ನನ್ನ ಹೂಡಿಕೆಯ ದಾಖಲೆಯನ್ನು ಯಾರು ಇಟ್ಟುಕೊಳ್ಳುತ್ತಾರೆ?

ನನ್ನ ಹೂಡಿಕೆಯ ದಾಖಲೆಯನ್ನು ಯಾರು ಇಟ್ಟುಕೊಳ್ಳುತ್ತಾರೆ? zoom-icon

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ಭಾರತದಲ್ಲಿನ ಎಲ್ಲ ಮ್ಯೂಚುವಲ್‌ ಫಂಡ್‌ಗಳನ್ನು ಭಾರತೀಯ ಷೇರು ವಿನಿಮಯ ಮಂಡಳಿ (ಸೆಬಿ) ನಿಯಂತ್ರಿಸುತ್ತದೆ. ಸ್ವತ್ತು ನಿರ್ವಹಣೆ ಕಂಪನಿಗಳ (ಎಎಂಸಿ)ಮತ್ತು ಕಸ್ಟಾಡಿಯನ್‌ಗಳ ಪಾತ್ರ ಮತ್ತು ಜವಾಬ್ದಾರಿಗಳನ್ನು ಮ್ಯೂಚುವಲ್‌ ಫಂಡ್‌ ನಿಯಮಗಳು ಸ್ಪಷ್ಟವಾಗಿ ವಿವರಿಸಿವೆ. ಹೂಡಿಕೆ ಮಾಡುವುದಕ್ಕಿಂತ ಮೊದಲು ಪರಿಣಾಮಕಾರಿಯಾದ ಕೆವೈಸಿ ಪ್ರಕ್ರಿಯೆಯನ್ನು ಪ್ರತಿ ಹೂಡಿಕೆದಾರರು ಪೂರೈಸಬೇಕಿರುತ್ತದೆ ಎಂದು ನೆನಪಿಟ್ಟುಕೊಳ್ಳಬೇಕು. ಹೀಗಾಗಿ, ಊರ್ಜಿತ ಪ್ಯಾನ್‌ ಕಾರ್ಡ್‌ ಹೊಂದಿರುವ ವಿಶ್ವಾಸಾರ್ಹ ಹೂಡಿಕೆದಾರರು ಮಾತ್ರ ಮ್ಯೂಚುವಲ್‌ ಫಂಡ್‌ ಸ್ಕೀಮ್‌ಗಳಲ್ಲಿ ಹೂಡಿಕೆ ಮಾಡಬಹುದು. ಇಂತಹ ಹೂಡಿಕೆದಾರರು ಬ್ಯಾಂಕ್‌ ವಿವರಗಳನ್ನೂ ನೀಡುತ್ತಾರೆ. ಹೀಗಾಗಿ ಎಲ್ಲ ರಿಡೆಂಪ್ಷನ್‌ ಪ್ರಕ್ರಿಯೆಗಳಲ್ಲಿ ಹೂಡಿಕೆದಾರರ ಸ್ವಂತ ಖಾತೆಗೆ ನೇರವಾಗಿ ಕ್ರೆಡಿಟ್ ಮಾಡಲಾಗುತ್ತದೆ.

ಕೆಲವು ಸ್ವತಂತ್ರ ವ್ಯಕ್ತಿಗಳೂ ಇರುವ ಟ್ರಸ್ಟೀಗಳ ಮಂಡಳಿಯು ಎಲ್ಲ ಎಎಂಸಿಗಳ ನ್ನು ಮೇಲ್ವಿಚಾರಣೆ ನಡೆಸುತ್ತಿರುವುದನ್ನು ಸೆಬಿ ಖಚಿತಪಡಿಸಿಕೊಳ್ಳುತ್ತದೆ. ಈ ಟ್ರಸ್ಟೀಗಳು ಇನ್ನೂ ಒಂದು ಹಂತದ ಸುರಕ್ಷತೆ ಮತ್ತು ಬದ್ಧತೆಯನ್ನು ಖಚಿತಪಡಿಸುತ್ತಾರೆ.

ಎಂದಿಗೂ ಇದನ್ನು ದುರ್ಬಳಕೆ ಮಾಡಿಕೊಳ್ಳಲಾಗದು ಮತ್ತು ಬೇರೆಡೆಗೆ ತಿರುಗಿಸಲಾಗದು ಮತ್ತು ನಿಮ್ಮ ಹಣ ತೆಗೆದುಕೊಂಡು ಯಾರೂ ಓಡಿ ಹೋಗಲಾರರು ಎಂಬುದನ್ನು ಈ ನಿಯಮಗಳು ಮತ್ತು ಸುರಕ್ಷತೆಗಳು ಖಚಿತಪಡಿಸುತ್ತವೆ.

440
ನಾನು ಹೂಡಿಕೆ ಮಾಡಲು ಸಿದ್ಧ