ಲೋಡ್‌ಗಳು ಎಂದರೇನು?

ಲೋಡ್‌ಗಳು ಎಂದರೇನು?
ಮ್ಯೂಚುವಲ್ ಫಂಡ್‌ ಕ್ಯಾಲಕ್ಯುಲೇಟರ್‌ಗಳು

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ದೀರ್ಘ ದೂರದ ಪ್ರಯಾಣದಲ್ಲಿ ನೀವು ರಸ್ತೆ ಅಥವಾ ಸೇತುವೆಯನ್ನು ಪ್ರವೇಶಿಸಿದಾಗ ಮತ್ತು ಕೆಲವು ಬಾರಿ ನಿರ್ಗಮಿಸುವಾಗ ಟೋಲ್‌ ಪಾವತಿ ಮಾಡಬೇಕಾಗುತ್ತದೆ. ಬಹುತೇಕ ಸಂದರ್ಭಗಳಲ್ಲಿ, ನಿರ್ಮಾಣ ವೆಚ್ಚವನ್ನು ವಸೂಲಿ ಮಾಡಿಕೊಳ್ಳಲು ಕೆಲವು ವರ್ಷಗಳವರೆಗೆ ಮಾತ್ರ ಟೋಲ್‌ ಶುಲ್ಕವನ್ನು ವಿಧಿಸಲು ಟೋಲ್ ಬ್ರಿಜ್ ಕಂಪನಿಗೆ ಅನುಮತಿ ನೀಡಲಾಗುತ್ತದೆ. ಆ ಅವಧಿ ಮುಗಿದ ನಂತರ, ಕಂಪನಿಯು ಪ್ರಯಾಣಿಕರಿಗೆ ಯಾವುದೇ ಟೋಲ್‌ ವಿಧಿಸುವುದಿಲ್ಲ.

ಮ್ಯೂಚುವಲ್‌ ಫಂಡ್‌ನಲ್ಲಿ ಹೂಡಿಕೆ ಕೂಡ ಸ್ವಲ್ಪ ಮಟ್ಟಿನ ಲೋಡ್‌ ಅನ್ನು ಹೊಂದಿರುತ್ತವೆ. ಆದರೆ, ಅವುಗಳು ನೀವು ಈಗತಾನೆ ಓದಿದ ಟೋಲ್ ಉದಾಹರಣೆಗಿಂತ ವಿಭಿನ್ನವಾಗಿರುತ್ತವೆ. 2009ರ ವರೆಗೂ, ಮ್ಯೂಚುವಲ್‌ ಫಂಡ್‌ಗೆ ಪ್ರವೇಶಿಸುವಾಗಲೇ ಶುಲ್ಕ ವಿಧಿಸಲಾಗುತ್ತಿತ್ತು. ಆದರೆ ಈ ಶುಲ್ಕವನ್ನು ಈಗ ವಿಧಿಸಲಾಗುತ್ತಿಲ್ಲ. ಕೆಲವು ಸ್ಕೀಮ್‌ಗಳು ನಿರ್ಗಮಿಸುವಾಗ ಶುಲ್ಕ ವಿಧಿಸುತ್ತವೆ. ಅದರಲ್ಲೂ ಕೆಲವೇ ಸನ್ನಿವೇಶಗಳಲ್ಲಿ ಇದು ಅನ್ವಯವಾಗುತ್ತದೆ. ಇದನ್ನು “ಎಕ್ಸಿಟ್ ಲೋಡ್” ಎನ್ನಲಾಗುತ್ತದೆ.

ಬಹುತೇಕ ಸನ್ನಿವೇಶಗಳಲ್ಲಿ, ಎಕ್ಸಿಟ್ ಲೋಡ್ ವಿಧಿಸಿದರೂ, ಇದು ನಿರ್ದಿಷ್ಟ ಅವಧಿಯೊಳಗೆ ಎಕ್ಸಿಟ್ ಆಗುವುದಕ್ಕೆ ಮಾತ್ರ ಅನ್ವಯಿಸುತ್ತದೆ. ಈ ಅವಧಿಗಿಂತ ಹೆಚ್ಚಿನ ಅವಧಿಗೆ ನೀವು ಹೂಡಿಕೆ ಮಾಡಿಕೊಂಡಿದ್ದರೆ, ಎಕ್ಸಿಟ್ ಲೋಡ್ ಅನ್ವಯಿಸುವುದಿಲ್ಲ. ಇನ್ನೊಂದು ಮಾತಿನಲ್ಲಿ ಹೇಳುವುದಾದರೆ, ಬಹುತೇಕ ಸಂದರ್ಭಗಳಲ್ಲಿ ಸ್ಕೀಮ್‌ನಿಂದ ಬೇಗ ಹೊರಹೋಗುವುದನ್ನು ತಡೆಯಲು ಎಕ್ಸಿಟ್ ಲೋಡ್‌ ವಿಧಿಸಲಾಗುತ್ತದೆ. “ಎಕ್ಸಿಟ್ ಲೋಡ್‌”ಗೂ ಸಹ ಮ್ಯೂಚುವಲ್‌ ಫಂಡ್ ಅನ್ನು ನಿಯಂತ್ರಿಸುವ ಪ್ರಾಧಿಕಾರ ಸೆಬಿ ವಿಧಿಸಬಹುದಾದ ಗರಿಷ್ಠ ಎಕ್ಸಿಟ್‌ ಲೋಡ್‌ಗೆ ಒಂದು ಮಿತಿಯನ್ನು ಹಾಕಿದೆ.

440
ನಾನು ಹೂಡಿಕೆ ಮಾಡಲು ಸಿದ್ಧ