ಇತರ ಮ್ಯೂಚುವಲ್‌ಫಂಡ್‌ಗಳಿಗಿಂತ ಇಂಡೆಕ್ಸ್ ಫಂಡ್‌ಗಳು ಹೇಗೆ ವಿಭಿನ್ನವಾಗಿದೆ?

Video

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ಮ್ಯೂಚುವಲ್‌ ಫಂಡ್‌ ಮತ್ತು ಇಂಡೆಕ್ಸ್‌ ಫಂಡ್‌ಗಳು ವಿವಿಧ ಸ್ಟಾಕ್‌ಗಳಲ್ಲಿ ಹೂಡಿಕೆ ಮಾಡುವ ಮೂಲಕ ವೈವಿಧ್ಯತೆಯನ್ನು ಒದಗಿಸುತ್ತದೆ. ತನ್ನ ಹೂಡಿಕೆ ಉದ್ದೇಶಕ್ಕೆ ಅನುಗುಣವಾಗಿ ರಿಟರ್ನ್ಸ್ ಅನ್ನು ಜನರೇಟ್ ಮಾಡುವ ಸ್ಟಾಕ್‌ಗಳನ್ನು ಆಯ್ಕೆ ಮಾಡುವ ಫ್ಲೆಕ್ಸಿಬಿಲಿಟಿಯನ್ನು ಮ್ಯೂಚುವಲ್‌ ಫಂಡ್‌ಗಳು ಹೊಂದಿದ್ದರೂ, ಇಂಡೆಕ್ಸ್‌ ಫಂಡ್‌ಗಳು ಒಂದು ನಿರ್ದಿಷ್ಟ ಇಂಡೆಕ್ಸ್‌ಅನ್ನು ಟ್ರ್ಯಾಕ್ ಮಾಡುತ್ತವೆ. ಹೀಗಾಗಿ, ಇಂಡೆಕ್ಸ್‌ನಲ್ಲಿ ಇರುವ ಸ್ಟಾಕ್‌ಗಳಲ್ಲೇ ಇಂಡೆಕ್ಸ್ ಫಂಡ್‌ಗಳು ಹೂಡಿಕೆ ಮಾಡುತ್ತವೆ. ತಮ್ಮ ಪೋರ್ಟ್‌ಫೋಲಿಯೋಗೆ ಸ್ಟಾಕ್‌ಗಳನ್ನು ಆಯ್ಕೆ ಮಾಡುವಲ್ಲಿ ಸಕ್ರಿಯ ನಿರ್ಧಾರವನ್ನು ಇಂಡೆಕ್ಸ್ ಫಂಡ್‌ಗಳು ತೆಗೆದುಕೊಳ್ಳುವುದಿಲ್ಲವಾದ್ದರಿಂದ, ಅವುಗಳನ್ನು ಪ್ಯಾಸಿವ್ ಆಗಿ ನಿರ್ವಹಿಸುವ ಫಂಡ್‌ಗಳು ಎಂದು ಕರೆಯಲಾಗುತ್ತದೆ.

ಇಂಡೆಕ್ಸ್‌ ಫಂಡ್‌ಗಳು ಸರಾಸರಿ ಮಾರ್ಕೆಟ್‌ ರಿಟರ್ನ್‌ ಅನ್ನು ಜನರೇಟ್ ಮಾಡಿದರೆ, ಸಕ್ರಿಯವಾಗಿ ನಿರ್ವಹಿಸಲ್ಪಡುವ ಮ್ಯೂಚುವಲ್‌ ಫಂಡ್‌ಗಳು, ತಮ್ಮ ಪೋರ್ಟ್‌ಫೋಲಿಯೋಗೆ ಸ್ಟಾಕ್ ಆಯ್ಕೆಯಲ್ಲಿ ಸಕ್ರಿಯವಾಗಿರುವ ಮೂಲಕ ಆಲ್ಫಾ ಜನರೇಟ್ (ತಮ್ಮ ಬೆಂಚ್‌ಮಾರ್ಕ್‌ ರಿಟರ್ನ್‌ಗಿಂತ ಹೆಚ್ಚಿನ ರಿಟರ್ನ್‌) ಮಾಡುವ ಉದ್ದೇಶವನ್ನು ಹೊಂದಿರುತ್ತವೆ. ಇಂಡೆಕ್ಸ್ ಅನ್ನು ಅನುಸರಿಸುವ ಮತ್ತು ತಮ್ಮ ಇಂಡೆಕ್ಸ್‌ಗೆ ಅನುಗುಣವಾಗಿ ರಿಟರ್ನ್ ಜನರೇಟ್ ಮಾಡುವ ಇಂಡೆಕ್ಸ್ ಫಂಡ್ಸ್‌ಗೆ ಹೋಲಿಸಿದರೆ ಅಧಿಕ ವೆಚ್ಚ ರಿಸ್ಕ್ ಅನ್ನೂ ಅಧಿಕ ರಿಟರ್ನ್ ನಿರೀಕ್ಷೆಯು ಹೊಂದಿರುತ್ತದೆ.

ಸಕ್ರಿಯವಾಗಿ ನಿರ್ವಹಿಸಲ್ಪಡುವ ಫಂಡ್‌ಗಳು ಅಧಿಕ ಮ್ಯಾನೇಜ್‌ಮೆಂಟ್‌ ಫೀಗಳನ್ನು ಹೊಂದಿರುತ್ತವೆ. ಹೀಗಾಗಿ ಎಕ್ಸ್‌ಪೆನ್ಸ್‌ ರೇಶಿಯೋ ಕೂಡ ಹೆಚ್ಚಿರುತ್ತದೆ. ಇವು ಫಂಡ್ ಮ್ಯಾನೇಜರ್‌ಗಳಿಗೆ ಹೆಚ್ಚು ಶುಲ್ಕವನ್ನೂ ಪಾವತಿ ಮಾಡಬೇಕಾಗುತ್ತದೆ. ಈ ಫಂಡ್‌ಗಳು ಸಕ್ರಿಯ ಟ್ರೇಡಿಂಗ್‌ನಿಂದಾಗಿ ಗಮನಾರ್ಹ ವಹಿವಾಟು ವೆಚ್ಚವನ್ನೂ ಭರಿಸುತ್ತವೆ. ಆದರೆ ಇಂಡೆಕ್ಸ್ ಫಂಡ್‌ಗಳು ತಮ್ಮ ಪೋರ್ಟ್‌ಫೋಲಿಯೋದಲ್ಲಿ ಕಡಿಮೆ ವಹಿವಾಟುಗಳನ್ನು ಹೊಂದಿರುತ್ತವೆ. ಇದರಿಂದಾಗಿ ಮ್ಯೂಚುವಲ್‌ ಫಂಡ್‌ಗಳಿಗಿಂತ ಇಂಡೆಕ್ಸ್ ಫಂಡ್‌ಗಳು ಹೆಚ್ಚು ತೆರಿಗೆ ದಕ್ಷವಾಗುತ್ತವೆ. ಸಕ್ರಿಯವಾಗಿ ನಿರ್ವಹಿಸಲ್ಪಡುವ ಮ್ಯೂಚುವಲ್‌ ಫಂಡ್‌ಗಳು ಲಾಭ ಮಾಡಿಕೊಳ್ಳಲು ತಮ್ಮ ಪೋರ್ಟ್‌ಫೋಲಿಯೋದಲ್ಲಿನ ಸೆಕ್ಯುರಿಟಿಗಳನ್ನು ಮಾರಾಟ ಮಾಡಿ ಕ್ಯಾಪಿಟಲ್ ಗೇನ್ಸ್ ಮಾಡುತ್ತವೆ. ಈ ಗಳಿಕೆಯನ್ನು ಹೂಡಿಕೆದಾರರಿಗೆ ಸಾಗಿಸಿದಾಗ ಅವರ ಕ್ಯಾಪಿಟಲ್ ಗೇನ್ಸ್ ತೆರಿಗೆ ಬಾಧ್ಯತೆ ಹೆಚ್ಚುತ್ತದೆ.

436
ನಾನು ಹೂಡಿಕೆ ಮಾಡಲು ಸಿದ್ಧ