ಮ್ಯೂಚುವಲ್ ಫಂಡ್ನಲ್ಲಿ ಡೈರೆಕ್ಟ್ ಮತ್ತು ರೆಗ್ಯುಲರ್ ಪ್ಲಾನ್ ಪೈಕಿ ಒಂದನ್ನು ಹೇಗೆ ಆಯ್ಕೆ ಮಾಡುವುದು?
55 ಓದಲು ಸೆಕೆಂಡುಗಳು

ವಿತರಕರಂತಹ ಮಧ್ಯವರ್ತಿಗಳ ಮೂಲಕ ನೀವು ಮ್ಯೂಚುವಲ್ ಫಂಡ್ನಲ್ಲಿ ಹೂಡಿಕೆ ಮಾಡಿದಾಗ, ಸ್ಕೀಮ್ನ ರೆಗ್ಯುಲರ್ ಪ್ಲಾನ್ನಲ್ಲಿ ಹೂಡಿಕೆ ಮಾಡುತ್ತೀರಿ. ಮಧ್ಯವರ್ತಿಗಳ ಮೂಲಕ ಹೂಡಿಕೆ ಮಾಡುವುದರಲ್ಲಿ ಕೆಲವು ಅನುಕೂಲಗಳಿವೆ. ನಿಮ್ಮ ವಿತರಕರು ನಿಮಗೆ ನಿಮ್ಮ ಅಲ್ಪ ಮತ್ತು ದೀರ್ಘಾವಧಿ ಗುರಿಗಳಿಗೆ ಸೂಕ್ತವಾದ ಸ್ಕೀಮ್ಗಳ ಆಯ್ಕೆಯಲ್ಲಿ ಸಹಾಯ ಮಾಡಬಹುದು. ಕೆವೈಸಿ, ಎಸ್ಐಪಿ/ಎಸ್ಡಬ್ಲ್ಯೂಪಿ/ಎಸ್ಟಿಪಿ ಸೆಟಪ್ ಮಾಡುವುದು, ನೀವು ಮೊದಲ ಬಾರಿಯ ಹೂಡಿಕೆದಾರರಾದ ನಮೂನೆಗಳನ್ನು ಭರ್ತಿ ಮಾಡುವಂತಹ ಕೆಲಸಗಳನ್ನು ಪೂರ್ಣಗೊಳಿಸಲು ವಿತರಕರು ಸಹಾಯ ಮಾಡುತ್ತಾರೆ. ನಿಮ್ಮ ಹಣಕಾಸು ಗುರಿಗಳು ಬದಲಾದರೆ ಅಥವಾ ಲಾಭ ಮಾಡುವುದಕ್ಕಾಗಿ ಅಥವಾ ನಿಯೋಜಿತ ಸ್ವತ್ತು ನಿಯೋಜನೆಯನ್ನು ನಿರ್ವಹಿಸುವುದಕ್ಕಾಗಿ ನಿಮ್ಮ ಪೋರ್ಟ್ಫೋಲಿಯೋವನ್ನು ಮರುಸಮತೋಲನಗೊಳಿಸುವ ಪ್ರಕ್ರಿಯೆಯಲ್ಲಿ ನಿಮ್ಮ ಪೋರ್ಟ್ಫೋಲಿಯೋ ಹೊಂದಾಣಿಕೆ ಮಾಡಲು ವಿತರಕರು ಸಹಾಯ ಮಾಡುತ್ತಾರೆ. ನಿಮ್ಮ ಪೋರ್ಟ್ಫೋಲಿಯೋವನ್ನು ಕಾಲಕಾಲಕ್ಕೆ ಅಪ್ಡೇಟ್ ಮಾಡುವುದು, ನಿಮ್ಮ ವೈಯಕ್ತಿಕ ವಿವರಗಳನ್ನು ಅಗತ್ಯವಿದ್ದಾಗ ಬದಲಾವಣೆ ಮಾಡುವುದು, ಉದಾ., ವಿಳಾಸ, ನಾಮಿನಿ ಇತ್ಯಾದಿ ಬದಲಾವಣೆ ಸೇವೆಗಳನ್ನೂ ಕೂಡ ಮಧ್ಯವರ್ತಿಗಳು ಒದಗಿಸುತ್ತಾರೆ.
ಆದರೆ, ಹಣಕಾಸು ಮಾರ್ಕೆಟ್ಗಳು, ಲಭ್ಯ ಇರುವ ವಿಭಿನ್ನ ರೀತಿಯ ಮ್ಯೂಚುವಲ್ ಫಂಡ್ ಸ್ಕೀಮ್ಗಳು, ಸ್ಕೀಮ್ ಕಾರ್ಯಕ್ಷಮತೆಯನ್ನು ಹೇಗೆ ಹೋಲಿಕೆ ಮಾಡುವುದು, ಹೂಡಿಕೆ ಉದ್ದೇಶಗಳನ್ನು ಅರ್ಥ ಮಾಡಿಕೊಳ್ಳುವುದು, ರಿಸ್ಕ್ ಅಂಶಗಳು ಮತ್ತು ಫಂಡ್ಗಳ ಪೋರ್ಟ್ಫೋಲಿಯೋ, ನಿಮ್ಮ ಹಣಕಾಸು ಗುರಿಗಳಿಗೆ ಯಾವ ವಿಧದ ಫಂಡ್ ಸೂಕ್ತವಾಗುತ್ತದೆ ಎಂಬ ತಿಳಿವಳಿಕೆ ನಿಮಗೆ ಇದ್ದರೆ ಡೈರೆಕ್ಟ್ ಪ್ಲಾನ್ನಲ್ಲಿ ಹೂಡಿಕೆ ಮಾಡುವುದು ನಿಮಗೆ ಅನುಕೂಲಕರವಾದೀತು. ಆನ್ಲೈನ್ನಲ್ಲಿ ಹೂಡಿಕೆ ಮಾಡುವುದು ನಿಮಗೆ ಅನುಕೂಲಕರವಾಗಿದ್ದರೆ, ಕೆವೈಸಿ ಮಾಡುವುದು ಮತ್ತು ಎಸ್ಐಪಿಗೆ ಇಸಿಎಸ್ ಡೆಬಿಟ್ ಅನ್ನು ಸೆಟಪ್ ಮಾಡುವುದರಿಂದ ಮ್ಯೂಚುವಲ್ ಫಂಡ್ನಲ್ಲಿ ನೇರವಾಗಿ ಹೂಡಿಕೆ ಮಾಡುವುದನ್ನು ಪರಿಗಣಿಸಬಹುದು.