ಹಣದುಬ್ಬರ ಎಂದರೇನು?

Video

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ಸರಳವಾಗಿ ಹೇಳುವುದಾದರೆ, ಹಣದುಬ್ಬರವು ಲಭ್ಯವಿರುವ ಹಣಕ್ಕೆ ಸಂಬಂಧಿಸಿದಂತೆ ಕಾಲಾನಂತರದಲ್ಲಿ ಆಗುವ  ಬೆಲೆಯ ಹೆಚ್ಚಳವಾಗಿದೆ. ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ, ಇಂದು ನೀವು ಏನನ್ನೋ ಖರೀದಿ ಮಾಡಲು ಕಡಿಮೆ ಹಣ ಸಾಕಾಗುತ್ತದೆ ಎಂದಾದರೆ, ಹಲವು ವರ್ಷಗಳ ಹಿಂದೆ ಅದಕ್ಕೂ ಕಡಿಮೆ ಹಣ ಸಾಕಾಗುತ್ತಿತ್ತು. 

ಇದನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಲು ಒಂದು ಉದಾಹರಣೆಯನ್ನು ನೋಡೋಣ. ಇಂದು ನೀವು ಗ್ರಿಲ್ಡ್‌ ಸ್ಯಾಂಡ್‌ವಿಚ್‌ಅನ್ನು ರೂ. 100 ರಲ್ಲಿ ಖರೀದಿ ಮಾಡುತ್ತೀರಿ ಎಂದು ಭಾವಿಸೋಣ. ವಾರ್ಷಿಕ ಹಣದುಬ್ಬರ 10% ಆಗಿದೆ. ಮುಂದಿನ ವರ್ಷ ನಿಮಗೆ ಇದೇ ಸ್ಯಾಂಡ್‌ವಿಚ್‌ಖರೀದಿ ಮಾಡಲು 110 ರೂ. ಬೇಕಾಗುತ್ತದೆ. ಹಣದುಬ್ಬರದ ದರದಲ್ಲೇ ನಿಮ್ಮ ಆದಾಯವೂ ಹೆಚ್ಚಳವಾಗದಿದ್ದರೆ, ನೀವು ಸ್ಯಾಂಡ್‌ವಿಚ್‌ಅಥವಾ ಇತರ ಉತ್ಪನ್ನವನ್ನು ಖರೀದಿ ಮಾಡಲು ಸಾಧ್ಯವಾಗುವುದಿಲ್ಲ ಅಲ್ಲವೇ? 

ಹೂಡಿಕೆದಾರರಿಗೆ ತಮ್ಮ ಪ್ರಸ್ತುತ / ಚಾಲ್ತಿಯ ಗುಣಮಟ್ಟದಂತೆಯೆ ಜೀವನವನ್ನು ನಿರ್ವಹಿಸಲು ಅಗತ್ಯವಿರುವಂತೆ ಹೂಡಿಕೆಯ ಮೇಲೆ ಎಷ್ಟು ರಿಟರ್ನ್ (%) ಬರಬೇಕಾಗುತ್ತದೆ ಎಂಬುದನ್ನೂ ಹಣದುಬ್ಬರವು ಹೇಳುತ್ತದೆ. ಉದಾಹರಣೆಗೆ, ‘ಎಕ್ಸ್‌’ನಲ್ಲಿ ಮಾಡಿದ ಹೂಡಿಕೆಗೆ ಶೇ. 4 ರಿಟರ್ನ್‌ಬಂದರೆ, ಹಣದುಬ್ಬರವು ಶೇ. 5 ಆಗಿದೆ ಎಂದು ಭಾವಿಸೋಣ. ಆಗ ನಿಮಗೆ ಲಭ್ಯವಾದ ವಾಸ್ತವ ರಿಟರ್ನ್ ಶೇ. -1 ಆಗಿರುತ್ತದೆ (ಶೇ. 5 - ಶೇ. 4).

ಹಣದುಬ್ಬರವನ್ನು ಮೀರಿ ರಿಟರ್ನ್ಸ್‌ನೀಡುವ ಸಾಧ್ಯತೆಯನ್ನು ಮ್ಯೂಚುವಲ್‌ಫಂಡ್‌ನಲ್ಲಿನ ಹೂಡಿಕೆಗಳು ನಿಮಗೆ ನೀಡುತ್ತವೆ! ಸರಿಯಾದ ವಿಧದ ಮ್ಯೂಚುವಲ್‌ ಫಂಡ್‌ಗಳಲ್ಲಿ ಹೂಡಿಕೆ ಮಾಡುವ ಮೂಲಕ ನೀವು ದೀರ್ಘಕಾಲದಲ್ಲಿ ನಿಮ್ಮ ಖರೀದಿ ಸಾಮರ್ಥ್ಯವನ್ನು ರಕ್ಷಿಸುವ ಗುರಿಯನ್ನು ಹಾಕಿಕೊಳ್ಳಬಹುದು.

436
ನಾನು ಹೂಡಿಕೆ ಮಾಡಲು ಸಿದ್ಧ