Skip to main content

ವಿಳಂಬ ವೆಚ್ಚ (ಕಾಸ್ಟ್‌ ಆಫ್ ಡಿಲೇ) ಕ್ಯಾಲ್ಕುಲೇಟರ್

ನೀವು ಹೂಡಿಕೆಯನ್ನು ವಿಳಂಬ ಮಾಡಲು ಯೋಜಿಸುತ್ತಿದ್ದೀರಾ? ನಿಮ್ಮ ಸಂಪತ್ತು ಸೃಷ್ಟಿಯ ಮೇಲೆ ವಿಳಂಬದ ಪರಿಣಾಮವನ್ನು ಪರಿಶೀಲಿಸಿ.

%
ವರ್ಷಗಳು

ವಿಳಂಬದ ವೆಚ್ಚ1.27 ಲಕ್ಷ

ಹೂಡಿಕೆ ಮಾಡಿದ ಒಟ್ಟು ವರ್ಷಗಳು

ಇಂದೇ ಹೂಡಿಕೆ ಮಾಡಿ

10 ವರ್ಷಗಳು

ತಡವಾಗಿ ಹೂಡಿಕೆ ಮಾಡಿ

5 ವರ್ಷಗಳು

ಹೂಡಿಕೆ ಮಾಡಿದ ಒಟ್ಟು ಮೊತ್ತ

ಇಂದೇ ಹೂಡಿಕೆ ಮಾಡಿ

1.20 ಲಕ್ಷ

ತಡವಾಗಿ ಹೂಡಿಕೆ ಮಾಡಿ

60,000

ನಿಮ್ಮ ಹೂಡಿಕೆಯ ಅಂತಿಮ ಮೌಲ್ಯ

ಇಂದೇ ಹೂಡಿಕೆ ಮಾಡಿ

2.05 ಲಕ್ಷ

ತಡವಾಗಿ ಹೂಡಿಕೆ ಮಾಡಿ

77,437.07

ಸಂಪತ್ತು ಸೃಷ್ಟಿ

ಇಂದೇ ಹೂಡಿಕೆ ಮಾಡಿ

84,844.98

ತಡವಾಗಿ ಹೂಡಿಕೆ ಮಾಡಿ

17,437.07

ಹಕ್ಕು ನಿರಾಕರಣೆ

  1. ಹಿಂದಿನ ಕಾರ್ಯಕ್ಷಮತೆಯು ಭವಿಷ್ಯದಲ್ಲಿ ಉಳಿಯಬಹುದು ಅಥವಾ ಇಲ್ಲದಿರಬಹುದು ಮತ್ತು ಯಾವುದೇ ಭವಿಷ್ಯದ ಆದಾಯದ ಭರವಸೆ ಅಲ್ಲ.
  2. ದಯವಿಟ್ಟು ಗಮನಿಸಿ, ಈ ಕ್ಯಾಲ್‌ಕ್ಯುಲೇಟರ್‌ಗಳು ಚಿತ್ರಣದ ಉದ್ದೇಶಕ್ಕೆ ಮಾತ್ರ ಮತ್ತು ನಿಜವಾದ ರಿಟರ್ನ್ಸ್‌ ಅನ್ನು ಪ್ರತಿನಿಧಿಸುವುದಿಲ್ಲ.
  3. ಮ್ಯೂಚುವಲ್ ಫಂಡ್‌ಗಳಿಗೆ ಫಿಕ್ಸೆಡ್‌ ರಿಟರ್ನ್ ದರ ಇರುವುದಿಲ್ಲ ಮತ್ತು ರಿಟರ್ನ್‌ ದರವನ್ನು ಊಹಿಸುವುದು ಸಾಧ್ಯವಿಲ್ಲ. *ಇಲ್ಲಿ ಪ್ರದರ್ಶಿಸಿದ ಮೌಲ್ಯದ ಮೇಲೆ ಹಣದುಬ್ಬರದ ಪರಿಣಾಮವನ್ನು ಇದು ಪರಿಗಣಿಸಿರುವುದಿಲ್ಲ.
  4. ಈ ಲೆಕ್ಕಾಚಾರಗಳು ಕೇವಲ ಸಾಂದರ್ಭಿಕವಾಗಿವೆ ಮತ್ತು ನಿಜವಾದ ವಾಪಸಾತಿಗಳನ್ನು ಪ್ರತಿನಿಧಿಸುವುದಿಲ್ಲ.
  5. ಮ್ಯೂಚುವಲ್‌ ಫಂಡ್‌ಗಳು ಖಚಿತ ವಾಪಸಾತಿ ದರವನ್ನು ಹೊಂದಿರುವುದಿಲ್ಲ ಮತ್ತು ವಾಪಸಾತಿ ದರವನ್ನು ಊಹಿಸುವುದು ಸಾಧ್ಯವಿಲ್ಲ.
  6. ಮ್ಯೂಚುಯಲ್ ಫಂಡ್ ಹೂಡಿಕೆಗಳು ಮಾರುಕಟ್ಟೆ ಅಪಾಯಗಳಿಗೆ ಒಳಪಟ್ಟಿರುತ್ತವೆ, ಎಲ್ಲಾ ಯೋಜನೆ ಸಂಬಂಧಿತ ದಾಖಲಾತಿಗಳನ್ನು ಜಾಗ್ರತೆಯಿಂದ ಓದಿರಿ.

ಇತರ ಕ್ಯಾಲ್‌ಕ್ಯುಲೇಟರ್‌ಗಳು

goal sip calculator
ಗುರಿ (ಗೋಲ್) SIP ಕ್ಯಾಲ್ಕುಲೇಟರ್

ನಿಮ್ಮ ಗುರಿಯನ್ನು ತಲುಪಲು ಅಗತ್ಯವಿರುವ ಮಾಸಿಕ SIP ಹೂಡಿಕೆಯನ್ನು ಕಂಡುಹಿಡಿಯಿರಿ.

ಈಗಲೇ ಲೆಕ್ಕ ಹಾಕಿ
smart goal calculator
ಸ್ಮಾರ್ಟ್‌ ಗೋಲ್‌ ಕ್ಯಾಲ್ಕುಲೇಟರ್

ನಿಮ್ಮ ಪ್ರಸ್ತುತ ಹೂಡಿಕೆಗಳನ್ನು ಪರಿಗಣಿಸಿ, ಅಗತ್ಯವಿರುವ SIP ಅಥವಾ ಒಟ್ಟು ಮೊತ್ತವನ್ನು ಲೆಕ್ಕಹಾಕುವ ಮೂಲಕ ನಿಮ್ಮ ಹಣಕಾಸಿನ ಗುರಿಗಳನ್ನು ಯೋಜಿಸಿ.

ಈಗಲೇ ಲೆಕ್ಕ ಹಾಕಿ
inflation calculator
ಇನ್ಫ್ಲೇಶನ್ (ಹಣದುಬ್ಬರ) ಕ್ಯಾಲ್ಕುಲೇಟರ್

ನಿಮ್ಮ ಪ್ರಸ್ತುತ ವೆಚ್ಚಗಳು ಮತ್ತು ಭವಿಷ್ಯದ ಗುರಿಗಳ ಮೇಲೆ ಹಣದುಬ್ಬರದ ಪರಿಣಾಮವನ್ನು ಲೆಕ್ಕಹಾಕಿ.

ಈಗಲೇ ಲೆಕ್ಕ ಹಾಕಿ
Retirement Planning Calculator
ರಿಟೈರ್‌ಮೆಂಟ್ ಪ್ಲಾನಿಂಗ್ ಕ್ಯಾಲ್ಕುಲೇಟರ್

ನಿಮ್ಮ ವೆಚ್ಚಗಳು ಮತ್ತು ಅದನ್ನು ಸಾಧಿಸಲು ಅಗತ್ಯವಿರುವ ಮಾಸಿಕ ಹೂಡಿಕೆಯ ಆಧಾರದ ಮೇಲೆ ನಿಮ್ಮ ನಿವೃತ್ತಿ ಕಾರ್ಪಸ್ ಅನ್ನು ಅಂದಾಜು ಮಾಡಿ.

ಈಗಲೇ ಲೆಕ್ಕ ಹಾಕಿ

ಕ್ಯಾಲ್ಕುಲೇಟರ್‌ಗಳನ್ನು ಬಳಸುವುದರ ಪ್ರಯೋಜನಗಳು

finance-planning
ಪ್ರಯಾಣದಲ್ಲಿರುವಾಗ ಹಣಕಾಸು ಯೋಜನೆ
saves-time
ಸಮಯವನ್ನು ಉಳಿಸುತ್ತದೆ
easy-to-use
ಬಳಸಲು ಸುಲಭ
helps-make-informed-decisions
ತಿಳಿವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ

ಕಾಸ್ಟ್ ಆಫ್‌ ಡಿಲೇ (ವಿಳಂಬ ವೆಚ್ಚ) ಎಂದರೇನು?

ಕಾಸ್ಟ್ ಆಫ್‌ ಡಿಲೇ ಎಂಬುದು ಹಲವು ವರ್ಷಗಳವರೆಗೆ ಹೂಡಿಕೆಯನ್ನು ಮುಂದೂಡಿದರೆ ಬೇಕಾಗುವ ಹಣದ ಮೊತ್ತವನ್ನು ಸೂಚಿಸುತ್ತದೆ.

ವಿಳಂಬ ವೆಚ್ಚ (ಕಾಸ್ಟ್‌ ಆಫ್ ಡಿಲೇ) ಕ್ಯಾಲ್‌ಕ್ಯುಲೇಟರ್‌ ಎಂದರೇನು?

ವಿಳಂಬ ವೆಚ್ಚ (ಕಾಸ್ಟ್‌ ಆಫ್ ಡಿಲೇ) ಕ್ಯಾಲ್‌ಕ್ಯುಲೇಟರ್‌ ನಿರ್ದಿಷ್ಟ ಅವಧಿಯವರೆಗೆ ನಿಮ್ಮ ಸಿಸ್ಟಮ್ಯಾಟಿಕ್ ಹೂಡಿಕೆ ವಿಳಂಬ ಮಾಡುವುದರಿಂದ ಉಂಟಾಗುವ ಪರಿಣಾಮವನ್ನು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ನಿಮ್ಮ ಹೂಡಿಕೆ ಆರಂಭಿಸುವುದರಲ್ಲಿ ನೀವು ವಿಳಂಬ ಮಾಡಿದಾಗ ಬೇಕಿರುವ ಹೆಚ್ಚುವರಿ ಹಣವನ್ನು ಕಂಡುಕೊಳ್ಳಲು ಇದು ಸಹಾಯ ಮಾಡುತ್ತದೆ.
ಅತ್ಯಂತ ಸಣ್ಣ ವಿಳಂಬ ಕೂಡಾ ನಿಮ್ಮ ದೀರ್ಘಕಾಲೀನ ಹೂಡಿಕೆಗಳ ಮೇಲೆ ಅಪಾರ ಪರಿಣಾಮವನ್ನು ಉಂಟು ಮಾಡಬಹುದು ಎಂಬುದನ್ನು ಇದು ತೋರಿಸುತ್ತದೆ. ಹೀಗಾಗಿ, ತಕ್ಷಣವೇ ಹೂಡಿಕೆ ಆರಂಭಿಸುವುದು ಆರ್ಥಿಕ ಯಶಸ್ಸಿಗೆ ಅತ್ಯಂತ ಮುಖ್ಯವಾಗಿರುತ್ತದೆ.

ಹೂಡಿಕೆ ವಿಳಂಬಕ್ಕೆ ಉಂಟಾಗುವ ಕಾರಣವೇನು?

ಹೂಡಿಕೆಯನ್ನು ಮಾಡುವಲ್ಲಿ ವಿಳಂಬಕ್ಕೆ ಕಾರಣವಾಗುವ ಪ್ರಮುಖ ಅಂಶಗಳೆಂದರೆ:

  • ಅಸರ್ಪಕ ಹಣಕಾಸು ತಿಳಿವಳಿಕೆ
  • ಸ್ಪಷ್ಟ ಗುರಿಗಳು ಮತ್ತು ಯೋಜನೆಯ ಕೊರತೆ
  • ಮುಂದೂಡುವುದು
  • ಕೆಟ್ಟ ಬಜೆಟ್ ಹವ್ಯಾಸಗಳು
  • ರಿಸ್ಕ್‌ಗಳನ್ನು ತೆಗೆದುಕೊಳ್ಳುವುದಕ್ಕೆ ಹೆದರುವುದು

ಹೂಡಿಕೆಯನ್ನು ವಿಳಂಬ ಮಾಡುವುದರಿಂದ ಗಮನಾರ್ಹ ಪರಿಣಾಮ ಉಂಟಾಗಬಹುದು:

  • ಸಮಯ ಹಾಳು ಮಾಡಿಕೊಂಡಿದ್ದರಿಂದ ದೀರ್ಘಕಾಲೀನ ಗುರಿಗಳಿಗೆ ಸೂಕ್ತ ಹಣಕಾಸು ಹೊಂದಿಲ್ಲದಂತಾಗುವುದು
  • ನಿಮ್ಮ ಹಣದ ಖರೀದಿ ಶಕ್ತಿ ಕುಂದುವುದು
  • ಸಂಚಯದ ಶಕ್ತಿಯನ್ನು ಕಳೆದುಕೊಳ್ಳುವುದು

ವಿಳಂಬ ವೆಚ್ಚ (ಕಾಸ್ಟ್‌ ಆಫ್ ಡಿಲೇ) ಕ್ಯಾಲ್‌ಕ್ಯುಲೇಟರ್‌ ಅನ್ನು ನೀವು ಯಾವಾಗ ಬಳಸಬೇಕು?

ಹೂಡಿಕೆಯನ್ನು ಮುಂದೂಡುವ ಬಗ್ಗೆ ಯೋಚಿಸುತ್ತಿರುವಾಗ ವಿಳಂಬ ವೆಚ್ಚ (ಕಾಸ್ಟ್‌ ಆಫ್ ಡಿಲೇ) ಕ್ಯಾಲ್‌ಕ್ಯುಲೇಟರ್‌ ಬಳಸಿ. ವಿಳಂಬದಿಂದಾಗಿ ಅಗತ್ಯ ಹೂಡಿಕೆ ಮೊತ್ತದಲ್ಲಿ ಇರುವ ವ್ಯತ್ಯಾಸವನ್ನು ಇದು ವಿಶ್ಲೇಷಿಸಲು ಸಹಾಯ ಮಾಡುತ್ತದೆ. ಅಲ್ಲದೆ, ತಕ್ಷಣ ಹೂಡಿಕೆ ಮಾಡುವುದು ಮತ್ತು ತಡವಾಗಿ ಹೂಡಿಕೆ ಮಾಡುವ ಆಯ್ಕೆಗಳನ್ನು ಹೋಲಿಸಿ ನೋಡುವುದು ಮತ್ತು ವಾಸ್ತವಿಕ ಅಂಕಿ ಸಂಖ್ಯೆಗಳನ್ನು ಆಧರಿಸಿ ಸ್ಮಾರ್ಟ್ ಆದ ನಿರ್ಧಾರಗಳನ್ನು ಮಾಡಲು ನೆರವಾಗುತ್ತದೆ.

ವಿಳಂಬ ವೆಚ್ಚ (ಕಾಸ್ಟ್‌ ಆಫ್ ಡಿಲೇ) ಕ್ಯಾಲ್‌ಕ್ಯುಲೇಟರ್‌ ಬಳಕೆಯ ಪ್ರಯೋಜನಗಳು

  • ಸಕಾಲಿಕ ಅವಕಾಶಗಳನ್ನು ಮೌಲ್ಯಮಾಪನ ಮಾಡಿ: ಸಮಯ ಮಿತಿ ಇರುವ ಹೂಡಿಕೆ ಆಯ್ಕೆಗಳಲ್ಲಿ ತಕ್ಷಣವೇ ಕ್ರಮ ತೆಗೆದುಕೊಳ್ಳುವುದು ಆರ್ಥಿಕವಾಗಿ ಪ್ರಯೋಜನಕಾರಿಯೇ ಅಥವಾ ವಿಳಂಬ ಮಾಡುವುದು ಉತ್ತಮವೇ ಎಂದು ನಿರ್ಧರಿಸುವುದು.
  • ದೀರ್ಘಕಾಲೀನ ಬೆಳವಣಿಗೆಯನ್ನು ವಿಶ್ಲೇಷಿಸುವುದು: ರೆಗ್ಯುಲರ್ ಹೂಡಿಕೆಯನ್ನು ಮುಂದೂಡಿದರೆ ಉಂಟಾಗುವ ಬೆಳವಣಿಗೆಯ ಸಂಭಾವ್ಯ ನಷ್ಟ ಮತ್ತು ಸಂಚಯದ ಪರಿಣಾಮವನ್ನು ನೋಡಿ.
  • ಹೂಡಿಕೆ ಆಯ್ಕೆಗಳ ಹೋಲಿಕೆ ಮಾಡಿ: ವಿವಿಧ ಕಾಲಾವಧಿ ಅಥವಾ ಸಂಭಾವ್ಯ ರಿಟರ್ನ್‌ಗಳೊಂದಿಗೆ ವಿವಿಧ ಆಯ್ಕೆಗಳಲ್ಲಿ ಹೂಡಿಕೆ ವಿಳಂಬ ಮಾಡುವುದರ ವೆಚ್ಚವನ್ನು ಹೋಲಿಕೆ ಮಾಡಿ.

ವಿಳಂಬ ವೆಚ್ಚ (ಕಾಸ್ಟ್‌ ಆಫ್ ಡಿಲೇ) ಕ್ಯಾಲ್‌ಕ್ಯುಲೇಟರ್‌ ಹೇಗೆ ಕೆಲಸ ಮಾಡುತ್ತದೆ?

ಈ ಕ್ಯಾಲ್‌ಕ್ಯುಲೇಟರ್‌ ಪೂರ್ವ ನಿಗದಿತ ಫಾರ್ಮುಲಾ ಆಧರಿಸಿ ಕೆಲಸ ಮಾಡುತ್ತದೆ. ಆದರೆ, ಇದು ಮಾರುಕಟ್ಟೆಯಲ್ಲಿ ಏರಿಳಿತ ಅಥವಾ ರಿಟರ್ನ್ಸ್‌ ಮೇಲೆ ಬಾಹ್ಯ ಪರಿಣಾಮವನ್ನು ಪರಿಗಣಿಸುವುದಿಲ್ಲ.

ಆಗಾಗ್ಗೆ ಕೇಳಿದ ಪ್ರಶ್ನೆಗಳು

ಹೂಡಿಕೆಯನ್ನು ವಿಳಂಬ ಮಾಡುವುದರಿಂದ ಉಂಟಾಗುವ ಪರಿಣಾಮವನ್ನು ಚಿತ್ರಿಸುವ ಮೂಲಕ ಮಾಹಿತಿಯುಕ್ತ ನಿರ್ಧಾರಗಳನ್ನು ಮಾಡಲು ಹೂಡಿಕೆ ವಿಳಂಬ ಕ್ಯಾಲ್‌ಕ್ಯುಲೇಟರ್‌ ನೆರವಾಗುತ್ತದೆ. ಹೂಡಿಕೆ ಆರಂಭಿಸಲು ಸೂಕ್ತ ಸಮಯವನ್ನು ನಿರ್ಧರಿಸಲು ಮತ್ತು ನಿಮ್ಮ ಹಣಕಾಸಿನ ಗುರಿಗಳ ಕಡೆಗೆ ಕೆಲಸ ಮಾಡಲು ಇದು ಸಹಾಯ ಮಾಡುತ್ತದೆ.