗಟು ಮೊತ್ತವೇ ಆಗಿದ್ದರೂ, ಕೆಲವೇ ವರ್ಷಗಳಷ್ಟು ವಿಳಂಬ ಮಾಡಿದರೆ, ನಿಮಗಿಂತ ಕೆಲವು ವರ್ಷ ಮೊದಲೇ ಸಗಟು ರೂಪದ ಹೂಡಿಕೆ ಮಾಡಿದವರಿಗಿಂತ ನಿಮ್ಮ ಸಂಚಿತ ಮೊತ್ತವು ಕಡಿಮೆ ಆಗಿರುತ್ತದೆ. ನಿಮ್ಮ ಹೂಡಿಕೆ ನಿರ್ಧಾರವನ್ನು ವಿಳಂಬ ಮಾಡಿದ್ದಕ್ಕಾಗಿ ನೀವು ತೆರುವ ದೊಡ್ಡ ಮೊತ್ತ ಇದಾಗಿರುತ್ತದೆ.
 

ನಿಮ್ಮ ಹೂಡಿಕೆ ಮೊತ್ತ ಸಣ್ಣದೇ ಆಗಿದ್ದರೂ ಮ್ಯೂಚುವಲ್ಫಂಡ್ನಲ್ಲಿ ನೀವು ಮೊದಲೇ ಹೂಡಿಕೆಯನ್ನು ಆರಂಭಿಸಿದರೆ, 10 ವರ್ಷಗಳಷ್ಟು ತಡವಾಗಿ ಹೂಡಿಕೆ ಆರಂಭಿಸುವುದಕ್ಕೆ ಹೋಲಿಸಿದರೆ ಹಲವು ಪಟ್ಟು ಹೆಚ್ಚು ಸಂಪತ್ತನ್ನು ನೀವು ಗಳಿಸಿರುತ್ತೀರಿ. ಇದು ಮೊಲ ಮತ್ತು ಆಮೆಯ ಕಥೆ ಇದ್ದ ಹಾಗೆ. ತಡವಾಗಿ ಹೆಚ್ಚು ಹೂಡಿಕೆ ಮಾಡುವುದರ ಬದಲಿಗೆ ಜೀವನದ ಆರಂಭದ ದಿನಗಳಲ್ಲೇ ನಿಧಾನವಾಗಿ ಮತ್ತು ಸುಸ್ಥಿರವಾಗಿ ಹೂಡಿಕೆ ಮಾಡುವುದರಿಂದ ನಿಮ್ಮ ಗುರಿಯನ್ನು ನೀವು ಆರಾಮದಾಯಕವಾಗಿ ತಲುಪಬಹುದು.
 

436
ನಾನು ಹೂಡಿಕೆ ಮಾಡಲು ಸಿದ್ಧ