ಮೊದಲೇ ಹಿಂಪಡೆಯಲು ನಿರ್ಧರಿಸಿದರೆ ದಂಡ ಇರುತ್ತದೆಯೇ?

ಮೊದಲೇ ಹಿಂಪಡೆಯಲು ನಿರ್ಧರಿಸಿದರೆ ದಂಡ ಇರುತ್ತದೆಯೇ?

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ಪ್ರತಿ ಓಪನ್ ಎಂಡೆಡ್‌ ಸ್ಕೀಮ್‌ ಲಿಕ್ವಿಡಿಟಿಯನ್ನು ಒದಗಿಸುತ್ತಿದ್ದು, ಸಂಪೂರ್ಣ ಸ್ವಾತಂತ್ರ್ಯವನ್ನೂ ನೀಡುತ್ತದೆ. ಅಂದರೆ ರಿಡೆಂಪ್ಷನ್‌ನ ಸಮಯ ಅಥವಾ ಮೊತ್ತದ ಮೇಲೆ ಯಾವುದೇ ನಿರ್ಬಂಧ ವಿಧಿಸುವುದಿಲ್ಲ. ಆದಾಗ್ಯೂ, ಕೆಲವೇ ಸ್ಕೀಮ್‌ಗಳು ಎಕ್ಸಿಟ್ ಲೋಡ್ ಅನ್ನು ವಿಧಿಸಬಹುದು.

ಉದಾಹರಣೆಗೆ, 1 ವರ್ಷದೊಳಗೆ ರಿಡೀಮ್ ಮಾಡಿದರೆ 1% ಎಕ್ಸಿಟ್ ಲೋಡ್ ಅನ್ನು ಕೆಲವು ಸ್ಕೀಮ್‌ ನಿರ್ದಿಷ್ಟಪಡಿಸುತ್ತವೆ. ಅಂದರೆ, 2016 ಏಪ್ರಿಲ್‌ 1 ಕ್ಕೆ ಒಬ್ಬ ಹೂಡಿಕೆದಾರ ಹೂಡಿಕೆ ಮಾಡಿದರೆ 2017 ಮಾರ್ಚ್‌ 31 ರೊಳಗೆ ಮಾಡುವ ಯಾವುದೇ ರಿಡೆಂಪ್ಷನ್‌ಗೆ ಎನ್‌ಎವಿ ಮೇಲೆ ಶೇ. 1 ರಷ್ಟು ದಂಡ ವಿಧಿಸಲಾಗುತ್ತದೆ. 2017 ಫೆಬ್ರವರಿ 1 ರಂದು ಹೂಡಿಕೆದಾರರು ಎನ್‌ಎವಿ ರೂ.200 ರಲ್ಲಿ ರಿಡೀಮ್ ಮಾಡಿದರೆ, ಆಗ ರೂ. 2 ಕಡಿತಗೊಳಿಸಲಾಗುತ್ತದೆ ಮತ್ತು ಹೂಡಿಕೆದಾರರಿಗೆ ಪ್ರತಿ ಯೂನಿಟ್‌ಗೆ ರೂ. 198 ಅನ್ನು ನೀಡಲಾಗುತ್ತದೆ.

ಎಕ್ಸಿಟ್ ಲೋಡ್ ಕುರಿತ ಎಲ್ಲ ಮಾಹಿತಿಯನ್ನೂ ಸ್ಕೀಮ್ ಸಂಬಂಧಿ ದಾಖಲೆಗಳಲ್ಲಿ ನಮೂದಿಸಲಾಗಿರುತ್ತದೆ. ಉದಾಹರಣೆಗೆ, ಫಂಡ್ ಫ್ಯಾಕ್ಟ್‌ ಶೀಟ್‌ ಅಥವಾ ಪ್ರಮುಖ ಮಾಹಿತಿ ಮೆಮೊರಾಂಡಮ್‌ ಇಂತಹ ಮಾಹಿತಿಯನ್ನು ಒಳಗೊಂಡಿರಬಹುದು.

440
ನಾನು ಹೂಡಿಕೆ ಮಾಡಲು ಸಿದ್ಧ