ವಿಳಂಬವಾದ ಹೂಡಿಕೆಯ ವೆಚ್ಚ

ವಿಳಂಬವಾದ ಹೂಡಿಕೆಯ ವೆಚ್ಚ zoom-icon

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ಚಳಿಗಾಲದ ಸಮಯದಲ್ಲಿ ನಿಮ್ಮ ಮನೆಯಲ್ಲಿ ಹಾಳಾಗಿರುವ ಏರ್ ಕಂಡೀಷನರ್ (ಎಸಿ) ಇದೆ ಎಂದು ಊಹಿಸಿಕೊಳ್ಳೋಣ. ಆ ಸಮಯದಲ್ಲಿ ನಿಮಗೆ ಅದು ಅಗತ್ಯವಿಲ್ಲ ಎಂದು ಭಾವಿಸಿ, ಅದರ ರಿಪೇರಿಯನ್ನು ಮುಂದೂಡುತ್ತೀರಿ. ಆದರೆ, ಬೇಸಿಗೆ ಕಾಲ ಬಂದಾಗ, ಬಿಸಿಯನ್ನು ತಾಳಿಕೊಳ್ಳಲು ಸಾಧ್ಯವಾಗುವುದಿಲ್ಲ. ಎಸಿ ರಿಪೇರಿ ಮಾಡಲೇಬೇಕಾಗುತ್ತದೆ. ದುರಾದೃಷ್ಟವಶಾತ್‌, ಇದು ಹೆಚ್ಚು ಬೇಡಿಕೆ ಇರುವ ಸಮಯ. ತಂತ್ರಜ್ಞರನ್ನು ಹುಡುಕುವುದು ಕಷ್ಟಕರವಾಗುತ್ತದೆ. ತಂತ್ರಜ್ಞರು ಕೊನೆಗೂ ಬಂದಾಗ, ರಿಪೇರಿಗೆ ಇನ್ನೊಂದು ವಾರ ಬೇಕಾಗುತ್ತದೆ ಎಂದು ಅವರು ಹೇಳುತ್ತಾರೆ ಮತ್ತು ಅಗತ್ಯ ಮದರ್‌ಬೋರ್ಡ್‌ಗೆ ಹೆಚ್ಚಿನ ಬೇಡಿಕೆ ಇರುವುದರಿಂದ ಅದರ ಖರೀದಿಗೆ ವೆಚ್ಚ ಹೆಚ್ಚಾಗುತ್ತದೆ ಎಂದು ಅವರು ಹೇಳುತ್ತಾರೆ.

ನಿಮ್ಮ ಎಸಿ ರಿಪೇರಿ ಮಾಡಿಸಲು, ನಿಮಗೆ ಅಗತ್ಯವಿರುವ ಸಮಯದವರೆಗೆ ವಿಳಂಬ ಮಾಡಿದ್ದರಿಂದಾಗಿ, ಅದು ನಿಮ್ಮ ಜೇಬಿಗೆ ಭಾರವಾಯಿತು. 

ಹೂಡಿಕೆಯಲ್ಲಿ ವಿಳಂಬದ ವೆಚ್ಚವು ಕೂಡಾ ಇದೇ ರೀತಿ ಕೆಲಸ ಮಾಡುತ್ತದೆ. ನಿಮ್ಮ ಹೂಡಿಕೆಯಲ್ಲಿ ವಿಳಂಬ ಮಾಡುವ ಮೂಲಕ, ನಿಮ್ಮ ಹಣದಿಂದ ಆದಾಯವನ್ನು ಜನರೇಟ್ ಮಾಡುವ ನಿಮ್ಮ ಸಾಮರ್ಥ್ಯದಲ್ಲೂ ವಿಳಂಬ ಉಂಟಾಗಬಹುದು. ಬ್ಯುಸಿನೆಸ್ ಆರಂಭಿಸುವುದು ಅಥವಾ ನಿವೃತ್ತಿಗೆ ಉಳಿತಾಯ ಮಾಡುವುದರಂತಹ ಹೂಡಿಕೆ ಗುರಿಗಳನ್ನು ಸಾಧಿಸುವ ನಿಮ್ಮ ಸಾಮರ್ಥ್ಯವನ್ನೂ ಇದು ಬಾಧಿಸಬಹುದು. ಇದು ಅವಕಾಶಗಳು ತಪ್ಪಿಹೋಗುವುದು ಮತ್ತು ಸಂಭಾವ್ಯ ಲಾಭಗಳನ್ನು ಕಳೆದುಕೊಳ್ಳುವುದಕ್ಕೆ ಕಾರಣವಾಗಬಹುದು.

ವಾಸ್ತವದಲ್ಲಿ ಹೂಡಿಕೆ ವಿಳಂಬದ ವೆಚ್ಚ 

ನೀವು ಹಣಕಾಸು ಗುರಿಯನ್ನು ಹೊಂದಿರಲಿ ಇಲ್ಲದಿರಲಿ, ತಕ್ಷಣವೇ ನೀವು ಉಳಿತಾಯ ಮತ್ತು ಹೂಡಿಕೆಯ ನಿಟ್ಟಿನಲ್ಲಿ ಕೆಲಸ ಮಾಡಲು ಆರಂಭಿಸಬೇಕು. ಹೂಡಿಕೆ ವಿಳಂಬದ ವೆಚ್ಚವು ಗಮನಾರ್ಹವಾಗಿರುತ್ತದೆ. ನಿಮಗೆ ಸಂಚಯದ ಶಕ್ತಿಯ ಬಗ್ಗೆ ತಿಳಿದಿದ್ದರೆ, ನಿಮ್ಮ ಹೂಡಿಕೆಗೆ ಸಮಯವು ತುಂಬಾ ಪ್ರಮಾಣದ ಹಣವನ್ನು ಸೇರಿಸಬಹುದು ಎಂಬುದು ನಿಮಗೆ ತಿಳಿದಿರುತ್ತದೆ. ಒಂದು ಉದಾಹರಣೆಯ ಮೂಲಕ ಇದನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳೋಣ. 

ನಿವೃತ್ತಿಗೆ ಯೋಜನೆ ರೂಪಿಸುವುದು ಅತ್ಯಂತ ನಿರ್ಣಾಯಕ. ಹೀಗಾಗಿ, ನೀವು ಶೀಘ್ರದಲ್ಲೇ ಉಳಿತಾಯವನ್ನು ಆರಂಭಿಸಬೇಕು ಎಂದು ನಿಮಗೆ ತಿಳಿದಿದೆ. ನೀವು 27 ವರ್ಷದವರಾಗಿದ್ದೀರಿ ಮತ್ತು ನಿಮ್ಮ ನಿವೃತ್ತಿ ಬಗ್ಗೆ ಯೋಚಿಸುವುದಕ್ಕೆ ಸಾಕಷ್ಟು ಸಮಯವಿದೆ ಎಂದು ನೀವು ಯೋಚಿಸುತ್ತೀರಿ. ರೂ. 5,000 ಮಾಸಿಕ ಎಸ್‌ಐಪಿ ಅನ್ನು ನೀವು 30ನೇ ವರ್ಷದಲ್ಲಿ ಆರಂಭಿಸುವ ಯೋಜನೆ ಹಾಕುತ್ತೀರಿ. ಆದರೆ, ನೀವು 30 ಕ್ಕೆ ತಲುಪಿದಾಗ, ಹೊಸ ಜವಾಬ್ದಾರಿಗಳು ನಿಮಗೆ ಎದುರಾಗುತ್ತವೆ. ನೀವು ವಿವಾಹವಾಗಿರುತ್ತೀರಿ ಎಂದು ಊಹಿಸೋಣ. ಕೆಲವು ವರ್ಷಗಳವರೆಗೆ ನಿವೃತ್ತಿ ಯೋಜನೆಯನ್ನು ಮುಂದೂಡುತ್ತೀರಿ. 35ನೇ ವರ್ಷದಲ್ಲಿ ಇನ್ನು ಮುಂದೂಡುವುದು ಸರಿಯಲ್ಲ ಎಂದು ಒಂದು ಮ್ಯೂಚುವಲ್ ಫಂಡ್‌ನಲ್ಲಿ ಮಾಸಿಕ ರೂ. 7500 ಹೂಡಿಕೆ ಮಾಡಲು ಆರಂಭಿಸುತ್ತೀರಿ. ಪ್ರತಿ ಸನ್ನಿವೇಶದಲ್ಲೂ ನಿಮ್ಮ ಬಂಡವಾಳ ಹೀಗೆ ಕಾಣಿಸುತ್ತಿರುತ್ತದೆ: 

ವಿವರಗಳು

25 ರಲ್ಲಿ ಆರಂಭಿಸಿದಾಗ

30 ರಲ್ಲಿ ಆರಂಭಿಸಿದಾಗ

35 ರಲ್ಲಿ ಆರಂಭಿಸಿದಾಗ

ನಿವೃತ್ತಿಗೆ ಇರುವ ಸಮಯ (ನೀವು 60 ವರ್ಷಕ್ಕೆ ನಿವೃತ್ತರಾಗುತ್ತೀರಿ ಎಂದು ಊಹಿಸಿದರೆ) (ಎ)

35

30

25

ಪ್ರತಿ ತಿಂಗಳು ಹೂಡಿಕೆ ಮಾಡಿದ ಮೊತ್ತ (ಬಿ)

Rs 5,000

Rs 5,000

Rs 7,500

ಹೂಡಿಕೆಯ ಮೇಲೆ ಊಹಿಸಿದ ರಿಟರ್ನ್‌*

10%

10%

10%

ಹೂಡಿಕೆ ಮಾಡಿದ ಮೊತ್ತ

Rs 21,00,000

Rs 18,00,000

Rs 22,50,000

ರಿಟರ್ನ್‌ಗಳ ಜೊತೆಗೆ ಸಂಚಯಗೊಂಡ ಒಟ್ಟು ಮೊತ್ತ (ರಿಸ್ಕ್‌ಗಳಿಗೆ ಒಳಪಟ್ಟು)

Rs 1,89,83,190

 

Rs 1,13,96,627

Rs 99,51,251

 

ಹೂಡಿಕೆ ವಿಳಂಬದ ವೆಚ್ಚ

-

Rs 41,78,748

Rs 90,31,940

 

*ಈ ಮೇಲಿನ ಲೆಕ್ಕಾಚಾರಗಳು ಚಿತ್ರಣ ಉದ್ದೇಶಗಳಿಗೆ ಮಾತ್ರ. ಹೂಡಿಕೆ ಮಾಡಿದ ಮೊತ್ತವನ್ನು ಎ*ಬಿ*12 ಫಾರ್ಮುಲಾ ಬಳಸಿ ಲೆಕ್ಕ ಮಾಡಲಾಗಿದೆ. ರಿಟರ್ನ್‌ಗಳ ಜೊತೆಗೆ ಸಂಚಯಗೊಂಡ ಒಟ್ಟು ಮೊತ್ತವನ್ನು ಹೂಡಿಕೆ ವಿಳಂಬ ವೆಚ್ಚ ಕ್ಯಾಲಕ್ಯುಲೇಟರ್ ಬಳಸಿ ಲೆಕ್ಕ ಮಾಡಲಾಗಿದೆ. 25ನೇ ವರ್ಷದಿಂದ ನಿರ್ಮಾಣವಾದ ಒಟ್ಟು ಮೊತ್ತದಿಂದ ನಿರ್ದಿಷ್ಟ ವಯಸ್ಸಿನಲ್ಲಿ ಸಂಚಯವಾದ ಒಟ್ಟು ಮೊತ್ತವನ್ನು ಕಳೆಯುವ ಮೂಲಕ ಹೂಡಿಕೆ ವಿಳಂಬ ವೆಚ್ಚವನ್ನು ನಿರ್ಧರಿಸಲಾಗಿದೆ.

ನೀವೇ ನೋಡಬಹುದಾದ ಹಾಗೆ, ನಿಮ್ಮ ಮಾಸಿಕ ಎಸ್‌ಐಪಿಯನ್ನು ನೀವು ಹೆಚ್ಚಿಸಿದರೂ ಕೂಡ ಹೂಡಿಕೆ ವಿಳಂಬದ ವೆಚ್ಚವು ಭಾರಿ ಮೊತ್ತವಾಗಿದೆ. ರೂ. 5,000 ಮೊತ್ತದಲ್ಲಿ 25ನೇ ವರ್ಷದಲ್ಲಿ ಎಸ್‌ಐಪಿ ನೀಡುವ ಅಂತಿಮ ಮೊತ್ತಕ್ಕೆ ಹೋಲಿಸಲು ನೀವು 35ನೇ ವರ್ಷದಲ್ಲಿ ಪ್ರತಿ ತಿಂಗಳು ರೂ. 14,300 ಅನ್ನು ಹೂಡಿಕೆ ಮಾಡಬೇಕಾಗಬಹುದು. ನಿಮ್ಮ ಹೂಡಿಕೆಯನ್ನು ಕೆಲವು ವರ್ಷಗಳವರೆಗೆ ವಿಳಂಬ ಮಾಡಿದ್ದರಿಂದಾಗಿ ಹೊರೆಯಾದಂತಾಗಲಿಲ್ಲವೇ? 

ವಿಳಂಬ ವೆಚ್ಚ ಕ್ಯಾಲಕ್ಯುಲೇಟರ್ ಬಳಸಿಕೊಂಡು, ನಿಮ್ಮ ಹೂಡಿಕೆಯನ್ನು ನೀವು ವಿಳಂಬ ಮಾಡಿದರೆ ನೀವು ಎಷ್ಟು ಕಳೆದುಕೊಳ್ಳುತ್ತೀರಿ ಎಂದು ನೀವು ಅಂದಾಜು ಮಾಡಬಹುದು. 

ಬೇಗ ಹೂಡಿಕೆ ಮಾಡುವುದು ಏಕೆ?

1. ಸಮಯ ನಿಮ್ಮ ಕಡೆ ಇರುತ್ತದೆ
ಬೇಗ ಹೂಡಿಕೆ ಮಾಡುವುದರಿಂದ ನೀವು ಸಮಯದ ಅನುಕೂಲವನ್ನು ಪಡೆಯುತ್ತೀರಿ. ಹೆಚ್ಚು ಕಾಲದವರೆಗೆ ನೀವು ಹೂಡಿಕೆಯನ್ನು ಮಾಡಿದ್ದಷ್ಟೂ ಸಮಯ, ಬೆಳೆಯಲು ಮತ್ತು ರಿಟರ್ನ್‌ಗಳನ್ನು ಗಳಿಸಲು ಅದಕ್ಕೆ ಹೆಚ್ಚು ಸಮಯ ಬೇಕಾಗುತ್ತದೆ. ಅಂದರೆ, ಸಣ್ಣ ಮೊತ್ತವನ್ನಾದರೂ ಬೇಗ ಹೂಡಿಕೆ ಮಾಡಿದಷ್ಟೂ ಕಾಲಾನಂತರದಲ್ಲಿ ಗಮನಾರ್ಹ ಸಂಪತ್ತಾಗುವ ಸಾಧ್ಯತೆ ಹೆಚ್ಚಿರುತ್ತದೆ.

2. ಬಡ್ಡಿ ಸಂಚಯ
ಮೊದಲೇ ಹೂಡಿಕೆ ಮಾಡುವುದರಿಂದ ಸಂಚಯದ ಶಕ್ತಿಯ ಅನುಕೂಲವನ್ನು ನೀವು ಪಡೆಯಬಹುದು. ನಿಮ್ಮ ಹೂಡಿಕೆಯ ಮೇಲಿನ ಗಳಿಕೆಯನ್ನು ಪುನಃ ಹೂಡಿಕೆ ಮಾಡಿದಾಗ ಮತ್ತು ಅವು ಸ್ವತಃ ರಿಟರ್ನ್‌ಗಳನ್ನು ಜನರೇಟ್ ಮಾಡಿದಾಗ ಬಡ್ಡಿ ಸಂಚಯವಾಗುತ್ತದೆ. ಕಾಲಾನಂತರದಲ್ಲಿ, ಸಂಚಯದ ಶಕ್ತಿಯು ನಿಮ್ಮ ಹೂಡಿಕೆಯಲ್ಲಿ ಅಪಾರ ಪ್ರಗತಿಗೆ ಇದು ಕಾರಣವಾಗಬಹುದು. 

3. ಹೆಚ್ಚು ಹೂಡಿಕೆ ಆಯ್ಕೆಗಳು
ಬೇಗ ಹೂಡಿಕೆ ಮಾಡುವುದರಿಂದ ವಿಭಿನ್ನ ಹೂಡಿಕೆ ಆಯ್ಕೆಗಳು ಮತ್ತು ಕಾರ್ಯತಂತ್ರಗಳನ್ನು ನೋಡಲು ನಿಮಗೆ ಹೆಚ್ಚು ಸಮಯ ಸಿಗುತ್ತದೆ. ಒಂದು ಆಯ್ಕೆ ಕೆಲಸ ಮಾಡದಿದ್ದರೆ, ನಿಮ್ಮ ಕಾರ್ಯತಂತ್ರವನ್ನು ನೀವು ಯಾವಾಗ ಬೇಕಾದರೂ ಬದಲಿಸಬಹುದು. 

4. ದೀರ್ಘಕಾಲೀನ ಗುರಿಗಳನ್ನು ಸಾಧಿಸಿ
ಮೊದಲೇ ಹೂಡಿಕೆ ಮಾಡುವುದರಿಂದ, ನಿವೃತ್ತಿ, ಮನೆ ಖರೀದಿ ಅಥವಾ ಮಕ್ಕಳ ಶಿಕ್ಷಣಕ್ಕೆ ಹಣ ನೀಡುವುದು ಇತ್ಯಾದಿ ದೀರ್ಘಕಾಲೀನ ಗುರಿಗಳ ಕಡೆಗೆ ಕೆಲಸ ಮಾಡಲು ನಿಮಗೆ ಸಹಾಯವಾಗುತ್ತದೆ. ನೀವು ಹೂಡಿಕೆಯನ್ನು ಮೊದಲೇ ಆರಂಭಿಸಿದಷ್ಟೂ, ಈ ಗುರಿಗಳನ್ನು ಸಾಧಿಸಲು ಸಂಪನ್ಮೂಲಗಳ ಕ್ರೋಢೀಕರಣ ಮಾಡಲು ನಿಮಗೆ ಹೆಚ್ಚು ಸಮಯ ಇರುತ್ತದೆ.

ತೀರ್ಮಾನ 
ಹೂಡಿಕೆ ವಿಳಂಬದ ವೆಚ್ಚವು ಗಮನಾರ್ಹವಾಗಿರಬಹುದು ಮತ್ತು ನಿಮ್ಮ ದೀರ್ಘಕಾಲೀನ ಹಣಕಾಸು ಗುರಿಗಳ ಮೇಲೆ ಬಾಧಿಸಬಹುದು. ಎಸ್‌ಐಪಿ ಮೂಲಕವಾಗಲೀ ಅಥವಾ ಒಟ್ಟು ಮೊತ್ತದಲ್ಲಾಗಲೀ ಮ್ಯೂಚುವಲ್‌ ಫಂಡ್‌ನಲ್ಲಿ ಹೂಡಿಕೆ ಮಾಡುವುದಾದಲ್ಲಿ, ಎಷ್ಟು ಸಾಧ್ಯವೋ ಅಷ್ಟು ಬೇಗ ಹೂಡಿಕೆಯನ್ನು ಆರಂಭಿಸುವುದು ನಿಮ್ಮ ಗುರಿಗಳನ್ನು ಸಾಧಿಸುವಲ್ಲಿ ಅದು ಸಹಾಯ ಮಾಡುತ್ತದೆ. ಪ್ರಾಡಕ್ಟ್‌/ಸ್ಕೀಮ್‌ ನಿಮಗೆ ಹೊಂದುತ್ತದೆಯೇ ಎಂದು ಕಂಡುಕೊಳ್ಳಲು ಮ್ಯೂಚುವಲ್ ಫಂಡ್‌ ಪರಿಣಿತರ ಸಲಹೆಯನ್ನು ನೀವು ಪಡೆಯಬಹುದು.


ಹಕ್ಕು ನಿರಾಕರಣೆ 

ಮ್ಯೂಚುವಲ್ ಫಂಡ್ ಯೋಜನೆಗಳ ವಿವಿಧ ವರ್ಗಗಳ ಬಗ್ಗೆ ಎಎಂಎಫ್ಐ (AMFI) ವೆಬ್ ಸೈಟ್ ನಲ್ಲಿ ಪ್ರಸಾರವಾದ ಮಾಹಿತಿಯು ಮ್ಯೂಚುವಲ್ ಫಂಡ್ ಗಳ ಬಗ್ಗೆ ಜಾಗೃತಿ ಮೂಡಿಸಲು ಹಣಕಾಸು ಉತ್ಪನ್ನ ವರ್ಗವಾಗಿ ಜಾಗೃತಿ ಮೂಡಿಸಲು ಹೊರತು ಮಾರಾಟ ಪ್ರಚಾರ ಅಥವಾ ವ್ಯವಹಾರದ ಕೋರಿಕೆಗಾಗಿ ಅಲ್ಲ.

ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿ, ಆಂತರಿಕ ಮೂಲಗಳು ಮತ್ತು ವಿಶ್ವಾಸಾರ್ಹವೆಂದು ನಂಬಲಾದ ಇತರ ಮೂರನೇ ಪಕ್ಷದ ಮೂಲಗಳ ಆಧಾರದ ಮೇಲೆ ಎಎಂಎಫ್ಐ ನಲ್ಲಿನ ವಿಷಯವನ್ನು ಸಿದ್ಧಪಡಿಸಿದೆ. ಆದಾಗ್ಯೂ, ಅಂತಹ ಮಾಹಿತಿಯ ನಿಖರತೆಯನ್ನು ಎಎಂಎಫ್ಐ ಖಾತರಿಪಡಿಸುವುದಿಲ್ಲ, ಅದರ ಸಂಪೂರ್ಣತೆಯನ್ನು ಖಾತರಿಪಡಿಸುವುದಿಲ್ಲ, ಅಥವಾ ಅಂತಹ ಮಾಹಿತಿಯನ್ನು ಬದಲಾಯಿಸಲಾಗುವುದಿಲ್ಲ ಎಂದು ಖಾತರಿಪಡಿಸುವುದಿಲ್ಲ.

ಇಲ್ಲಿರುವ ವಿಷಯವು ವೈಯಕ್ತಿಕ ಹೂಡಿಕೆದಾರರ ಉದ್ದೇಶಗಳು, ಅಪಾಯದ ಸಾಧ್ಯತೆ ಅಥವಾ ಹಣಕಾಸಿನ ಅಗತ್ಯಗಳು ಅಥವಾ ಸಂದರ್ಭಗಳು ಅಥವಾ ಇಲ್ಲಿ ವಿವರಿಸಿದ ಮ್ಯೂಚುವಲ್ ಫಂಡ್ ಉತ್ಪನ್ನಗಳ ಸೂಕ್ತತೆಯನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಆದ್ದರಿಂದ, ಹೂಡಿಕೆದಾರರು ಈ ನಿಟ್ಟಿನಲ್ಲಿ ಹೂಡಿಕೆ ಸಲಹೆಗಾಗಿ ತಮ್ಮ ವೃತ್ತಿಪರ ಹೂಡಿಕೆ ಸಲಹೆಗಾರ/ ಸಮಾಲೋಚಕ/ ತೆರಿಗೆ ಸಲಹೆಗಾರರನ್ನು ಸಂಪರ್ಕಿಸಲು ಸೂಚಿಸಲಾಗಿದೆ. 

ಮ್ಯೂಚುವಲ್ ಫಂಡ್ ಯೋಜನೆಯು ಠೇವಣಿ ಉತ್ಪನ್ನವಲ್ಲ ಮತ್ತು ಇದು ಮ್ಯೂಚುವಲ್ ಫಂಡ್ ಅಥವಾ ಅದರ ಎಎಂಸಿ (AMC) ಯಿಂದ ಬಾಧ್ಯತೆ ಅಥವಾ ಖಾತರಿ ಅಥವಾ ವಿಮೆಯಾಗಿಲ್ಲ. ಅಂತರ್ಗತ ಹೂಡಿಕೆಗಳ ಸ್ವರೂಪದಿಂದಾಗಿ, ಮ್ಯೂಚುವಲ್ ಫಂಡ್ ಉತ್ಪನ್ನದ ಆದಾಯ ಅಥವಾ ಸಂಭಾವ್ಯ ಆದಾಯವನ್ನು ಖಾತರಿಪಡಿಸಲಾಗುವುದಿಲ್ಲ. ಐತಿಹಾಸಿಕ ಕಾರ್ಯಕ್ಷಮತೆಯನ್ನು ಪ್ರಸ್ತುತಪಡಿಸಿದಾಗ, ಸಂಪೂರ್ಣವಾಗಿ ಉಲ್ಲೇಖ ಉದ್ದೇಶಗಳಿಗಾಗಿ ಮತ್ತು ಭವಿಷ್ಯದ ಫಲಿತಾಂಶಗಳ ಖಾತರಿಯಲ್ಲ.

ಮ್ಯೂಚುಯಲ್ ಫಂಡ್ ಹೂಡಿಕೆಗಳು ಮಾರುಕಟ್ಟೆ ಅಪಾಯಗಳಿಗೆ ಒಳಪಟ್ಟಿರುತ್ತವೆ, ಎಲ್ಲಾ ಯೋಜನೆ ಸಂಬಂಧಿತ ದಾಖಲಾತಿಗಳನ್ನು ಜಾಗ್ರತೆಯಿಂದ ಓದಿರಿ.

285
ನಾನು ಹೂಡಿಕೆ ಮಾಡಲು ಸಿದ್ಧ