ಫಂಡ್‌ ಮ್ಯಾನೇಜರುಗಳು ಅಗತ್ಯವೇ?

ಫಂಡ್‌ ಮ್ಯಾನೇಜರುಗಳು ಅಗತ್ಯವೇ? zoom-icon

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ಇದಕ್ಕೆ ಉತ್ತರ ಒಂದು ದೊಡ್ಡ ಧ್ವನಿಯ ಮತ್ತು ಗಟ್ಟಿಯಾದ ಹೌದು ಎಂಬುದು! ಹಣ ನಿರ್ವಹಣೆ / ಹೂಡಿಕೆ ಮಾಡುವಿಕೆಯಲ್ಲಿ ಅನುಭವವು ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ. ಉತ್ತಮ ಪರ್ಫಾರ್ಮೆನ್ಸ್ ಅನ್ನು ಜನರೇಟ್‌ ಮಾಡಲು ಅನುಭವವು ಅತ್ಯಂತ ಅಗತ್ಯ. ಅನುಭವ ಹೆಚ್ಚಿದಷ್ಟೂ ಲಾಭಕರ ಹೂಡಿಕೆ ನಿರ್ಧಾರ ಮಾಡುವ ಸಾಧ್ಯತೆ ಹೆಚ್ಚಿರುತ್ತದೆ.

ಆಪರೇಶನ್‌ ಥಿಯೇಟರ್‌ನಲ್ಲಿ ಒಬ್ಬ ಸರ್ಜನ್‌ ಹೇಗಿರುತ್ತಾರೆಯೋ ಹಾಗೆಯೇ ಫಂಡ್‌ ಮ್ಯಾನೇಜರ್‌ ಕೂಡಾ ಕೆಲಸ ಮಾಡುತ್ತಾರೆ. ಅತ್ಯಂತ ಪ್ರಮುಖ ಆಪರೇಶನ್‌ ಮಾಡುವುದು ಸರ್ಜನ್‌ ಆದರೂ ಅವರಿಗೆ ಅಸಿಸ್ಟೆಂಟ್ ಸರ್ಜನ್‌ಗಳು, ಅನಾಸ್ಥೆಟಿಸ್ಟ್‌ಗಳು, ನರ್ಸ್‌ಗಳು ಮತ್ತು ಇತರ ಸಿಬ್ಬಂದಿ ಸಹಾಯ ಮಾಡುತ್ತಾರೆ. ಇದೇ ರೀತಿ, ಫಂಡ್ ಮ್ಯಾನೇಜರ್‌ಗೆ ಸಂಶೋಧನೆ ತಂಡ, ಜ್ಯೂನಿಯರ್ ಫಂಡ್ ಮ್ಯಾನೇಜರ್‌ಗಳು ಮತ್ತು ಒಂದು ಕಾರ್ಯನಿರ್ವಹಣೆ ತಂಡ ಸಹಾಯ ಮಾಡುತ್ತದೆ. ಯಶಸ್ವಿ ಆಪರೇಶನ್ ಮಾಡಲು ಸುಧಾರಿತ ಸಲಕರಣೆಗಳನ್ನು ಸರ್ಜನ್‌ ಹೊಂದಿರುವಂತೆಯೇ ಫಂಡ್ ಮ್ಯಾನೇಜರ್‌ಗೆ ಎಲ್ಲ ಇತ್ತೀಚಿನ ಮಾಹಿತಿ, ವರದಿಗಳು ಮತ್ತು ವಿಶ್ಲೇಷಣೆಯ ಬಲ ಇರುತ್ತದೆ.

ಅನುಭವಿ ಫಂಡ್ ಮ್ಯಾನೇಜರ್‌ ಹಲವು ಆರ್ಥಿಕ ಆವರ್ತನಗಳು, ವ್ಯಾಪಾರ ಬೆಳವಣಿಗೆಗಳು, ರಾಜಕೀಯ ಮತ್ತು ಪಾಲಿಸಿ ಬದಲಾವಣೆಗಳನ್ನು ನೋಡಿರುತ್ತಾರೆ. ಇಂತಹ ವಿಷಯಗಳು ಹೂಡಿಕೆಯ ಪರ್ಫಾರ್ಮೆನ್ಸ್‌ನ ಮೇಲೆ ಪರಿಣಾಮ ಬೀರುತ್ತವೆ. ಇಂತಹ ವಿಷಯಗಳು ಸಾಮಾನ್ಯ ಹೂಡಿಕೆದಾರರ ಗ್ರಹಿಕೆಗೆ ಹೊರತಾಗಿರುವುದರಿಂದ, ಫಂಡ್ ಮ್ಯಾನೇಜರ್ ತಮ್ಮ ಪರಿಣತಿ ಮತ್ತು ಸಾಮರ್ಥ್ಯವನ್ನು ಮಾತ್ರವಲ್ಲದೇ ಅವರಿಗೆ ಪ್ರವೇಶಾವಕಾಶವಿರುವ ಮಾಹಿತಿ ಮತ್ತು ದತ್ತಾಂಶದಿಂದ ದೊರೆಯುವ ಸಮಗ್ರ ಬುದ್ಧಿವಂತಿಕೆಯನ್ನು ತರುತ್ತಾರೆ.

436
ನಾನು ಹೂಡಿಕೆ ಮಾಡಲು ಸಿದ್ಧ